ಬೆಳ್ಳಂದೂರಿನ ಅರ್ಚನಾ ರೆಡ್ಡಿ ಕೊಲೆ ಕೇಸ್ಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಕೊಲೆ ಆರೋಪಿ ನವೀನ್ ಅರ್ಚನಾಳಿಗೆ 2ನೇ ಸಂಬಂಧ ಅಲ್ಲ, 3ನೇ ಸಂಬಂಧವಂತೆ! ಜಿಮ್ ಟ್ರೈನರ್ ಆಗಿದ್ದ ಅರ್ಚನಾಳ ಮಗಳನ್ನೇ ಪಟಾಯಿಸಿ ಒಟ್ಟಿಗೆ ವಾಸವಿದ್ದ…
ಹೌದು, ಅರ್ಚನಾ ರೆಡ್ಡಿಯ ಕೊಲೆ ಕೇಸ್ ಬಗೆದಷ್ಟೂ ಆಳ ಎಂಬಂತೆ ತನಿಖೆ ಮುಂದುವರಿದ್ದಂತೆ ಮಹತ್ತರ ವಿಚಾರ ಬಯಲಾಗ್ತಿದೆ.
ಮೊದಲನೇ ಗಂಡ ಅರವಿಂದನಿಂದ ವಿಚ್ಛೇದನ ಪಡೆದ ಅರ್ಚನಾ, ಕೋಟ್ಯಂತರ ಮೌಲ್ಯದ ಜೀವನಾಂಶ ಪಡೆದುಕೊಂಡಿದ್ದಳು. ಬಳಿಕ ಸಿದ್ದಿಕ್ ಎಂಬಾತನ ಜತೆ ಅಕ್ರಮ ಸಂಬಂಧ ಹೊಂದಿದ್ದಳಂತೆ.
ಇವರಿಬ್ಬರ ನಡುವೆ ಗಲಾಟೆ ನಡೆದು ಎಚ್‌ಎಸ್‌ಆರ್ ಪೊಲೀಸ್ ಠಾಣೆ ಮೇಟ್ಟಿಲೇರಿದ್ದರು. ಆಗ ಪರಿಚಯ ಆಗಿದ್ದೇ ನವೀನ್. ಪರಿಚಯ ಅಕ್ರಮ ಸಂಬಂಧಕ್ಕೆ ತಿರುಗಿ ಒಂದೇ ಮನೆಯಲ್ಲಿ ಅರ್ಚನಾ ಮತ್ತು ನವೀನ್ ಲಿವಿಂಗ್ ಟುಗೇದರ್ನಲ್ಲಿದ್ದರಂತೆ.
ದಿನಕಳೆದಂತೆ ನವೀನ್ನನ್ನು ಅರ್ಚನಾ ಮನೆ ಕೆಲಸದವನಂತೆ ಬಳಸಿಕೊಳ್ಳುತ್ತಿದ್ದಳು. ಇದರಿಂದ ರೋಸಿ ಹೋಗಿದ್ದ ನವೀನ್, ಅರ್ಚನಾಳ ಮಗಳೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದ. ಬೆಂಗಳೂರು ಸುತ್ತಮುತ್ತಾ ಯಾವುದೇ ಜಿಮ್ಗಳಿಗೆ ಹೋದರೂ ಅಲ್ಲಿಗೆಲ್ಲಾ ಅರ್ಚನಾಳ ಮಗಳು ಯುವಿಕಾ ರೆಡ್ಡಿಯನ್ನು ನವೀನ್ ಕರೆದೊಯ್ಯುತ್ತಿದ್ದ.
ಅತಿಯಾದ ಸಲುಗೆ ಪರಿಣಾಮ ಇಬ್ಬರೂ ಜಿಗಣಿಯ ಮಧುಮಿತ್ರ ಲೇಔಟ್ನಲ್ಲಿ ವಾಸವಿದ್ದರು. ಒಂದು ಮಾಹಿತಿ ಪ್ರಕಾರ ಯುವಿಕಾಳನ್ನ ನವೀನ್ ರಿಜಿಸ್ಟ್ರಾರ್ ಮದುವೆ ಆಗಿದ್ದ ಎನ್ನಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಅರ್ಚನಾ ರೆಡ್ಡಿ ಮತ್ತು ಮಗಳು ಯುವಿಕಾ ರೆಡ್ಡಿ
ಅತ್ತ ಯುವಿಕಾಳನ್ನ ತನ್ನ ಬಳಿ ಕಳುಹಿಸಿಕೊಡುವಂತೆ ಅರ್ಚನಾ ಕುಖ್ಯಾತ ರೌಡಿಯ ಮೊರೆ ಹೋಗಿದ್ದಳಂತೆ. ಆ ರೌಡಿ ಧಮ್ಕಿ ಹಾಕಿದ್ದರಿಂದಲೂ ನವೀನ್ ರೊಚ್ಚಿಗೆದ್ದಿದ್ದನಂತೆ. ಅಷ್ಟೇ ಅಲ್ಲ, ಅರ್ಚನಾ ಬಳಿ ಇದ್ದ ಕೋಟ್ಯಂತರ ಆಸ್ತಿ ಮೇಲೂ ನವೀನ್ಗೆ ಕಣ್ಣಿತ್ತಂತೆ.
ಕೊಲೆ ಆರೋಪಿ ನವೀನ್
ಆಸ್ತಿ-ಅಕ್ರಮ ಸಂಬಂಧದ ವಿಚಾರವಾಗಿ ಅರ್ಚನಾ ರೆಡ್ಡಿಯಿಂದ ದೂರವಾಗಿದ್ದ ನವೀನ್ ಆಕೆಯನ್ನ ಮುಗಿಸಲು ಸಂಚು ರೂಪಿಸಿದ್ದ. ಇದಕ್ಕೆ ಅರ್ಚನಾಳ ಮಗಳ ಸಹಕಾರವೂ ಇತ್ತು ಎಂಬ ಶಂಕೆ ವ್ಯಕ್ತವಾಗಿದೆ. ಯಾಕಂದ್ರೆ ಅರ್ಚನಾ ಕೊಲೆಯಾದ ಬಳಿಕವೂ ಯುವಿಕಾ ರೆಡ್ಡಿಯು ನವೀನ್ ಮನೆಯಲ್ಲೇ ಇದ್ದಳಂತೆ.
ಸೋಮವಾರ(ಡಿ.27) ಜಿಗಣಿ ಪುರಸಭೆ ಚುನಾವಣೆಯ ಮತದಾನ ಮುಗಿಸಿ ಕಾರಿನಲ್ಲಿ ಮನೆಗೆ ಹೋಗುತ್ತಿದ್ದ ಅರ್ಚನಾ ರೆಡ್ಡಿಯನ್ನು ಹೊಸೂರು ರಸ್ತೆ ಹೊಸರಸ್ತೆ ಜಂಕ್ಷನ್ನಲ್ಲಿ ಅಡ್ಡಗಟ್ಟಿದ ನವೀನ್ ಕುಮಾರ್ ಮತ್ತು ಈತನ ಸಹಚರರು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ