ಶೇಕಡ 2030 ರಷ್ಟು ಅಕ್ರಮ ಆಸ್ತಿ ಪತ್ತೆ.
ಬೆಂಗಳೂರು : ಶಾಸಕ ಜಮೀರ್ ಅಹ್ಮದ್ ಕೋಟೆಗೆ ಲಗ್ಗೆ ಇಟ್ಟ ಎಸಿಬಿ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದೆ. ಈ ಮಧ್ಯೆ ಎಸಿಬಿ ಅಧಿಕೃತ ಪ್ರಕಟಣೆಯನ್ನು ಹೊರಡಿಸಿದ್ದು, ಅಧಿಕ ಅಕ್ರಮ ಆಸ್ತಿ ಸಂಪಾದನೆಯ ಇಡಿ ರಿಪೋರ್ಟ್ ಮಾಹಿತಿ ನೀಡಿದೆ. ಹೀಗಿರುವಾಗ ಜಮೀರ್ ಹದಿನಾರು ವರ್ಷಗಳ ವ್ಯವಹಾರದ ಆದಾಯದ ಮೂಲಕ್ಕೆ ಕೈ ಹಾಕಿದದ್ದಾರೆ.
ಎಸಬಿ ವರದಿಯ ಅಂಶಗಳು :
ಆಗಸ್ಟ್ 6, 2021ರಂದು ಇ ಡಿ ಅಧಿಕಾರಿಗಳು ಶಾಸಕ ಜಮೀರ್ ಅಹ್ಮದ್ ಗೆ ಸೇರಿದ ನಾಲ್ಕು ಕಡೆ ಏಕ ಕಾಲದಲ್ಲಿ ದಾಳಿ ಮಾಡಿದ್ದರು, ಈ ವೇಳೆ ಆದಾಯಕ್ಕಿಂತ ಅಧಿಕ ಆಸ್ತಿ ಮಾಡಿರೋದು ಪತ್ತೆಯಾಗಿದೆ. 87 ಕೋಟಿ 44 ಲಕ್ಷ 05 ಸಾವಿರದ 57 ರೂ (ಶೇಕಡ 2030) ರಷ್ಟು ಅಕ್ರಮ ಆಸ್ತಿ ಪತ್ತೆಯಾಗಿದ್ದ ಬಗ್ಗೆ ಇ ಡಿ ಅಧಿಕಾರಿಗಳು ಎಸಿಬಿಗೆ ವರದಿ ಕೊಟ್ಟು ತನಿಖೆ ಮಾಡಲು ಸೂಚಿಸಿದ್ದ ಬಗ್ಗೆ ಪ್ರಕಟಣೆಯನ್ನು ಹೊರಡಿಸಿದೆ.
ಅಕ್ರಮ ಆಸ್ತಿ ಬಗ್ಗೆ ಇ.ಡಿ ಅಧಿಕಾರಿಗಳು ವರದಿ :
ಇ ಡಿ ಅಧಿಕಾರಿಗಳು ಇದನ್ನೇ ಆಧಾರವಾಗಿಟ್ಟುಕೊಂಡು ಕೆಲವು ಬಹುಮುಖ್ಯ ಅಂಶಗಳನ್ನ ಉಲ್ಲೇಖ ಮಾಡಿದ್ದು, 2005 ರಿಂದ 2021 ರವರೆಗೆ, ಅವರ ಆದಾಯ, ತೆರಿಗೆ, ಆದಾಯದ ಮೂಲಗಳ ತನಿಖೆ ನಡೆಸಲು ಜಾರಿ ನಿರ್ದೇಶನಾಲಯ ಅಧಿಕಾರಿಗಳಿಗೆ ಸೂಚನೆ ನೀಡಿದೆ.
16ವರ್ಷಗಳ ಆದಾಯ, ತೆರೆಗೆ ಬಗ್ಗೆ ತನಿಖೆ :
ಶಾಸಕ ಜಮೀರ್ ಅಹ್ಮದ್ ಅವರ ಸುಮಾರು 16 ವರ್ಷಗಳ ಆದಾಯ ಹಾಗೂ ತೆರಿಗೆ ಪಾವತಿಯ ಬಗ್ಗೆ ತನಿಖೆ ನಡೆಸಲು ಎಸಿಬಿ ಅಧಿಕಾರಿಗಖು ಮುಂದಾಗಿದ್ದಾರೆ. ಇ ಡಿ ಅಧಿಕಾರಿಗಳ ವರದಿ ಇಟ್ಟುಕೊಂಡು ಎಸಿಬಿ ತನಿಖೆ ಆರಂಭಿಸಿದ್ದು, ಪ್ರತಿ ವರ್ಷ ತೆರಿಗೆ ಪಾವತಿ ಮಾಡಿದ್ದೇನೆ, ಎಲ್ಲ ದಾಖಲೆಗಳನ್ನ ಒದಗಿಸುತ್ತೇನೆ ಎಂದು ಜಮೀರ್ ಎಸಿಬಿ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ದಾಖಲೆಗಳ ಪರಿಶೀಲನೆ :
ಇದೀಗ ಶಾಸಕ ಜಮೀರ್ ಅಹಮದ್ ಮನೆಯಲ್ಲಿ ಹಕವು ಕಡತಗಳು, ಆಸ್ತಿ ಪತ್ರಗಳು, ಆದಾಯ ವಿವರಗಳನ್ನ ವಶಕ್ಕೆ ಪಡೆದು ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.
ಜಮೀರ್ ಮನೆ ಮೌಲ್ಯ ಮಾಡಲು ಪಿಡಬ್ಲ್ಯೂ ಅಧಿಕಾರಿಗಳ ಬಳಕೆ :
ದಾಳಿ ವೇಳೆ ಮನೆ ಮೌಲ್ಯಮಾಪನ ಮಾಡಲು ಮುಂದಾಗಿದ್ದ ಎಸಿಬಿ ಅಧಿಕಾರಿಗಳಿಗೆ ವಸ್ತುಗಳು ನೋಡಿ ಲೆಕ್ಕ ಮಾಡಲು ಕಷ್ಟ ಸಾಧ್ಯವಾಗಿದೆ. ಹಾಗಾಗಿ ಜಮೀರ್ ಮನೆ ಮೌಲ್ಯ ಮಾಪನ ಮಾಡಲು ಪಿಡಬ್ಲ್ಯಡಿ ಇಲಾಖೆ ಇಂಜಿನಿಯರ್ ಗಳನ್ನ ಬಳಸಿಕೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ. ಪಿಡಬ್ಲ್ಯಡಿ ತಜ್ಞ ಇಂಜಿನಿಯರ್ ಗಳ ತಂಡದಿಂದ ಮನೆಯನ್ನು ಸಂಪೂರ್ಣ ಮೌಲ್ಯ ಮಾಪನ ಮಾಡಿ, ವರದಿ ಪಡೆದು ಮುಂದಿನ ತನಿಖೆ ನಡೆಸಲು ಸಿದ್ದತೆ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮುಂದುವರೆದ ಎಸಿಬಿ ತನಿಖೆ :
ಶಾಸಕ ಜಮೀರ್ ಅಹ್ಮದ್ ಅವರ ಮೇಲೆ ಅಕ್ರಮ ಆಸ್ತಿಗಳಿಕೆಯ ಪ್ರಕರಣ ದಾಖಲಿಸಿಕೊಂಡು, ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ. ಸದ್ಯ ಪ್ರಕರಣದ ಸಂಬಂಧ ಎಸಿಬಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.