ಅವಕಾಶ ಬಳಸಿಕೊಂಡು ಮುನ್ನಡೆಯಬೇಕು;ಸುರೇಶ್‍ರಾಜ್

ಚಿತ್ರದುರ್ಗ:

             ಪ್ರತಿಯೊಬ್ಬರ ಬದುಕಿನಲ್ಲಿ ಅವಕಾಶ ಸಿಗುತ್ತದೆ. ಆದರೆ ಯಶಸ್ಸು ಕೊಡುವುದಿಲ್ಲ. ಅದಕ್ಕಾಗಿ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಯಶಸ್ಸು ಕಂಡುಕೊಳ್ಳಬೇಕು ಎಂದು ವಾಸವಿ ವಿದ್ಯಾಸಂಸ್ಥೆಯ ಅಧ್ಯಕ್ಷ ಪಿ.ಎಲ್.ಸುರೇಶ್‍ರಾಜು ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.

             ಭಾರತೀಯ ಜೈನ್ ಸಂಘಟನೆಯಿಂದ ವಾಸವಿ ಶಾಲೆಯಲ್ಲಿ ಶನಿವಾರ ಪ್ರೌಢಶಾಲಾ ವಿದ್ಯಾರ್ಥಿನಿಯರಿಗಾಗಿ ಏರ್ಪಡಿಸಲಾಗಿದ್ದ ಸ್ಮಾರ್ಟ್ ಗರ್ಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

             ಆಧುನಿಕ ಜೀವನದಲ್ಲಿ ಯುವ ಪೀಳಿಗೆ ಬಹಳ ಬೇಗ ಆಕರ್ಷಣೆಗೆ ಒಳಗಾಗುತ್ತಿದೆ.ಸತ್ಯ ಮಾರ್ಗದ ಕಡೆಗೆ ಹದಿಹರೆಯದವರನ್ನು ಕೊಂಡೊಯ್ಯಲು ಭಾರತೀಯ ಜೈನ್ ಸಂಘಟನೆ ಹಾಗೂ ಇತರೆ ಸಂಘ ಸಂಸ್ಥೆಗಳು ನಿರಂತರವಾಗಿ ಸೇವೆ ಸಲ್ಲಿಸುತ್ತಿವೆ. ಅದರ ಪ್ರಯೋಜನ ಪಡೆದುಕೊಳ್ಳಿ ಎಂದು ತಿಳಿಸಿದರು.

             ಗುಜರಾತ್‍ನಿಂದ ಆಗಮಿಸಿರುವ ಭಾರತೀಯ ಜೈನ್ ಸಂಘಟನೆಯ ಅಸ್ಮಿತಜೈನ್ ಎರಡು ದಿನಗಳ ಕಾಲ ನಡೆಸಿಕೊಡುವ ಸ್ಮಾರ್ಟ್ ಗರ್ಲ್ ಕಾರ್ಯಕ್ರಮದದಲ್ಲಿ ವಿಶೇಷವಾಗಿ ಟೀನ್ ಏಜ್ ಹೆಣ್ಣುಮಕ್ಕಳ ಜೀವನಕ್ಕೆ ಅತ್ಯವಶ್ಯಕವಾಗಿ ಬೇಕಾಗಿರುವ ಕೆಲವು ಸಂಗತಿಗಳನ್ನು ತಿಳಿಸಿಕೊಡಲಿದ್ದಾರೆ. ಗಮನಕೊಟ್ಟು ಕೇಳಿ ಮುಂದೊಂದು ದಿನ ನಿಮ್ಮ ಭವಿಷ್ಯವನ್ನು ಉಜ್ವಲಗೊಳಿಸಲಿದೆ ಎಂದರು.
ನಿಮ್ಮ ಮನಸ್ಸಿನಲ್ಲಿರುವ ಕಲ್ಮಶವನ್ನು ತೆಗೆದು ಹಾಕಿ ಗೊಂದಲ ಸಮಸ್ಯೆಗಳು ಏನೆ ಇದ್ದರೂ ಅವರ ಬಳಿ ಹೇಳಿಕೊಳ್ಳಿ ಖಂಡಿತವಾಗಿಯೂ ಪರಿಹಾರ ಸಿಗುತ್ತದೆ. ಹಠ ಬಿಟ್ಟು ಸಾರ್ಥಕ ಜೀವನ ನಡೆಸಲು ಅಸ್ಮಿತ ಜೈನ್‍ರವರ ಸಲಹೆಗಳನ್ನು ಪಡೆದುಕೊಂಡು ನಿಮ್ಮ ಭವಿಷ್ಯವನ್ನು ಉತ್ತಮಗೊಳಿಸಿಕೊಳ್ಳಿ ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.

             ಭಾರತೀಯ ಜೈನ್ ಸಂಘಟನೆಯ ಜಿಲ್ಲಾಧ್ಯಕ್ಷ ಅರವಿಂದಭಾಪ್ನ, ಕಾರ್ಯದರ್ಶಿ ವಿಕ್ರಂ, ಇನ್ನರ್‍ವೀಲ್ ಕ್ಲಬ್ ಅಧ್ಯಕ್ಷೆ ಶೈಲಜವಿಶ್ವನಾಥ್, ಕಾರ್ಯದರ್ಶಿ ಶಾಲಿನಿ, ರೋಟರಿ ಕ್ಲಬ್ ಚಿತ್ರದುರ್ಗ ವಿಂಡ್‍ಮಿಲ್ ಸಿಟಿ ಅಧ್ಯಕ್ಷೆ ಜಯಶ್ರೀಷಾ, ಶಾಲೆಯ ಮುಖ್ಯ ಶಿಕ್ಷಕಿ ವೇದಿಕೆಯಲ್ಲಿದ್ದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link