ತುಮಕೂರು
ನವದೆಹಲಿಯಲ್ಲಿರುವ ಭಾರತೀಯ ಪ್ರಕಾಶಕರ ಒಕ್ಕೂಟವು ( Federation of Indian Publishers, New Delhi) ಪ್ರತಿ ವರ್ಷವೂ ಪುಸ್ತಕ ತಯಾರಿಕೆಯಲ್ಲಿ ಅತ್ಯುತ್ತಮ ಮುದ್ರಣ ವಿನ್ಯಾಸಕ್ಕಾಗಿ ಪ್ರಶಸ್ತಿಗಳನ್ನು ನೀಡುತ್ತಿದ್ದು, ಎಲ್ಲ ಭಾರತೀಯ ಭಾಷೆಗಳ ಪುಸ್ತಕ ಪ್ರಕಾಶಕರು ಇದರಲ್ಲಿ ಭಾಗವಹಿಸುತ್ತಾರೆ.
ನವಕರ್ನಾಟಕ ಪ್ರಕಾಶನ ಹೊರತಂದಿರುವ ‘ ವಿಜ್ಞಾನದ ಹೆದ್ದಾರಿಯಲ್ಲಿ ಮಹಾತಿರುವುಗಳು’ (ಸಂಪಾದಕರು : ಡಾ. ಟಿ. ಆರ್ . ಅನಂತರಾಮು) ಈ ವರ್ಷದ ಈ ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರವಾಗಿದ್ದು, ವಿಜ್ಞಾನ-ತಂತ್ರಜ್ಞಾನ-ವೈದ್ಯಕೀಯ ಪುಸ್ತಕಗಳ ವಿಭಾಗದಲ್ಲಿ ಭಾರತೀಯ ಭಾಷೆಗಳಲ್ಲೇ ಮೊದಲ ಬಹುಮಾನ ಪಡೆದಿದೆ.
ಕನ್ನಡದ ವಿಜ್ಞಾನ ಪುಸ್ತಕಗಳ ಮುದ್ರಣದ ಗುಣಮಟ್ಟವನ್ನು ಸೂಚಿಸುವ ಈ ಪ್ರಶಸ್ತಿ ಕನ್ನಡಿಗರೆಲ್ಲರೂ ಹೆಮ್ಮೆ ಪಡಬೇಕಾದ ಸಾಧನೆ ಎಂಬುದು ನವಕರ್ನಾಟಕ ಪ್ರಕಾಶನದ ಅಭಿಪ್ರಾಯ.
ಆಗಸ್ಟ್ 30ರಂದು ನವ ದೆಹಲಿಯಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಒಕ್ಕೂಟದ ಪ್ರಕಟಣೆ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
