ಕೊರಟಗೆರೆ
ಅಪಘಾತವಾಗಿ ರಸ್ತೆ ಮೇಲೆ ನರಳಾಡುತ್ತಿದ್ದ ಯುವಕನನ್ನು ಆಸ್ಪತ್ರೆಗೆ ದಾಖಲುಸುವಂತೆ ತಮ್ಮ ಬೆಂಗಾವಲು ಪಡೆಯ ಸಿಬ್ಬಂದಿಗೆ ಸೂಚಿಸಿ, ಮಾನವೀಯತೆ ಮೆರೆದ ಮಾಜಿ ಉಪಮುಖ್ಯಮಂತ್ರಿ, ಶಾಸಕ ಡಾ.ಜಿ.ಪರಮೇಶ್ವರ್‍ರವರಿಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಶನಿವಾರ ರಾತ್ರಿ ತಾಲ್ಲೂಕಿನ ಕೋಳಾಲ ಹೋಬಳಿ ಪಾತಗಾನಹಳ್ಳಿ ಸಮೀಪ ಬೈರಗೊಂಡ್ಲು ಗ್ರಾಮದ ಹರೀಶ್ ಎಂಬ ದ್ವ್ವಿಚಕ್ರ ವಾಹನ ಸವಾರನಿಗೆ ಅಪಘಾತವಾಗಿದ್ದು, ಅದೇ ಮಾರ್ಗದಲ್ಲಿ ಶಾಸಕ ಡಾ. ಜಿ. ಪರಮೇಶ್ವರ್ ತಮ್ಮ ಕ್ಷೇತ್ರದ ಖಾಸಗಿ ಕಾರ್ಯಕ್ರಮವನ್ನು ಮುಗಿಸಿಕೊಂಡು ವಾಪಸ್ ಬೆಂಗಳೂರಿನ ಕಡೆಗೆ ಹೋಗುವ ಸಂದರ್ಭದಲ್ಲಿ ಈ ಅಪಘಾvವನ್ನು ಕಂಡಿದ್ದಾರೆ. ತಕ್ಷಣ ಅಪಘಾತದಿಂದ ಗಾಯಗೊಂಡ ಯುವಕ ಹರೀಶ್‍ಗೆ ಧೈರ್ಯ ತುಂಬಿ, ತಮ್ಮ ಪೊಲೀಸ್ ಬೆಂಗಾವಲು ವಾಹನದಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಬಳಿಕ ಅಲ್ಲಿ ನೆರೆದಿದ್ದ ಸಾರ್ವಜನಿಕರಿಗೆ ಸಂಚಾರದ ಬಗ್ಗೆ ತಿಳಿವಳಿಕೆ ಹೇಳಿ ಅಲ್ಲಿಂದ ಬೆಂಗಳೂರಿನ ಕಡೆಗೆ ಹೊರಟ, ಶಾಸಕ ಡಾ. ಜಿ. ಪರಮೇಶ್ವರ್ ಅವರ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
