ನವದೆಹಲಿ :
ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದ ‘ಮೊಹಬ್ಬತ್ ಕಿ ದುಕಾನ್’ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕೆಲವು ಕ್ರಮಗಳು ಅಲ್ಪಸಂಖ್ಯಾತರು, ದಲಿತ ಮತ್ತು ಬುಡಕಟ್ಟು ಸಮುದಾಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು,”ಭಾರತದಲ್ಲಿ 1980 ರ ದಶಕದಲ್ಲಿ ದಲಿತರು ಎದುರಿಸಿದ್ದ ಪರಿಸ್ಥಿತಿಯನ್ನು ಇಂದು ಮುಸ್ಲಿಮರು ಎದುರಿಸುತ್ತಿದ್ದಾರೆ. ಇದರ ವಿರುದ್ಧ ಅಭಿಮಾನದಿಂದ ಹೋರಾಡಬೇಕು” ಎಂದು ಹೇಳಿದ್ದಾರೆ.
“ಕೇಂದ್ರದ ಕ್ರಮಗಳು ಮುಸ್ಲಿಮರ ಮೇಲೆ ನೇರವಾಗಿ ಪರಿಣಾಮ ಬೀರುತ್ತಿವೆ. ಆದರೆ ವಾಸ್ತವವಾಗಿ, ಇದನ್ನು ಎಲ್ಲಾ ಸಮುದಾಯಗಳಿಗೆ ಮಾಡಲಾಗುತ್ತಿದೆ. ನೀವು(ಮುಸ್ಲಿಮರು) ಹೇಗೆ ದಾಳಿಗೆ ಒಳಗಾಗುತ್ತೀರಿ, ಹಾಗೆಯೇ ಸಿಖ್ಖರು, ಕ್ರಿಶ್ಚಿಯನ್ನರು, ದಲಿತರು ಮತ್ತು ಬುಡಕಟ್ಟು ಜನಾಂಗದವರೂ ದಾಳಿ ಒಳಗಾಗುತ್ತಿದದಾರೆ. ಆದರೆ ನೀವು ದ್ವೇಷದಿಂದ ದ್ವೇಷವನ್ನು ಕತ್ತರಿಸಲು ಸಾಧ್ಯವಿಲ್ಲ. ಪ್ರೀತಿ ಮತ್ತು ವಾತ್ಸಲ್ಯದಿಂದ ಮಾತ್ರ ಸಾಧ್ಯ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಇಂದು ಭಾರತದಲ್ಲಿ ಮುಸ್ಲಿಮರಿಗೆ ಏನಾಗುತ್ತಿದೆಯೋ ಅದನ್ನು 1980 ರ ದಶಕದಲ್ಲಿ ದಲಿತರು ಅನುಭವಿಸಿದ್ದಾರೆ. ನೀವು 1980 ರ ದಶಕದಲ್ಲಿ ಉತ್ತರ ಪ್ರದೇಶಕ್ಕೆ ಹೋಗಿದ್ದರೆ, ದಲಿತ ಪರಿಸ್ಥಿತಿ ತಿಳಿಯುತ್ತಿತ್ತು. ನಾವು ಅದನ್ನು ಸವಾಲು ಸ್ವೀಕರಿಸಬೇಕು ಮತ್ತು ಅದರ ವಿರುದ್ಧ ಹೋರಾಡಬೇಕು ಎಂದಿದ್ದಾರೆ.
ರಾಹುಲ್ ಗಾಂಧಿ ಅವರು ಆರು ದಿನಗಳ ಅಮೇರಿಕಾ ಪ್ರವಾಸದಲ್ಲಿ ಭಾರತೀಯ ವಲಸಿಗರೊಂದಿಗೆ ಸಂವಾದ ನಡೆಸುತ್ತಿದ್ದಾರೆ ಮತ್ತು ಕಾರ್ಯಕ್ರಮದ ವೇಳೆ ರಾಹುಲ್ ಗಾಂಧಿ ಅವರು “ಆರ್ಥಿಕ ಅಸಮಾನತೆ” ಬಗ್ಗೆಯೂ ಮಾತನಾಡಿದ್ದಾರೆ ಮತ್ತು ಕೆಲವರು ಜೀವನ ಸಾಗಿಸಲು ಕಷ್ಟಪಡುತ್ತಿದ್ದರೆ, “ಐದು ಜನರ ಬಳಿ ಲಕ್ಷ ಕೋಟಿ ರೂ. ಇದೆ” ಎಂದಿದ್ದಾರೆ.








