ಆಂಧ್ರ ಸಿಎಂ ನಾಯ್ಡು ವಿರುದ್ಧ ಬಂಧನ ವಾರೆಂಟ್

ಹೈದರಾಬಾದ್:

      ಮಹಾರಾಷ್ಟ್ರ ನ್ಯಾಯಾಲಯವೊಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ವಿರುದ್ಧ ಬಂಧನ ವಾರೆಂಟ್ ಹೊರಡಿಸಿದೆ. 2010ರ ಬಬ್ಲಿ ಯೋಜನೆ ಗಲಭೆಗೆ ಸಂಬಂಧಿಸಿದಂತೆ ನಾಯ್ಡು ಹಾಗೂ ಇನ್ನಿತರ 15 ಮಂದಿ ವಿರುದ್ಧ ವಾರೆಂಟ್ ಜಾರಿಯಾಗಿದೆ.

      ಚಂದ್ರಬಾಬು ನಾಯ್ಡು ಅವರು ಪ್ರತಿಪಕ್ಷದಲ್ಲಿದ್ದ ಸಂದರ್ಭದಲ್ಲಿ ಮಹಾರಾಷ್ಟ್ರ ಸರಕಾರ ಗೋದಾವರಿ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಬಾಬ್ಲಿ ಆಣೆಕಟ್ಟು ಯೋಜನೆ ವಿರೋಧಿಸಿ ನಾಂದೇಡ್ ಜಿಲ್ಲೆಯ ಧರ್ಮಾಬಾದ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಮಹಾರಾಷ್ಟ್ರ ಪೊಲೀಸರು ನಾಯ್ಡು ಹಾಗೂ ಬೆಂಬಲಿಗರನ್ನು ಬಂಧಿಸಿದ್ದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದರು.

      ನಾಯ್ಡು ಜತೆ ಅಲ್ಲಿನ ಜಲ ಸಂಪನ್ಮೂಲ ಸಚಿವ ದೇವಿನೇನಿ ಉಮಾಮಹೇಶ್ವರ ರಾವ್, ಸಮಾಜ ಕಲ್ಯಾಣ ಸಚಿವ ಎನ್.ಆನಂದ್ ಬಾಬು, ಮಾಜಿ ಶಾಸಕ ಜಿ.ಕಮಲಾಕರ್ (ಟಿಡಿಪಿ ಬಿಟ್ಟು ಟಿಆರ್‌ಎಸ್ ಸೇರಿದವರು) ಸೇರಿದಂತೆ ತೆಗಲು ದೇಶಂ ಪಾರ್ಟಿಯ ಕಾರ್ಯಕರ್ತರು ಸಹ ಈ ಪ್ರಕರಣದಲ್ಲಿ ಭಾಗೀದಾರರಾಗಿದ್ದಾರೆ. 

      ಧರ್ಮಾಬಾದ್ ಎಫ್ ಸಿ ಜೆಎಂ ನ್ಯಾಯಾಲಯವು, ನಾಯ್ಡು ಸೇರಿದಂತೆ ಎಲ್ಲಾ ಆರೋಪಿಗಳನ್ನು ಸೆಪ್ಟೆಂಬರ್ 21ರಂದು ವಿಚಾರಣೆಗೆ ಖುದ್ದು ಹಾಜರು ಪಡಿಸುವಂತೆ ಆದೇಶ ನೀಡಿದೆ.
    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ