ಚಳ್ಳಕೆರೆ
ಮನುಷ್ಯನ ಪ್ರತಿಯೊಂದು ಅಂಗಾಗಗಳು ಉತ್ತಮವಾಗಿ ಕಾರ್ಯನಿರ್ವಹಿಸಿದಲ್ಲಿ ಮಾತ್ರ ಬದುಕು ಸಾರ್ಥಕವೆನ್ನಿಸುತ್ತದೆ. ಯಾವುದೇ ಅಂಗ ನಿಷ್ಕ್ರೀಯವಾದರೆ ತೊಂದರೆ ಅನುಭವಿಸಬೇಕಾಗುತ್ತದೆ. ವಿಶೇಷವಾಗಿ ಪ್ರತಿಯೊಬ್ಬನೂ ಕ್ರಿಯಾಶೀಲ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ದೃಷ್ಠಿಯೇ ಮುಖ್ಯ ಕಾರಣವಾಗುತ್ತದೆ. ಅದ್ದರಿಂದ ಕಣ್ಣಿನ ಬಗ್ಗೆ ಪ್ರತಿಯೊಬ್ಬರೂ ಹೆಚ್ಚು ಜಾಗೃತೆ ವಹಿಸಬೇಕು ಎಂದು ದೃಷ್ಠಿ ಕಣ್ಣಿನ ಆಸ್ಪತ್ರೆಯ ಖ್ಯಾತ ವೈದ್ಯ ಡಾ.ಶಂಕರ್ ತಿಳಿಸಿದರು.
ಅವರು, ಬುಧವಾರ ಇಲ್ಲಿನ ಆಕ್ಸಿಸ್ ಬ್ಯಾಂಕ್ ಏರ್ಪಡಿಸಿದ್ದ ಉಚಿತ ನೇತ್ರ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಕಣ್ಣು ದೇಹದ ಪ್ರಮುಖ ಅಂಗವಾಗಿದೆ. ಪ್ರತಿಯೊಬ್ಬರ ಬದುಕಲ್ಲೂ ಬೆಳಕು ನೀಡುವುದೇ ಕಣ್ಣು. ದೃಷ್ಠಿ ಹೀನರಾಗಿ ಬದುಕುವುದು ಕಷ್ಟಕರ. ಅದ್ದರಿಂದ ದೇವರು ನೀಡಿರುವ ಈ ಸೌಭಾಗ್ಯವನ್ನು ಸದಾ ಜಾಗೃತಿಯಿಂದ ಕಾಪಾಡಿಕೊಳ್ಳಬೇಕು. ಕಣ್ಣಿಗೆ ಸಂಬಂಧಪಟ್ಟಂತೆ ಯಾವುದೇ ರೀತಿಯ ತೊಂದರೆ ಇದ್ದಲ್ಲಿ ಇಂತಹ ಉಚಿತ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ತಪಾಸಣೆ ಮಾಡಿಕೊಂಡು ಸೂಕ್ತ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದರು.
ಪ್ರಾರಂಭದಲ್ಲಿ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಬ್ಯಾಂಕ್‍ನ ವ್ಯವಸ್ಥಾಪಕ ಇಂದುಶೇಖರ್, ಬ್ಯಾಂಕ್‍ಗಳು ಎಂದರೆ ಕೇವಲ ವ್ಯವಹಾರವನ್ನು ಮಾಡುವ ಮೂಲಕ ಆರ್ಥಿಕ ಸಬಲತೆಯನ್ನು ಸಾಧಿಸುತ್ತವೆ ಎಂಬ ಅಭಿಪ್ರಾಯವಿದೆ. ಆದರೆ, ಆಕ್ಸಿಸ್ ಬ್ಯಾಂಕ್ ಪ್ರತಿವರ್ಷವೂ ಇಂತಹ ಶಿಬಿರ ಏರ್ಪಡಿಸಿ ಸಾರ್ವಜನಿಕರಿಗೆ ಈ ಮೂಲಕ ಸಹಾಯ ಮಾಡುತ್ತದೆ. ಇಂದು ನಡೆಸ ಉಚಿತ ಕಣ್ಣಿನ ಶಿಬಿರದಲ್ಲಿ 250 ಹೆಚ್ಚು ಜನರು ಆಗಮಿಸಿ ತಪಾಸಣೆಗೆ ಒಳಗಾಗಿದ್ಧಾರೆಂದರು.
ಈ ಸಂದರ್ಭದಲ್ಲಿ ಡಾ.ಲಕ್ಷ್ಮಿ, ಬ್ಯಾಂಕ್ ಸಿಬ್ಬಂದಿಗಳಾದ ವಿಜಯಕುಮಾರ್, ಶಿವಪ್ರಸಾದ್, ಮಂಜುನಾಥ, ಪ್ರವೀಣ್, ಮಧು, ಸಿದ್ದೇಶ್, ಬಸವರಾಜು ಎಂಎನ್‍ಸಿಎಲ್ ಮಾರುಕಟ್ಟೆ ಮುಖ್ಯಸ್ಥ ಜಿ.ಗೋವಿಂದನಾಯ್ಕ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








