ಜೈಪುರ:
2020ರಲ್ಲಿ ತಮ್ಮ ಸರ್ಕಾರ ಉಳಿಸಲು ಹಿಂದಿನ ಮುಖ್ಯಮಂತ್ರಿ ವಸುಂಧರಾ ರಾಜೇ ನೆರವು ನೀಡಿದ್ದರು ಎಂಬ ಹಾಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಇತ್ತೀಚಿಗೆ ನೀಡಿರುವ ಹೇಳಿಕೆಯಿಂದ ರಾಜಸ್ಥಾನ ಕಾಂಗ್ರೆಸ್ ನಲ್ಲಿ ಉಂಟಾಗಿರುವ ಹೊಸ ಬಿಕ್ಕಟ್ಟಿನ ನಡುವೆ ಈ ಸಭೆ ನಡೆಸಲಾಗುತ್ತಿದೆ.
ವಸುಂಧರಾ ರಾಜೇ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ‘ರಾಜಸ್ಥಾನ ಸರ್ಕಾರದ ನಿಷ್ಕ್ರಿಯತೆ’ ವಿರುದ್ಧ ಸಚಿನ್ ಪೈಲಟ್ ಜನ ಸಂಘರ್ಷ ಯಾತ್ರೆ ಆರಂಭಿಸಿದ್ದಾರೆ. ಐದು ದಿನಗಳ ಜನಸಂಘರ್ಷ ಯಾತ್ರೆ ಗುರುವಾರ ಅಜ್ಮೀರ್‌ನಿಂದ ಪ್ರಾರಂಭವಾಯಿತು ಮತ್ತು ಜೈಪುರದಲ್ಲಿ ಮುಕ್ತಾಯಗೊಳ್ಳಲಿದೆ.