ನವದೆಹಲಿ:
ಅಸ್ಸಾಂ ಮೂಲದ ರೂಪಾಲಿ ಬರುವಾ ಅವರನ್ನು ಅಶೀಶ್ ವಿದ್ಯಾರ್ಥಿ ವರಿಸಿದ್ದಾರೆ. ಈ ಹಿಂದೆ ಖ್ಯಾತ ನಟಿ ಶಕುಂತಲಾ ಬರುವಾ ಅವರ ಪುತ್ರಿ ನಟಿ, ರಂಗಭೂಮಿ ಕಲಾವಿದೆ ಹಾಗೂ ಗಾಯಕಿ ರಾಜೋಶಿ ಬರುವಾ ಅವರನ್ನು ಆಶೀಶ್ ವಿದ್ಯಾರ್ಥಿ ವಿವಾಹವಾಗಿದ್ದರು.
ಆಶೀಶ್ ವಿದ್ಯಾರ್ಥಿ ವರಿಸಿರುವ ರೂಪಾಲಿ ಬರುವಾ ಗುವಾಹಟಿ ಮೂಲದವರಾಗಿದ್ದು, ಫ್ಯಾಶನ್ ಉದ್ಯಮಿಯಾಗಿದ್ದಾರೆ. ಬಹುಭಾಷಾ ನಟರಾಗಿರುವ ಆಶೀಶ್ ವಿದ್ಯಾರ್ಥಿ, ಹಿಂದಿ, ತೆಲುಗು, ತಮಿಳು, ಕನ್ನಡ, ಮಲಯಾಳಂ ಮರಾಠಿ ಚಿತ್ರಗಳಲ್ಲಿ ನಟಿಸಿದ್ದಾರೆ. ಕಾಲ್ ಸಂಧ್ಯಾ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ಆಶೀಶ್ ವಿದ್ಯಾರ್ಥಿ, ಕನ್ನಡದಲ್ಲಿ ಕೋಟಿಗೊಬ್ಬ, ನಮ್ಮಣ್ಣ, ತಂದೆಗೆ ತಕ್ಕ ಮಗ, ಎಕೆ 47 ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.