ಬೆಂಗಳೂರು
ಬರುವ ಲೋಕಸಭೆ ಚುನಾವಣೆಯ ಹಿನ್ನಲೆಯಲ್ಲಿ ಮದ್ಯ ದಾಸ್ತಾನು ಮಾರಾಟ ಸಾಗಣೆ ವಿತರಣೆ ಸೇರಿದಂತೆ ಅಕ್ರಮಗಳನ್ನು ತಡೆಗಟ್ಟಲು ರಾಜ್ಯ ಅಬಕಾರಿ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ.
ಅಕ್ರಮ ಮದ್ಯ ದಾಸ್ತಾನು ಮಾರಾಟ ಸಾಗಣೆ ವಿತರಣೆಗೆ ಸಂಬಂಧಿಸಿದ ಅಬಕಾರಿ ಅಕ್ರಮಗಳ ಬಗ್ಗೆ ಸಾರ್ವಜನಿಕರು ದೂರು ನೀಡಲು ಅನುಕೂಲವಾಗುವಂತೆ ಟೋಲ್ ಫ್ರೀ ನಂಬರ್‍ನ್ನು ಆರಂಭಿಸಿ ಚುನಾವಣೆಯಲ್ಲಿ ಮದ್ಯ ಹಂಚಿಕೆಯ ಲಾಭ ಪಡೆದುಕೊಳ್ಳಲು ಹೊಂಚು ಹಾಕಿದ್ದ ರಾಜಕಾರಣಿಗಳಿಗೆ ಬಿಸಿ ಮುಟ್ಟಿಸಿದೆ.
ಬೆಂಗಳೂರಿನ ಶಾಂತಿನಗರದ ರಾಜ್ಯ ಅಬಕಾರಿ ಕೇಂದ್ರ ಕಚೇರಿಯಲ್ಲಿ ಟೋಲ್ ಫ್ರೀ ನಂಬರಿನ ದರವಾಣಿ ಕೇಂದ್ರ ತೆರೆಯಲಾಗಿದ್ದು ಸಾರ್ವಜನಿಕರು ಉಚಿತವಾಗಿರುವ 1-800-425-2550 ಈ ದೂರವಾಣಿಗೆ ಕರೆ ಮಾಡಿ ದೂರು ನೀಡಿದರೆ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಅಕ್ರಮ ಗಳನ್ನು ತಡೆಗಟ್ಟುತ್ತಾರೆ
ಅಬಕಾರಿ ಅಕ್ರಮಗಳ ಬಗ್ಗೆ ದೂರು ಸ್ವೀಕರಿಸಲು ಪ್ರತ್ಯೇಕ ಅಧಿಕಾರಿಗಳ ತಂಡವನ್ನೇ ನಿಯೋಜಿಸಲಾಹಿದ್ದು ದಿನದ 24 ಗಂಟೆಯೂ ವಾರದ ರಜೆ ಇಲ್ಕದೆ ವಾರದಲ್ಲಿ ಏಳು ದಿನವೂ ಇಲ್ಲಿ ದೂರುಗಳನ್ನ ಸಂಗ್ರಹಿಸಲಾಗುತ್ತದೆ.ಕೇಂದ್ರ ಚುನಾವಣೆ ಆಯೋಗವು ದಿನಾಂಕ ಪ್ರಕಟಿಸುವ ಮುನ್ನವೇ ಅಬಕಾರಿ ಅಕ್ರಮ ತಡೆಗಟ್ಟಲು ಮುಂದಾಗಿರುವ ಈ ಕ್ರಮ ಲೋಕಸಭೆ ಚುನಾವಣೆಯಲ್ಲಿ ಮದ್ಯದ ಹೊಳೆ ಹರಿಯುವುದು ಅಷ್ಟು ಸುಲಭವಿಲ್ಲ ಎನ್ನುವ ಸಂದೇಶವನ್ನ ರಾಜಕಾರಣಿಗಳಿಗೆ ಮತ್ತು ಮದ್ಯವನ್ನು ಅಪೇಕ್ಷಿಸುವ ಮತದಾರರಿಗೆ ನೀಡಿದೆ.