ದಾವಣಗೆರೆ:
ಅರಬ್ಬಿ ಕಡಲ ತೀರದಲ್ಲಿ’ ಚಿತ್ರದಲ್ಲಿ ಶುಶ್ರೂಷಕಿ ವೃತ್ತಿಯ ಬಗ್ಗೆ ಅವಹೇಳನಕಾರಿ ಸಂಭಾಷಣೆ ಇದ್ದು, ಅದಕ್ಕೆ ತಕ್ಷಣವೇ ಕತ್ತರಿ ಹಾಕಬೇಕು ಹಾಗೂ ನಿರ್ಮಾಪಕರು, ನಿರ್ದೇಶಕರು ಕ್ಷಮೆ ಯಾಚಿಸಬೇಕೆಂದು ರಾಜ್ಯ ಸರ್ಕಾರಿ ಶುಶ್ರೂಷಕರ ಸಂಘದ ಜಿಲ್ಲಾಧ್ಯಕ್ಷ ಗೋವಿಂದಪ್ಪ ಆರ್.ಹೆಚ್. ಒತ್ತಾಯಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರದಲ್ಲಿ `ಕಂಡ ಕಂಡ ಗಂಡಸರನ್ನೆಲ್ಲಾ ಬೆತ್ತಲೆ ಮಾಡಿ, ಬ್ಯಾಂಡೇಜ್ ಹಾಕೋ ಕಿತ್ತೊಗಿರೋ ನರ್ಸ್ ಕೆಲಸ ಮಾಡೋಳು ನೀನು’ ಎಂಬ ಸಂಭಾಷಣೆವಿದ್ದು, ತಕ್ಷಣವೇ ಈ ಸಂಭಾಷಣೆಗೆ ಕತ್ತರಿ ಪ್ರಯೋಗ ನಡೆಸುವುದರ ಜೊತೆಗೆ ಚಿತ್ರತಂಡ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.
ವೈದ್ಯರು ರೋಗಿಗಳನ್ನು ನೋಡಿ ಹೋಗುತ್ತಾರೆ. ಆದರೆ, ಆಸ್ಪತ್ರೆಯಲ್ಲಿರುವ ರೋಗಿಗಳನ್ನು ಮಾನವೀಯ ದೃಷ್ಠಿಕೋನದಲ್ಲಿ ಆರೈಕೆ ಮಾಡುವವರು ನರ್ಸ್ಗಳು ಆಗಿದ್ದಾರೆ. ಇಂತಹ ನರ್ಸ್ಗಳ ಬಗ್ಗೆ ಕೆಟ್ಟ ದೃಷ್ಠಿಕೋನದೊಂದಿಗೆ ವಿಕೃತ ಮನೋಭಾನೆಯಿಂದ ಸಂಭಾಷಣೆ ಬರೆದಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ವಿಷಯ ಕುರಿತು ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಲಾಗಿದೆ. ಇಂತಹ ಸಂಭಾಷಣೆಕಾರರ ವಿರುದ್ಧವೂ ಕ್ರಮಕೈಗೊಳ್ಳಬೇಕು. ಯಾರ ಮನಸ್ಸಿಗೂ ನೋವಾಗದ ರೀತಿಯಲ್ಲಿ ಸಂಭಾಷಣೆ ಬರೆಯುವಂತೆ ನಿರ್ದೇಶನ ನೀಡಬೇಕೆಂದು ಒತ್ತಾಯಿಸಲಾಗಿದೆ ಎಂದರು.
ನರ್ಸ್ಗಳ ಮನಸ್ಸಿಗೆ ನೋವುಂಟು ಮಾಡು ರೀತಿಯಲ್ಲಿರುವ ಸಂಭಾಷಣೆಯನ್ನು ಕಿತ್ತು ಹಾಕಬೇಕು ಹಾಗು ಚಿತ್ರದ ನಿರ್ದೇಶಕ, ನಿರ್ಮಾಪಕರು ಕ್ಷಮೆ ಕೇಳಬೇಕು. ಇಲ್ಲದಿದ್ದರೆ, ಚಿತ್ರ ಬಿಡಗಡೆ ಮಾಡದಂತೆ ರಾಜ್ಯದ್ಯಂತ ಉಗ್ರ ಹೋರಾಟ ಮಾಡಿ, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಬೇಕಾಗುತ್ತದೆ ಎಂದು ಎಚ್ಚರಿಸಿದರು.ಸುದ್ದಿಗೋಷ್ಠಿಯಲ್ಲಿ ಸರಕಾರಿ ನೌಕರರ ಸಂಘದ ಕಾರ್ಯದರ್ಶಿ ಪರಶುರಾಮಪ್ಪ, ಎಂ.ದಿವಾಕರ್, ಶಾಂತಮ್ಮ, ಗಣೇಶ್, ಇಂದಿರಮ್ಮ, ಸಿದ್ದೇಶ್, ರುದ್ರಮುನಿ, ಅರುಣ್, ಶಿವಮೂರ್ತಿ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ