ಬೆಂಗಳೂರು
ಅರಣ್ಯ ಸಚಿವರಾಗಿರುವ ಆನಂದ್ ಸಿಂಗ್, ಅರಣ್ಯವನ್ನೇ ಒತ್ತುವರಿ ಮಾಡಿದ್ದಾರೆ. ಅವರ ವಿರುದ್ಧ ಅರಣ್ಯ ಒತ್ತುವರಿ ಮಾಡಿದ್ದಕ್ಕಾಗಿ 15 ಪ್ರಕರಣಗಳು ದಾಖಲಾಗಿವೆ. ಆದ್ರೇ ಇಂತವರಿಗೆ ಅರಣ್ಯ ಖಾತೆಯನ್ನು ರಾಜ್ಯ ಬಿಜೆಪಿ ಸರ್ಕಾರ ನೀಡಿದೆ ಎಂಬುದಾಗಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಾಜಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್, ಬಿಜೆಪಿ ಕಪ್ಪುಹಣ ವಾಪಾಸ್ ತರುತ್ತೇವೆ ಎಂದು ಹೇಳುತ್ತಲೇ ಇದೆ. ಆದ್ರೇ ತರುತ್ತಿಲ್ಲ. ಇಂತಹ ಕಪ್ಪು ಹಣದಲ್ಲಿಯೇ ಆಡಳಿತ ನಡೆಸುತ್ತಿದೆ ಎಂಬುದಾಗಿ ವಾಗ್ದಾಳಿ ನಡೆಸಿದ್ರು.
ಇನ್ನೂ ಮುಂದುವರೆದು ಮಾತನಾಡಿದ ಅವರು, ಆನಂದ್ ಸಿಂಗ್ ವಿರುದ್ಧ 15 ಕೇಸ್ ಗಳಿವೆ. ಅರಣ್ಯ ಒತ್ತುವರಿಗಾಗಿ ದಾಖಲಾದಂತ ಪ್ರಕರಣಗಳಾಗಿದ್ದಾವೆ. ಆದ್ರೂ ಆನಂದ್ ಸಿಂಗ್‍ಗೆ ಅರಣ್ಯ ಖಾತೆಯನ್ನು ನೀಡಲಾಗಿದೆ. ಜನರು ಎಲ್ಲವನ್ನೂ ನೋಡುತ್ತಿದ್ದಾರೆ. ಇದಕ್ಕೆಲ್ಲ ಜನರು ಉತ್ತರ ಕೊಡುತ್ತಾರೆ ಎಂಬುದಾಗಿ ಬಿಜೆಪಿ ವಿರುದ್ಧ ರಿಜ್ವಾನ್ ಅರ್ಷದ್ ವಾಗ್ದಾಳಿ ನಡೆಸಿದ್ರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ