ತುರುವೇಕೆರೆ
ಪಟ್ಟಣ ಬೆಳೆದಂತೆಲ್ಲಾ ಸಾರ್ವಜನಿಕರ ಅಗತ್ಯಕ್ಕನುಗುಣವಾಗಿ ಹೆಚ್ಚಿನ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ಶಾಸಕ ಮಸಾಲಜಯರಾಮ್ ತಿಳಿಸಿದರು.
ಪಟ್ಟಣದ ಹಳೇ ಬಸ್‍ನಿಲ್ದಾಣದ ಹಿಂಭಾಗದಲ್ಲಿ ಸ್ವಚ್ಛ ಭಾರತ್ ಅಭಿಯಾನ ಯೋಜನೆಯಡಿಯಲ್ಲಿ ಶುಚಿ ಇಂಟರ್ ನ್ಯಾಷನಲ್ ವತಿಯಿಂದ ಸುಮಾರು 10 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಸಾರ್ವಜನಿಕರ ಶೌಚಾಲಯವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಪಟ್ಟಣದ ಸೌಂದರ್ಯವಾಗಿ ಇಡಲು ಸಾರ್ವಜನಿಕರು ಸಹಕಾರ ಅಗತ್ಯವಿದೆ, ಜನರು ಎಲ್ಲೆಂದರಲ್ಲಿ ಖಾಲಿ ನಿವೇಶನ, ಸರ್ಕಾರಿ ಗೋಡೆಗಳನ್ನೆ ಶೌಚಾಲಯಗಳನ್ನಾಗಿ ಮಾಡಿಕೊಂಡು ಸ್ವಚ್ಛತೆ ಕಾಪಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಹೆಚ್ಚು ಜನನಿಬಿಡ ಪ್ರದೇಶದಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗಿದ್ದು ಸಾರ್ವಜನಿಕರು ಸದುಪಯೋಗ ಮಾಡಿಕೊಳ್ಳವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಲಚ್ಚಿಬಾಬು, ಉಪಾಧ್ಯಕ್ಷೆ ಲೀಲಾವತಿ, ಸದಸ್ಯರುಗಳಾದ ಶಶಿಶೇಖರ್, ಕೆ.ಟಿ.ಶಿವಶಂಕರ್, ಯಜಮಾನ್ ಮಹೇಶ್, ನವ್ಯಪ್ರಕಾಶ್, ಸುಮಲತ, ತಬಸುಮ್, ನದೀಮ್, ಶ್ರೀನಿವಾಸ್, ರುದ್ರೇಶ್, ರಂಗನಾಥ್, ಕೃಷ್ಣಮೂರ್ತಿ, ಪ.ಪಂ.ಮುಖ್ಯಾಧಿಕಾರಿ ಮಂಜುಳಾ, ಶುಚಿ ಇಂಟರ್ ನ್ಯಾಷನಲ್ ಸಂಸ್ಥೆಯ ನವೀನ್ ಕುಮಾರ್, ಕೃಷ್ಣ ಸೇರಿದಂತೆ ಅನೇಕ ಮುಖಂಡರುಗಳು ಇದ್ದರು.