ಮಧುಗಿರಿ:
ತಾಲೂಕಿನ ಜೆಡಿಎಸ್ ಪಕ್ಷದವರು ಸ್ಥಳೀಯ ಪುರಸಭೆಯ ಚುನಾವಣೆಯಲ್ಲಿ ಬಹುಮತ ಪಡೆಯತ್ತಿದ್ದರೂ ಸಹ ವಾಮಾ ಮಾರ್ಗದ ಮೂಲಕ ಜೆಡಿಎಸ್ ಪಕ್ಷದವರು ಅಧ್ಯಕ್ಷ ಸ್ಥಾನ ಮೀಸಲಾತಿಯನ್ನು ದುರುಪಯೋಗ ಪಡಿಸಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿಯಲು ಹೊರಟಿದ್ದಾರೆಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ಮಲ್ಲಿಕಾರ್ಜುನಯ್ಯ ಆರೋಪಿಸಿದ್ದಾರೆ.
ಪಟ್ಟಣದ ಎಂ.ಎನ್.ಕೆ ಸಮೂದಾಯ ಭವನದದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಿ ಮಾತನಾಡಿದರು. ಸೆ.3ರಂದು ಮಧುಗಿರಿ ಪುರಸಭೆಯ ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಇದು ರಾಜ್ಯ ಪತ್ರದಲ್ಲಿ ಪ್ರಕಟವಾಗಿತ್ತು. ಆದರೆ ಹಾಲಿ ಶಾಸಕರು ಫಲಿತಾಂಶ ಬಂದ ನಂತರ ಸೋಲಿನ ಹತಾಶೆಯಿಂದ ಮೀಸಲಾತಿ ಬದಲಾಯಿಸಿ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿರಿಸಿರುವುದನ್ನು ಎಲ್ಲರೂ ಒಕ್ಕೋರಲಿನಿಂದ ಖಂಡಿಸುವುದಾಗಿ ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಮಲ್ಲಿಕಾರ್ಜುನಯ್ಯ, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದ್ದು, ನಮ್ಮ ಉಪಮುಖ್ಯಮಂತ್ರಿ ಡಾ|| ಜಿ.ಪರಮೇಶ್ವರ್‍ರವರೇ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದು, ಅವರ ಗಮನಕ್ಕೂ ತಾರದೆ ಏಕಾಏಕಿ ಅಧಿಕಾರ ದಾಹದಿಂದ ಅಧ್ಯಕ್ಷರ ಮೀಸಲಾತಿ ಬದಲಾಯಿಸುವುದು ಸರಿಯಲ್ಲ. ಸರ್ಕಾರದ ಆದೇಶ ಪತ್ರದಂತೆ ಅಧ್ಯಕ್ಷ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ಮೀಸಲಿರಿಸಬೇಕು ಎಂದು ಡಿ.ಸಿ.ಎಂ ಡಾ|| ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ರವರಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿ ಒಂದು ವೇಳೆ ನಮ್ಮ ಮನವಿಗೆ ಸರ್ಕಾರ ಸ್ಪಂದಿಸದೇ ಹಳೆ ಮೀಸಲು ಪಟ್ಟಿ ಮುಂದುವರಿಸದಿದ್ದರೆ ಮಾಜಿ ಶಾಸಕ ಕೆ.ಎನ್.ರಾಜಣ್ಣ ಸೇರಿದಂತೆ ಮಧುಗಿರಿಯ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಒಗ್ಗೂಡಿ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಸಾಮೂಹಿಕವಾಗಿ ರಾಜಿನಾಮೆ ಕೊಡುವುದಾಗಿ ಹಾಗೂ ನಮಗೆ ನ್ಯಾಯ ದೊರಕದೆ ಹೋದರೆ ನ್ಯಾಯಾಲಯ ಮೊರೆ ಹೋಗುವುದಾಗಿ ಸ್ಪಷ್ಟಪಡಿಸಿದರು.
ಎಸ್.ಆರ್.ರಾಜಗೋಪಾಲ್,ಪುರಸಭೆ ಮಾಜಿ ಅಧ್ಯಕ್ಷರಾದ ಎಂ.ಕೆ.ನಂಜುಂಡಯ್ಯ, ಎಂ.ವಿ.ಗೋವಿಂದರಾಜು, ಎಂ.ಎಸ್.ಚಂದ್ರಶೇಖರ್, ಅಲೀಂ ಉಲ್ಲಾ, ನೂತನ ಸದಸ್ಯರುಗಳಾದ ಸಿ.ನಟರಾಜು, ಯುವಕಾಂಗ್ರೆಸ್ ಅಧ್ಯಕ್ಷ ಕೃಷ್ಣಮೂರ್ತಿ, ಮುಖಂಡರುಗಳಾದ ಎಂ.ಎಸ್.ಶಂಕರ್‍ನಾರಾಯಣ್, ಎಂ.ವಿ.ಮಂಜುನಾಥ್, ಎಂ.ಜಿ.ರಾಮು, ಸಾಧಿಕ್, ಲೋಕೇಶ್, ಎಂಜಿ.ಉಮೇಶ್. ಆನಂದಕೃಷ್ಣ, ಆನಂದ್ ಮಾಜಿ ಪುರಸಭಾ ಸದಸ್ಯ ಎಂ.ಶ್ರೀಧರ್, ಮುಂತಾದವರು ಹಾಜರಿದ್ದರು.