ಅಭಿವೃದ್ಧಿ ಕಾರ್ಯಕ್ರಮ ಕುರಿತ ವಸ್ತು ಪ್ರದರ್ಶನ

ದಾವಣಗೆರೆ :

       ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಫೆ.11ರ ವರೆಗೆ ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ಆಯೋಜಿಸಿರುವ ವಸ್ತುಪ್ರದರ್ಶನಕ್ಕೆ ಶನಿವಾರ ಮಹಾನಗರ ಪಾಲಿಕೆ ಮಹಾಪೌರರಾದ ಶೋಭಾ ಪಲ್ಲಾಗಟ್ಟೆ ಹಾಗೂ ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ ಚಾಲನೆ ನೀಡಿದರು.

        ಬಡವರಿಗಾಗಿ ಜಾರಿಗೆ ತಂದಿರುವ ಯೋಜನೆಗಳ ಚಿತ್ರಣಗಳು, ಆಕರ್ಷಕ ನಾಮಫಲಕಗಳು ಹಾಗೂ ಸರ್ಕಾರಿ ಯೋಜನೆಗಳ ಕುರಿತಾದ ಈ ಮಾಹಿತಿಯ ವಸ್ತು ಪ್ರದರ್ಶನ ಸಾರ್ವಜನಿಕರ ಗಮನ ಸೆಳೆಯುತ್ತಿದೆ. ವಸ್ತು ಪ್ರದರ್ಶನದಲ್ಲಿ ಪ್ರಸ್ತುತ ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಗಳಾದ ಮಾತೃಶ್ರೀ, ಬಡವರ ಬಂಧು, ಅಮೃತ ಯೋಜನೆ, ಹಸಿರು ಕರ್ನಾಟಕ, ಜನತಾ ದರ್ಶನ, ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ, ಬೆಳೆ ಸಮೀಕ್ಷೆ, ಮೆಟ್ರೋ ಹಂತ-2, ಹಸಿರು ಕರ್ನಾಟಕ, ಸಾಲ ಋಣಮುಕ್ತ, ದಿಶಾ, ಬಡ್ಡಿರಹಿತ ಸಾಲ ನೀಡುವ ಕಾಯಕ ಯೋಜನೆ, ಕೈಗಾರಿಕ ಕ್ಲಸ್ಟರ್ ಯೋಜನೆ, ನಿರುದ್ಯೋಗ ನಿವಾರಣೆಗೆ ನಿಶ್ಚಯ ಯೋಜನೆ, ಅವಕಾಶ ವಂಚಿತರ ಅಭ್ಯುದಯಕ್ಕೆ ಮಹಾ ಹೆಜ್ಜೆ, ಆಧುನಿಕ ಕೃಷಿ ಯೋಜನೆ, ಸೇರಿದಂತೆ ಹಲವಾರು ಯೋಜನೆಗಳ ಚಿತ್ರಣಗಳ ಫಲಕಗಳಿದ್ದು, ಸಾರ್ವಜನಿಕರು, ವಿದ್ಯಾರ್ಥಿಗಳು ವೀಕ್ಷಿಸಿ ಮಾಹಿತಿ ಪಡೆಯುತ್ತಿದ್ದಾರೆ. ಪ್ರದರ್ಶನಕ್ಕೆ ಪ್ರವೇಶ ಉಚಿತವಾಗಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಈ ವಸ್ತುಪ್ರದರ್ಶನ ವೀಕ್ಷಣೆ ಮಾಡಿ ಸದುಪಯೋಗ ಪಡೆಯಬಹುದಾಗಿದೆ.

        ಈ ಸಂದರ್ಭದಲ್ಲಿ ಕೆಸ್‍ಆರ್‍ಟಿಸಿ ಡಿಟಿಓ ಮಂಜುನಾಥ್, ಡಿಪೋ ಮ್ಯಾನೇಜರ್‍ಗಳಾದ ರೇಖಾ, ನೀತಾ, ನಿಲ್ದಾಣಾಧಿಕಾರಿ ಎಂ.ಎಂ.ಹುಲ್ಲತ್ತಿ, ವಾರ್ತಾ ಸಹಾಯಕಿ ಭಾಗ್ಯ ಎಂ.ಟಿ, ವಾರ್ತಾ ಇಲಾಖೆ ಸಿಬ್ಬಂದಿಗಳಾದ ಆರತಿ, ಶೈಲಜಾ, ಶಿವಕುಮಾರ್, ಮಧುಕುಮಾರ್, ಕೆಎಸ್‍ಆರ್‍ಟಿಸಿ ಸಿಬ್ಬಂದಿಗಳು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link