ಜಾರ್ಖಂಡ್:
11 ಮಂದಿ ಕಾಮುಕರು ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ.
ಲೋಹರ್ದಾಗಾದಲ್ಲಿ ಈ ಘಟನೆ ಆಗಸ್ಟ್ 16 ರಂದು ನಡೆದಿದ್ದು, ಈಗ ಬೆಳಕಿಗೆ ಬಂದಿದೆ. ಬಂಧಿತ ಆರೋಪಿಗಳು 18 ಮತ್ತು 28 ವಯಸ್ಸಿನರಾಗಿದ್ದು, ಹಿರಿ ಹರ್ರಾ ಟೋಲಿ ಪ್ರದೇಶದಲ್ಲಿ ದಾಳಿ ಮಾಡಿ 11 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಉಪ ಅಧೀಕ್ಷಕ ಆಶಿಶ್ ಕುಮಾರ್ ಮಹ್ಲಿ ಹೇಳಿದ್ದಾರೆ.
ನಡೆದಿದ್ದೇನು?
ಇದೇ ಆಗಸ್ಟ್ 16 ರಂದು ಇಬ್ಬರು ಬಾಲಕಿಯರು ಅವರ ಪಕ್ಕದ ಮನೆಯ ಮಹಿಳೆ ಜೊತೆ ಬೈಕ್ ನಲ್ಲಿ ತೆರಳುತ್ತಿದ್ದಾಗ. ದಾರಿ ಮಧ್ಯೆ ಅಂದರೆ ಹಿರಿ ಹೆರ್ರ ಟೋಪಿ ರೈಲ್ವೇ ಪ್ರದೇಶದಲ್ಲಿ ಬೈಕ್ ಕೆಟ್ಟು ಹೋಗಿದೆ. ಈ ವೇಳೆ ಬಾಲಕಿಯೊಬ್ಬಳು ಸ್ನೇಹಿತನಿಗೆ ಕರೆ ಮಾಡಿ ಸಹಾಯ ಮಾಡುವಂತೆ ಕರೆದಿದ್ದಾಳೆ. ಆದರೆ ಸ್ನೇಹಿತ ಸಹಾಯಕ್ಕೆ ಬದಲು 11 ಮಂದಿಯನ್ನು ಸ್ಥಳಕ್ಕೆ ಕಳುಹಿಸಿದ್ದಾನೆ.
ಘಟನಾ ಸ್ಥಳಕ್ಕೆ ಬಂದ ಆರೋಪಿಗಳು ಮಹಿಳೆಯ ಮೇಲೆ ಹಲ್ಲೆ ಮಾಡಿ ಓಡಿಸಿದ್ದಾರೆ. ಆ ಬಳಿಕ ಇಬ್ಬರು ಬಾಲಕಿಯರನ್ನು ಪ್ರತ್ಯೇಕ ಸ್ಥಳಕ್ಕೆ ಕರೆದ್ಯೋದು 11 ಮಂದಿ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದಾರೆ. ಆರೋಪಿಗಳು ಅತ್ಯಾಚಾರ ಎಸಗಿದ್ದಲ್ಲದೆ ಅವರ ಬಳಿಯಿದ್ದ ಮೊಬೈಲ್ ಫೋನ್ ಗಳನ್ನು ಸಹ ಕಸಿದು ಪರಾರಿಯಾಗಿದ್ದರು ಎಂದು ಡಿಸಿಪಿ ಹೇಳಿದ್ದಾರೆ.
ಇಬ್ಬರು ಬಾಲಕಿಯರ ಹೇಳಿದ ಮಾಹಿತಿ ಆಧಾರದ ಮೇರೆಗೆ ಸರ್ದಾರ್ ಪೊಲೀಸ್ ಠಾಣೆಯಲ್ಲಿ 11 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.