ಸಂತೇಬೆನ್ನೂರು:

ಸಂತೇಬೆನ್ನೂರಿನಲ್ಲಿ ಜಿಟಿ ಜಿಟಿ ಮಳೆಯಿಂದಾಗಿ ಬಕ್ರೀದ್ ಹಬ್ಬದ ಪ್ರಾರ್ಥನೆಯನ್ನು ಗ್ರಾಮದ ಜಾಮಿಯಾ ಶಾದಿ ಮೆಹಲ್‍ನಲ್ಲಿ ಎಲ್ಲರೂ ಒಟ್ಟುಗೂಡಿ ಪ್ರಾರ್ಥನೆಯನ್ನು ಸಲ್ಲಿಸಿದರು.
ಬಕ್ರೀದ್ ನಮಾಜ್‍ನ ನಂತರ ಧಾರ್ಮಿಕ ಸಂದೇಶ ಕುರಿತು ತಖ್‍ರೀರ್(ಉಪದೇಶ) ನೀಡಿದ ಮೌಲಾನ ಸಲೀಮ್ ರಜಾ ಬರ್ಕಾತಿಯವರು ಬಕ್ರೀದ್ ಹಬ್ಬದ ಪ್ರಮುಖ ಸೂತ್ರಧಾರಿಯವರಾದ ಹಜ್‍ರತ್ ಇಬ್ರಾಹಿಂ ಅಲೆಹುಸ್‍ಸಲಾಂ ಮತ್ತು ಅವರ ಏಕೈಕ ಪುತ್ರರಾದ ಹಜ್‍ರತ್ ಇಸ್ಮಾಯಿಲ್ ಅಲೆಹುಸ್‍ಸಲಾಂ ರವರ ಜೀವನ ಶೈಲಿಯನ್ನು ಸಂಕ್ತಿಪ್ತವಾಗಿ ತಿಳಿಸಿದರು. ಮಾನವೀಯ ಮೌಲ್ಯಗಳನ್ನು ತಮ್ಮ-ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಬೆರೆಯವರ ಜೊತೆಗೆ ನಾವೂ ಸಹ ಸುಖವಾಗಿರುತ್ತೇವೆ. ಕೇರಳ, ಮಡಿಕೇರಿ ಇನ್ನಿತರ ಕಡೆ ಮಳೆಯಿಂದ ಆದ ವೀಕೋಪಕ್ಕೆ ಸ್ವತಃ ನಾವೇ ಹೊಣೆಗಾರರಾಗಿದ್ದು ಅವರ ಕಷ್ಟಗಳಿಗೆ ಸ್ಪಂದಿಸುವ ಸ್ಪಂದನೆ ಎಲ್ಲರಲ್ಲೂ ಬರಬೇಕು ಎಂದು ಕರೆ ನೀಡಿದರು. ಜಾಮಿಯ ಮಸೀದಿ ಮುತ್ತುವಲ್ಲಿ ಜನಾಬ್ ಏಜಾಜ್ ಅಹ್ಮದ್, ಕಾರ್ಯದರ್ಶಿ ಮಿರ್ಜಾ ಇಸ್ಮಯಿಲ್, ಜಿಲ್ಲಾ ವಕ್ಫ್‍ಬೋರ್ಡ್ ಉಪಾಧ್ಯಕ್ಷ ಕೆ.ಸಿರಾಜ್ ಅಹ್ಮದ್, ಹೆಚ್.ತಜಮ್ಮುಲ್‍ಪಾಷ್, ಸೈಯದ್ ಫೈಜುಲ್ಲಾ, ಶಾಬ್ದುಲ್ಲಾ ಸಾಬ್, ಎಸ್.ಕೆ.ರಹಮತುಲ್ಲಾ ಇನ್ನಿತರರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








