ಹರಿಹರ:
ಅಮರಾವತಿ ಗ್ರಾಮಕ್ಕೆ ತೆರಳುವ ಸರ್ವೀಸ್ ರಸ್ತೆಯನ್ನು ಮಾಡಿಕೊಡುವಂತೆ ಸಂಸದ ಜಿ.ಎಂ ಸಿದ್ದೇಶ್ವರ್ ಕಾಮಗಾರಿ ಮೇಲ್ವಿಚಾರಕರಿಗೆ ಆದೇಶ.
ನಗರದ ಹೊರವಲಯದಲ್ಲಿರುವ ಅಮರಾವತಿ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿರುವ ಮೇಲ್ಸೇತುವೆ ಕಾಮಗಾರಿಯನ್ನು ವೀಕ್ಷಿಸಲು ಭೇಟಿ ನೀಡಿದ್ದ ವೇಳೆ, ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಕಾಮಗಾರಿಯ ಬಗ್ಗೆ ಅಮರಾವತಿ ಗ್ರಾಮಸ್ಥರ ದೂರು ಹೆಚ್ಚಾಗಿತ್ತು. ಈ ಉದ್ದೇಶದಿಂದ ನಾನು ಸಮಸ್ಯೆಯನ್ನು ಪರಿಶೀಲಿಸಲು ಇಲ್ಲಿಗೆ ಬಂದಿದ್ದೇನೆ ಎಂದರು.
ಗ್ರಾಮಸ್ಥರ ಸಮಸ್ಯೆಯನ್ನು ಆಲಿಸಿದ ಸಂಸದರು, ಕಾಮಗಾರಿಗೆ ಸಂಬಂಧಿಸಿದ ಅಧಿಕಾರಿಗಳನ್ನು ಮಾತನಾಡಿಸಿದ ಅವರು, ಉತ್ತಮ ರಸ್ತೆಯನ್ನು ಮಾಡಿಕೊಡದೇ, ಕೆಂಪು ಮಣ್ಣನ್ನು ಹಾಕಿ, ನಡೆದಾಡಲು ಬಿಟ್ಟಿದ್ದೀರಿ. ನಗರದಲ್ಲಿ ಜಿಟಿ ಜಿಟಿ ಮಳೆ ಬರುತ್ತಿದ್ದು, ಗ್ರಾಮದ ಜನರು ಈ ಕೆಸರುಗದ್ದೆಯಂತಿರುವ ರಸ್ತೆಯಲ್ಲಿ ಹೇಗೆ ನಡೆದಾಡುತ್ತಾರೆ ಎಂದು ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.
ಗ್ರಾಮಸ್ಥರಿಗೆ ಸಂಚರಿಸಲು ಉತ್ತಮ ರಸ್ತೆ ಮಾಡಿಸಿದರೆ, ಕಾಮಗಾರಿ ನಿರ್ಮಾಣಕ್ಕ ಬರುವ ಹೆಚ್ಚ ಬಾರ ಇರುವ ಲಾರಿಗಳು, ಕ್ರೈನ್ಗಳು ಅದೇ ರಸ್ತೆಯಲ್ಲಿ ಸಂಚರಿಸುತ್ತವೆ, ಇದರಿಂದ ರಸ್ತೆಯಲ್ಲಿ ಮತ್ತೆ ಗುಂಡಿಗಳು ಬೀಳುತ್ತವೆ ಹಾಗೂ ಮೇಲ್ ಸೇತುವೆ ಕಾಮಗಾರಿ ಮುಗಿದ ಮೇಲೆ ಈ ರಸ್ತೆಯನ್ನು ಮುಚ್ಚಲಾಗುವುದು. ಆದಕಾರಣ ಈ ರಸ್ತೆಯನ್ನು ಉತ್ತಮ ಪಡಿಸದೇ, ಗ್ರಾಮಸ್ಥರು ನಡೆದಾಡಲು ಅನುವುಮಾಡಿಕೊಟ್ಟಿದ್ದೇವೆ ಎಂದು ಕಾಮಗಾರಿಗೆ ಸಂಬಂಧಿಸಿದ ಅಭಿಯಂತರರು ಹೇಳಿದರು.
ಇದಕ್ಕೆ ಪ್ರತಿಕ್ರಹಿಸಿದ ಸಂಸದರು, ಕಾಮಗಾರಿ ಮುಗಿಯುವ ತನಕ ಊರಿನ ಜನರು ಇದರಲ್ಲಿಯೇ ನಡೆದಾಡಬೇಕ. ಇಲ್ಲಿಗೆ ಉತ್ತಮ ರಸ್ತೆ ಮಾಡಿಸಲು ನಿನ್ನ ಸ್ವಂತ ಹಣವನ್ನು ತಂದು ಬಳಸುತ್ತೀಯ ಅಥವಾ ಸರ್ಕಾರದ ಹಣವನ್ನು ಬಳಸುತ್ತೀಯ. ಸಾರ್ವಜನಿಕರು ನಮಗೆ ಚೀಮಾರಿ ಹಾಕುವುದು ನಿಮಗೆ ಸಂತೋಷವ, ಮೊದಲು ಇಲ್ಲಿನ ಜನರಿಗೆ ಸಂಚರಿಸಲು ಉತ್ತಮ ರಸ್ತೆ ನಿರ್ಮಾಣ ಮಾಡು, ನಂತರ ನಿನ್ನ ಮೇಲ್ ಸೇತುವೆ ಕಾಮಗಾರಿಯನ್ನು ಪ್ರಾರಂಭಿಸು ಎಂದು ಅಭಿಯಂತರರು ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಜಾತ ಡಿ. ರೇವಣಸಿದ್ದಪ್ಪ, ನಗರಸಭೆ ಪೌರಾಯುಕ್ತೆ ಎಸ್.ಲಕ್ಷ್ಮೀ, ಲೋಕೋಪಯೋಗ ಇಲಾಖೆಯ ಈಶ್ವರಪ್ಪ, ನಗರಸಭೆ ಅಭಿಯಂತರರಾದ ಬಿ.ಎಸ್.ಪಾಟೀಲ್, ಮಲತೇಶ್, ರೈಲ್ವೆ ಇಲಾಖೆಯ ಅಧಿಕಾರಿಗಳು, ಅಮರಾವತಿ ಗ್ರಾಮಸ್ಥರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
