ಅರ್ಜುನ್ ಸರ್ಜಾ ವಿರುದ್ಧ ಎಫ್ಐಆರ್..! : ಶೃತಿ ದೂರಿನ ಪ್ರತಿಯಲ್ಲೇನಿದೆ..?

ಬೆಂಗಳೂರು: 

      ಇಂದು ತಮ್ಮ ವಕೀಲರ ಜೊತೆ ಕಬ್ಬನ್ ಪಾರ್ಕ್ ಠಾಣೆಗೆ ಬಂದು ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ದೂರಿನಲ್ಲಿ ವಿಸ್ಮಯ ಶೂಟಿಂಗ್ ವೇಳೆಯಲ್ಲಿ ಅರ್ಜುನ್ ಸರ್ಜಾ ನನ್ನ ಬಳಿ ಕೆಟ್ಟದಾಗಿ ನಡೆದುಕೊಂಡಿದ್ದಾರೆ ಅಂತ ಹೇಳಿದ್ದಾರೆ. 

      ಶೃತಿ ಹರಿಹರನ್ ದೂರು ನೀಡಿದ ಹಿನ್ನೆಲೆಯಲ್ಲಿ ಅರ್ಜುನ್ ಸರ್ಜಾ ವಿರುದ್ಧ ಐಪಿಸಿ ಸೆಕ್ಷನ್ 509(ಮಹಿಳೆಗೆ ಅವಮಾನಿಸುವಂತೆ  ಮಾತನಾಡುವುದು) 354(ಅತ್ಯಾಚಾರ ಉದ್ದೇಶದಿಂದ ಹಲ್ಲೆ), 354ಎ(ಲೈಂಗಿಕವಾಗಿ ಸಹಕರಿಸಲು ಒತ್ತಾಯ) ಅಡಿ ಎಫ್‍ಐಆರ್ ದಾಖಲಾಗಿದೆ. 

    

        ದೂರಿನಲ್ಲಿ ವಿಸ್ಮಯ ಶೂಟಿಂಗ್ ವೇಳೆಯಲ್ಲಿ ಅರ್ಜುನ್ ಸರ್ಜಾ ನನ್ನ ಬಳಿ ಕೆಟ್ಟದಾಗಿ ನಡೆದುಕೊಂಡಿದ್ದಾರೆ ಅಂತ ಹೇಳಿದ್ದಾರೆ. ಹೆಬ್ಬಾಳ ಹಾಗೂ ದೇವನಹಳ್ಳಿಯಲ್ಲಿ ಚಿತ್ರೀಕರಣದ ಸಂದರ್ಭದಲ್ಲಿ, ಯುಬಿ ಸಿಟಿಗೆ ಚಿತ್ರದ ಬಗ್ಗೆ ಮಾತನಾಡಲು ಕರೆದಿದ್ದು, ಊಟಕ್ಕೆ ಕರೆದುಕೊಂಡು ಹೋಗಿದ್ದರು. ಯುಬಿ ಸಿಟಿಯ ಪಬ್‍ವೊಂದರಲ್ಲಿ ಊಟ ಮಾಡಿದ್ದೆವು. ಈ ವೇಳೆ ನನ್ನ ದೇಹ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದರು. ಲೈಂಗಿಕವಾಗಿ ನನ್ನ ಮೇಲೆ ದೌರ್ಜನ್ಯ ಎಸಗಿದ್ದರು. ಘಟನೆ ನಡೆದ ವೇಳೆಯಲ್ಲಿ ನನಗೆ ಯಾರೂ ಕೂಡ ಸಹಾಯಕ್ಕೆ ಬರಲಿಲ್ಲ ಎಂದು ಹೇಳಿದ್ದಾರೆ.
     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ