ದಾವಣಗೆರೆ:
ಇಲ್ಲಿನ ಮಹಾನಗರ ಪಾಲಿಕೆ ಆವರಣದಲ್ಲಿ ಮಹಾನಗರ ಪಾಲಿಕೆ ನೌಕರರ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ಗಣೇಶ ಮಹೋತ್ಸವದಲ್ಲಿ ಸೋಮವಾರ ಮಧ್ಯಾಹ್ನ ಏರ್ಪಡಿಸಿದ್ದ ಅನ್ನಸಂತರ್ಪಣೆಗೆ ಪಾಲಿಕೆ ಮೇಯರ್ ಶೋಭಾ ಪಲ್ಲಾಗಟ್ಟೆ ಚಾಲನೆ ನೀಡಿದರು.
ಈ ಸಂಧರ್ಭದಲ್ಲಿ ಪಾಲಿಕೆ ಆಯುಕ್ತ ಮಂಜುನಾಥ್ ಆರ್. ಬಳ್ಳಾರಿ, ಉಪ ಆಯುಕ್ತರುಗಳಾದ ರವೀಂದ್ರ ಮಲ್ಲಾಪುರ, ಮಹೇಂದ್ರಕುಮಾರ್, ಇಂಜಿನಿಯರ್ ಕೆ.ಎಂ.ಮಂಜುನಾಥಯ್ಯ, ಬಿರಾದಾರ್, ಕಂದಾಯ ಅಧಿಕಾರಿಗಳಾದ ಪರಮೇಶ್ವರಪ್ಪ, ನಾಗರಾಜ್, ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಎಸ್.ಗೋವಿಂದರಾಜ್, ಎಲ್.ಎಂ.ಹನುಮಂತಪ್ಪ, ರಾಜ್ಯಧ್ಯಕ್ಷ ಎಸ್.ಹೆಚ್.ಗುರುಮೂರ್ತಿ, ಕಾರ್ಯದರ್ಶಿ ಕೆ.ಸಿ.ಬಸವರಾಜಯ್ಯ, ಹಾಲೇಶ್, ವೀರೇಶ್, ಬಿ.ಎಸ್.ವೆಂಕಟೇಶ್, ಶಾಮನೂರು ಬಸವರಾಜ್, ಶೇಖರಪ್ಪ ಸೇರಿದಂತೆ ಹಲವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
