ಅಶ್ಲೀಲ ಚಿತ್ರ ಅಪ್‍ಲೋಡ್ ಮಾಡುತ್ತಿದ್ದವನ ಬಂಧನ

ದಾವಣಗೆರೆ:

ಮಹಿಳೆಯೋರ್ವರ ಹೆಸರಿನಲ್ಲಿ ನಕಲಿ ಫೇಸ್‍ಬುಕ್ ಖಾತೆ ತೆರೆದು, ಅಶ್ಲೀಲ ಪೋಟೋಗಳನ್ನು ಅಪ್‍ಲೋಡ್ ಮಾಡುತ್ತಿದ್ದ ಆರೋಪಿಯನ್ನು ದಾವಣಗೆರೆಯ ಸಿಇಎನ್ ಅಪರಾಧ ವಿಭಾಗದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ತಿಳಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿನ ಭಾಷನಗರ ಮುಖ್ಯ ರಸ್ತೆ ಫ್ರೇಂಡ್ಸ್ ಕಮ್ಯೂನಿಕೇಶನ್‍ನ ತನ್ವೀರ್ ಅಹ್ಮದ್ ತಬೇರಿಜ್ ಬಂಧಿತ ಆರೋಪಿಯಾಗಿದ್ದು, ಈತ ಕೆಟಿಜೆ ನಗರದ ನಿವಾಸಿಯಾಗಿರುವ ಮಹಿಳೆಯೊಬ್ಬರ ಹೆಸರಿನಲ್ಲಿ ನಕಲಿ ಪೇಸ್‍ಬುಕ್ ಖಾತೆ ತೆರೆದು, ಅದರಲ್ಲಿ ಆಕೆಯ ಅಶ್ಲೀಲವಾದ ಪೋಟೊಗಳನ್ನು ಅಪ್ ಲೋಡ್ ಮಾಡಿ ಪೊನ್ ನಂಬರ್ ಅನ್ನು ಫೇಸ್ ಬುಕ್ ಖಾತೆಯಲ್ಲಿ ನಮೂದಿಸಿ ಅಶ್ಲೀಲವಾಗಿ ಕಾಮೇಂಟ್ ಮಾಡುತ್ತಿದ್ದ. ಈ ಹಿನ್ನೆಲೆಯಲ್ಲಿ ಈತನನ್ನು ಬಂಧಿಸಲಾಗಿದೆ ಎಂದು ಹೇಳಿದರು.

ಈತನ ವರ್ತನೆಯಿಂದ ನೋಂದ ಮಹಿಳೆಯು 2018ರ ಜುಲೈ 19ರಂದು ದಾವಣಗೆರೆ ಸಿಇಎನ್ ಅಪರಾಧ ವಿಭಾಗದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಆರೋಪಿಯ ಪತ್ತೆಗಾಗಿ ಸದರಿ ಫೇಸ್‍ಬುಕ್ ಖಾತೆಯ ಯುಅರ್‍ಎಲ್ & ಸ್ಕ್ರೀನ್ ಶಾಟ್ ಅನ್ನು ಪಡೆದು ಅಮೇರಿಕಾದಲ್ಲಿನ ಪೇಸ್‍ಬುಕ್ ಕಂಪನಿಗೆ ಕಳುಹಿಸಿದ್ದರು. ಕಂಪನಿಯವರು ನಕಲಿ ಫೇಸ್‍ಬುಕ್ ಖಾತೆಯನ್ನು ತೆರೆದ ವ್ಯಕ್ತಿಗೆ ಸಂಬದಿಸಿದಂತೆ ಐಪಿ ವಿಳಾಸಗಳನ್ನು ಕಳುಹಿಸಿದ್ದರು. ಈ ಐಪಿ ವಿಳಾಸಕ್ಕೆ ಸಂಬಂಧಿಸಿದಂತೆ ಸಿಡಿಅರ್ ಕಾಲ್ ಡಿಟೈಲ್ ಮಾಹಿತಿ ಮತ್ತು ಸಿಎಎಫ್ ಮಾಹಿತಿ ಪಡೆದು ಆರೋಪಿಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆಂದು ಮಾಹಿತಿ ನೀಡಿದರು.

ಆರೋಪಿ ತನ್ವೀರ್ ಅಹ್ಮದ್ ತಬೇರಿಜ್‍ನನ್ನು ಸೋಮವಾರ ವಶಕ್ಕೆ ಪಡೆದು ವಿಚಾರಣೆ ಪಡೆಸಿದ ಸಂದರ್ಭದಲ್ಲಿ ಮಹಿಳೆಯ ಹೆಸರಿನಲ್ಲಿ ನಕಲಿ ಖಾತೆ ತೆರೆದು, ಅಶ್ಲೀಲ ಚಿತ್ರ ಹಾಕುತ್ತಿದ್ದ ಬಗ್ಗೆ ಒಪ್ಪಿಕೊಂಡಿದ್ದಾನೆ. ಮಹಿಳೆ ಮೇಲೆ ಇದ್ದ ಹಳೇ ದ್ವೇಷಕ್ಕಾಗಿ ಈತ ಆಕೆಯ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ಮಹಿಳೆಯ ಮುಖದ ಪೋಟೋವನ್ನು ಅಶ್ಲೀಲ ಚಿತ್ರಕ್ಕೆ ಜೋಡಿಸಿ ಅಶ್ಲೀಲವಾಗಿ ಕಮೆಂಟ್ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಆರೋಪಿತನಿಂದ ಕೃತ್ಯಕ್ಕೆ ಬಳಸಿದ ಮೊಬೈಲ್ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರಪಡಿಸಲಾಗಿದೆ ಎಂದು ಅವರು ವಿವರಿಸಿದರು.

ಕಾರ್ಯಾಚರಣೆಯಲ್ಲಿ ಸಿಇಎನ್ ಪೊಲೀಸ್ ಠಾಣೆ ಪಿಐ ದೇವರಾಜ್ ಹಾಗೂ ಸಿಬ್ಬಂದಿಗಳಾದ ರಾಮಚಂದ್ರ ಜಾಧವ್, ಪ್ರಕಾಶ್, ರವಿ, ಸುರೇಶ್, ಸಚಿನ್, ಲೋಹಿತ್, ವೀರಭದ್ರಪ್ಪ, ರಮೇಶ್ ಮತ್ತಿತರರು ಭಾಗವಹಿಸಿದ್ದರು.
ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಸಿಇಎನ್ ಅಪರಾಧ ಪೊಲೀಸ್ ಠಾಣೆಯೂ ಇದ್ದು, ದೂರು ನೀಡಬಹುದು. ಅಲ್ಲಿನ ಇನ್ಸ್‍ಪೆಕ್ಟರ್ ದೂರವಾಣಿ ಸಂಖ್ಯೆ 8277981962ಗೆ ಸಂಪರ್ಕಿಸಬಹುದು ಎಂದರು.

Recent Articles

spot_img

Related Stories

Share via
Copy link
Powered by Social Snap