ಬೆಳಗಾವಿ:
ಹೆಣ್ಣಾಗಲಿ ಗಂಡಾಗಲಿ ಮಗು ಇರಲಿ ಅದು ದಾಂಪತ್ಯ ಜೀವನ ಕೊಂಡಿಯಾಗುತ್ತದೆ ಎನ್ನುವ ಈಕಾಲದಲ್ಲಿ.ಇಲ್ಲೊಬ್ಬ ತಾಯಿ ತನಗೆ ಗಂಡುಮಗು ಹುಟ್ಟಲಿಲ್ಲವೆಂದು ಮಹಿಳೆಯೊಬ್ಬಳು ಸಂಬಂಧಿಕರ ಮಗುವನ್ನು ಕೊಲೆ ಮಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಕಾಗವಾಡ ತಾಲೂಕಿನ ಶೇಡಬಾಳ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಎರಡುವರೆ ವರ್ಷದ ಮಗು ಕಾರ್ತಿಕ್ ಅಲಾಸೆಯನ್ನು, ಆತನ ದೊಡ್ಡಮ್ಮನಾದ ಜಯಶ್ರೀ ಅಲಾಸೆ(33) ಅರಿಯದ ಮಗುವನ್ನು ನೀರಿನಲ್ಲಿ ಮುಳುಗಿಸಿ ಅದರ ಪ್ರಾಣ ತೆಗೆದ್ದಿದ್ದಾಳೆ.
ಇದೇ ಗ್ರಾಮದಲ್ಲಿ ವಾಸವಿರುವ ರಾಜು ಮತ್ತು ರೂಪಾ ಅಲಾಸೆ ದಂಪತಿಯ ಪುತ್ರ ಕಾರ್ತಿಕ್ ನಿದ್ರೆ ಮಾಡುತ್ತಿದ್ದ ಸಂದರ್ಭದಲ್ಲಿ ಎತ್ತಿಕೊಂಡು ಹೋದ ದೊಡ್ಡಮ್ಮ ದುರಾಲೋಚನೆಯಿಂದ ಮಗುವನ್ನು ನೀರಿನ ಬ್ಯಾರಲ್‌ನಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದಾಳೆ. ಆರೋಪಿಯಾದ ತಾಯಿ ಜಯಶ್ರೀಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಗಂಡು ಮಕ್ಕಳಿಲ್ಲವೆಂಬ ವೈಷಮ್ಯದಿಂದ ಈ ರೀತಿ ಮಾಡಿದ್ದಾಳೆನ್ನಲಾಗಿದೆ. ಈ ಪ್ರಕರನ ಸಧ್ಯ ಕಾಗವಾಡ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








