ಅನಕ್ಷಸ್ಥರೇನೂ ದಡ್ಡರಲ್ಲ: ಅವರಿಗೂ ಜ್ಞಾನ ಇರುತ್ತದೆ

ತುಮಕೂರು:

            ಅನಕ್ಷರಸ್ಥರಿಗೆ ಅಕ್ಷರದ ಜ್ಞಾನ ಇಲ್ಲದಿದ್ದರೂ ಸಾಮಾನ್ಯ ಜ್ಞಾನ ಅಪಾರವಾಗಿರುತ್ತದೆ ಎಂದು ರಾಜ್ಯ ಲೋಕ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಆರ್.ಎಸ್.ಪೆದ್ದಯ್ಯ ಅಭಿಪ್ರಾಯಪಟ್ಟರು.
             ಸೆ.5 ರಂದು ಶ್ರೀ ಸಿದ್ಧಗಂಗಾ ಮಠದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಕಾರ್ಯಕ್ರಮ ಅನುಷ್ಠಾನಗಾರರು ಹಾಗೂ ರಾಜ್ಯ ಸಂಪನ್ಮೂಲ ವ್ಯಕ್ತಿಗಳ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಾ ಕಲಿತವರು ಕಲಿಯದವರ ಅಂತರಂಗದ ನೋವನ್ನು ಒಳಗಣ್ಣಿನಿಂದ ನೋಡಿದಾಗ ಮಾತ್ರ ಕಲಿತ ವಾತಾವರಣದ ಸಾರ್ಥಕ ವಾತಾವರಣ ನಿರ್ಮಾಣವಾಗುತ್ತದೆ. ಅನಕ್ಷರಸ್ಥರು ಎಂದ ಮಾತ್ರಕ್ಕೆ ದಡ್ಡರಲ್ಲ. ಈ ಸಮಾಜದ ರೂಪುರೇಷೆಯ ನಿರ್ಮಾಣ ಮಾಡುವಲ್ಲಿ ಅನಕ್ಷರಸ್ಥರ ಪಾತ್ರ ಪ್ರಮುಖವಾದುದು ಎಂದರು.
ನಿರ್ದೆಶನಾಲಯದ ಉಪನಿರ್ದೇಶಕ ಕೆ.ಎನ್.ವಿಜಯ್ ಮಾತನಾಡಿ ಬದುಕು ಬರಹಕ್ಕಿಂತಲೂ ಶ್ರೇಷ್ಠ ಕಲಿಕೆ ಇರಬೇಕು. ಅದನ್ನು ಪೋಷಿಸುವ ಜವಾಬ್ದಾರಿ ಕಾರ್ಯಕ್ರಮದ ಅನುಷ್ಠಾನಗಾರದ್ದಾಗಿರುತ್ತದೆ ಎಂದರು.
             ರಾಜ್ಯ ಸಂಪನ್ಮೂಲ ಕೇಂದ್ರದ ನಿರ್ದೇಶಕ ಡಾ.ಎಸ್.ತುಕಾರಾಂ, ಕೇಂದ್ರ ಕಛೇರಿಯ ಸಹಾಯಕ ನಿರ್ದೇಶಕ ಡಾ.ದೊರೈರಾಜು, ಕಾರ್ಯಕ್ರಮ ಸಹಾಯಕ ಕೆಂಪಯ್ಯ, ರಾಜ್ಯ ಸಂಪನ್ಮೂಲ ಕೇಂದ್ರದ ಡಾ.ವೆಂಕಟೇಶ್, ಆಪ್ತಸಮಾಲೋಕರಾದ ಉದಯಶಂಕರ್, ಆರ್ಥಿಕ ಸಮಾಲೋಚಕರಾದ ರವಿಕುಮಾರ್ ಅವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಕೆ.ಬಾಲಾಜಿ ಸ್ವಾಗತಿಸಿದರೆ, ಎಂ.ಎಚ್.ಚಂದ್ರಯ್ಯ ವಂದಿಸಿದರು. ಸಹಾಯಕ ದ್ರೇಹಾಚಾರ್ ಕಾರ್ಯಕ್ರಮ ನಿರೂಪಿಸಿದರು.

Recent Articles

spot_img

Related Stories

Share via
Copy link