ಹೈದರಾಬಾದ್:
ತೆಲುಗು ನಟ ಮತ್ತು ಟಿಡಿಪಿ ಮುಖಂಡ ನಂದಮೂರಿ ಹರಿಕೃಷ್ಣ (62) ಆಂಧ್ರಪ್ರದೇಶದ ನಲ್ಗೊಂಡ ಜಿಲ್ಲೆಯಲ್ಲಿ ಇಂದು(ಬುಧವಾರ) ಮುಂಜಾನೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಿಧನರಾದರು.
Exclusive Video: Nandamuri Hari Krishna Met With An Accident #Harikrishna pic.twitter.com/GRR0P04GcA
— GREATANDHRA (@greatandhranews) August 29, 2018
ಇಂದು ಮುಂಜಾನೆ 4.30ರ ಸುಮಾರಿಗೆ ಅಭಿಮಾನಿಯ ಪುತ್ರನ ಮದುವೆಯಲ್ಲಿ ಪಾಲ್ಗೊಳ್ಳಲು ಹೈದರಾಬಾದ್‌ನಿಂದ ನಲ್ಲೂರಿಗೆ ಹರಿಕೃಷ್ಣ ಅವರೇ ಕಾರು ಚಾಲನೆ ಮಾಡಿಕೊಂಡು ಹೋಗುತ್ತಿದ್ದರು ಎನ್ನಲಾಗಿದೆ. ಕಾರ್ ಅತೀ ವೇಗವಾಗಿ ಚಲಿಸುತ್ತಿತ್ತು ಎಂದು ತಿಳಿದುಬಂದಿದ್ದು, ಈ ವೇಳೆ ಡಿವೈಡರ್ಗೆ ಕಾರ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಅಪಘಾತ ಸಂಭವಿಸಿದ ತಕ್ಷಣ ಅವರನ್ನು ನಾರ್ಕೆಟ್‌ಪಲ್ಲಿಯ ಕಾಮಿನೇನಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆ ತಲುಪುವ ವೇಳೆಗೆ ಅವರು ಅಸುನೀಗಿದ್ದರು. ಕುಟುಂಬ ಸದಸ್ಯರು ಇದೀಗ ಸ್ಥಳಕ್ಕೆ ಧಾವಿಸುತ್ತಿದ್ದಾರೆ.
ಹರಿಕೃಷ್ಣ ಅವರು ಟಿಡಿಪಿ ಸಂಸ್ಥಾಪಕ ಎನ್.ಟಿ.ರಾಮರಾವ್ ಅವರ ನಾಲ್ಕನೇ ಮಗ ಮತ್ತು ತೆಲುಗು ಸೂಪರ್‌ಸ್ಟಾರ್ ಜೂನಿಯರ್ ಎನ್‌ಟಿಆರ್ ಅವರ ತಂದೆ. ರಾಜ್ಯಸಭೆ ಸದಸ್ಯರಾಗಿಯೂ ಕೆಲಸಮಯ ಸೇವೆ ಸಲ್ಲಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ