ಅರ್ಹ ರೈತರಿಗೆ ಈ ತಿಂಗಳ ಅಂತ್ಯದ ವೇಳೆಗೆ ಯಶಸ್ವಿನಿ ಕಾರ್ಡ್ : ಕೆ ಎನ್‌ ರಾಜಣ್ಣ

ಬೆಂಗಳೂರು

    ರಾಜ್ಯದ ಎಲ್ಲಾ ಅರ್ಹ ರೈತರಿಗೆ ಈ ತಿಂಗಳ ಅಂತ್ಯದ ವೇಳೆಗೆ ಯಶಸ್ವಿನಿ ಕಾರ್ಡ್ ವಿತರಣೆ ಮಾಡಲಾಗುವುದು ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ. ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿಂದು ಸದಸ್ಯ ಪ್ರತಾಪ್ ಸಿಂಹ ನಾಯಕ ಅವರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಸಹಕಾರ ಸಂಘಗಳಲ್ಲಿರುವ ಎಲ್ಲಾ ರೈತರು ಇದರ ಪ್ರಯೋಜನ ಪಡೆಯಬಹುದಾಗಿದೆ.

    ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿಯೂ ಯಶಸ್ವಿನಿ ಕಾರ್ಡುದಾರರಿಗೆ ಉಚಿತ ಚಿಕಿತ್ಸಾ ಸೌಲಭ್ಯವನ್ನು ದೊರೆಯುವಂತೆ ಮಾಡಲಾಗುವುದು ಎಂದರು.

    ಈ ತಿಂಗಳ ಅಂತ್ಯದೊಳಗೆ ಪ್ರತಿಯೊಬ್ಬ ಅರ್ಹ ಫಲಾನುಭವಿಗಳಿಗೆ ಯಶಸ್ವಿನ ಕಾರ್ಡ್ ನೀಡುವ ಗುರಿಯನ್ನು ಹೊಂದಲಾಗಿದೆ. ಈಗಾಗಲೇ ಯಶಸ್ವಿನಿ ಯೋಜನೆಯಡಿ ನೊಂದಾಯಿಸಿಕೊಂಡಿರುವ ಬಹುತೇಕ ಎಲ್ಲ ಕುಟುಂಬಗಳ 12.89 ಲಕ್ಷ ಕಾರ್ಡ್ಗಳ ಡೇಟಾ ಎಂಟ್ರಿ ಮಾಡಿ ಕಾರ್ಡ್ಗಳನ್ನು ತಯಾರಿಸಿ ಜನವರಿ 7ರ ಅಂತ್ಯಕ್ಕೆ ಎಲ್ಲ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಗೆ ರವಾನಿಸಲಾಗಿದೆ. ಉಪನಿಬಂಧಕರು ಸಂಬAಸಿದ ಸಹಕಾರ ಸಂಘಗಳ ಮೂಲಕ ಫಲಾನುಭವಿಗಳಿಗೆ ಕಾರ್ಡ್ಗಳನ್ನು ರವಾನಿಸುವ ವ್ಯವಸ್ಥೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.

    ಕುಟುಂಬದಲ್ಲಿನ ಸದಸ್ಯರನ್ನು ಹೊರತುಪಡಿಸಿ ಬೇರೆ ಸದಸ್ಯರನ್ನು ಸೇರಿಸಿರುವುದು, ಒಂದಂಕ್ಕಿಂತ ಹೆಚ್ಚು ಸಂಘಗಳಲ್ಲಿ ಸೇರ್ಪಡೆಯಾಗಿರುವುದು ಹೀಗೆ ಬೇರೆ ಬೇರೆ ಕಾರಣಗಳಿಂದಾಗಿ 18,153 ಕುಟುಂಬಗಳ ಕಾರ್ಡ್ಗಳು ಅಂದರೆ ಅಂದರೆ ಸುಮಾರು 70 ಸಾವಿರ ಸದಸ್ಯರಿಗೆ ಸಂಬAಧಿಸಿದAತೆ ಡೇಟಾ ಎಂಟ್ರಿ ಮಾಡಲು ಸಾಧ್ಯವಾಗಿಲ್ಲ ಎಂದು ಕಾರ್ಡ್ ಮುದ್ರಣಕಾರರು ತಿಳಿಸಿದ್ದಾರೆಂದು ಮಾಹಿತಿ ನೀಡಿದರು.

      ಇಂತಹ ದೋಷಗಳನ್ನು ಜಿಲ್ಲಾವಾರು ಪರಿಶೀಲಿಸಿ ಅರ್ಹ ಫಲಾನುಭವಿಗಳು ಎಂದು ದೃಢಪಟ್ಟಲ್ಲಿ ಅಂತಹ ಎಲ್ಲ ಸದಸ್ಯರಿಗೆ ಈ ತಿಂಗಳ ಅಂತ್ಯದೊಳಗೆ ಕಾರ್ಡ್ಗಳನ್ನು ವಿತರಿಸಲಾಗುವುದು. ಆದರೂ ಅರ್ಹ ಫಲಾನುಭವಿಗಳಿಗೆ ಕಾರ್ಡ್ ಲಭ್ಯವಾಗದೆ ಇರುವುದರಿಂದ ಚಿಕಿತ್ಸೆ ಪಡೆಯಲು ವ್ಯತ್ಯಯವಾಗದಂತೆ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ.

      ಈ ಯೋಜನೆಯಡಿ ನೋಂದಣಿಯಾಗಿರುವ 45 ಲಕ್ಷ ಸದಸ್ಯರಿಗೆ ಸಂಬAಸಿದAತೆ ಪ್ರತಿ ಕುಟುಂಬಕ್ಕೆ ಒಂದು ಕಾರ್ಡ್ನಂತೆ 12.89 ಲಕ್ಷ ಕಾರ್ಡ್ಗಳನ್ನು ಫಲಾನುಭವಿ ಕುಟುಂಬಗಳಿಗೆ ಜ.7ರೊಳಗೆ ಉಪನಿಬಂಧಕರ ಕಚೇರಿ ಮೂಲಕ ರವಾನಿಸಲಾಗಿದೆ ಎಂದರು. ಸದಸ್ಯ ಕೆ.ಎ.ತಿಪ್ಪೆಸ್ವಾಮಿ ಅವರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದ ಸಹಕಾರಿಗಳು ಮತ್ತು ಜನಪ್ರತಿನಿಗಳು ಯಶಸ್ವಿನಿ ಯೋಜನೆಯನ್ನು ಮರು ಜಾರಿಗೊಳಿಸಲು ಒತ್ತಾಯ ಮಾಡಿದ ಹಿನ್ನಲೆಯಲ್ಲಿ ಸರ್ಕಾರ ಕಳೆದ ಬಜೆಟ್‌ನಲ್ಲೇ ಪರಿಷ್ಕೃತ ಯೋಜನೆಯನ್ನು ಜಾರಿಗೊಳಿಸಿ ಘೋಷಣೆ ಮಾಡಿದೆ.

     ಇದನ್ನು ಎರಡು ಬಾರಿ ವಿಸ್ತರಣೆ ಮಾಡಲಾಗಿತ್ತು. ಒಟ್ಟು 30 ಲಕ್ಷ ಸದಸ್ಯರನ್ನು ನೋಂದಣಿ ಮಾಡುವ ಗುರಿ ನಿಗದಪಡಿಸಿದ್ದು, ಈಗಾಗಲೇ 45 ಲಕ್ಷಕ್ಕೂ ಹೆಚ್ಚು ಸದಸ್ಯರು ನೋಂದಣಿ ಮಾಡಿಕೊಂಡಿದ್ದಾರೆ. ರಾಜ್ಯಾದ್ಯಂತ ಇರುವ ಯಶಸ್ವಿನಿ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಫಲಾನುಭವಿಗಳಿಗೆ ಚಿಕಿತ್ಸೆ ಕಲ್ಪಿಸಲು ಈ ಯೋಜನೆಯ ಅವಯನ್ನು ಡಿಸೆಂಬರ್ 23ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಉತ್ತರಿಸಿದರು.

    ಯಶಸ್ವಿನಿ ಯೋಜನೆಗೆ ವಯಸ್ಸಿನ ಮಿತಿಯಿಲ್ಲ. ಅಲ್ಲದೆ ಖಾಸಗಿ ವಿಮಾ ಏಜೆನ್ಸಿಯವರೊಂದಿಗೆ ನಾವು ಒಪ್ಪಂದ ಮಾಡಿಕೊಂಡಿರುವುದಿಲ್ಲ. 60 ವರ್ಷ ಮಿತಿ ದಾಟಿದರೆ ವಿಮೆ ಕೊಡಲು ಬರುವುದಿಲ್ಲ ಎಂದು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap