ಆಕಸ್ಮಿಕ ಬೆಂಕಿ ಕಚೇರಿ ಭಸ್ಮ

ಬೆಂಗಳೂರು:

  ನಗರದ ಪುರಭವನದ ಬಳಿಯಿರುವ ಯೂನಿಟಿ ಕಟ್ಟಡದಲ್ಲಿ ಚೆಮ್ಮನ್ನೂರು ಜ್ಯೂವೆಲ್ಲರ್ಸ್‍ನ ಮೇಲ್ಮಹಡಿಯಲ್ಲಿರುವ ಕಚೇರಿಗೆ ಗುರುವಾರ ಬೆಳಗ್ಗೆ ಆಕಸ್ಮಿಕ ಬೆಂಕಿ ತಗುಲಿ ಪೀಠೋಪಕರಣಗಳು, ಕಂಪ್ಯೂಟರ್‍ಗಳು ದಾಖಲೆಪತ್ರಗಳು ಸುಟ್ಟು ಭಸ್ಮವಾಗಿವೆ.

  ಚೆಮ್ಮನ್ನೂರ್ ಜ್ಯೂವೆಲ್ಲರ್ಸ್‍ನ ಮೇಲ್ಮಹಡಿಯಲ್ಲಿರುವ ಕಚೇರಿಯಲ್ಲಿ ಬೆಳಿಗ್ಗೆ 6ರವೇಳೆ ವಿದ್ಯುತ್‍ಶಾರ್ಟ್ ಸಕ್ರ್ಯೂರ್ಟ್‍ನಿಂದ ಆಕಸ್ಮಿಕ ಬೆಂಕಿ ತಗುಲಿದೆ.ಬೆಂಕಿಯು ಸ್ವಲ್ಪ ಹೊತ್ತಿನಲ್ಲಿಯೇ ಇಡೀ ಕಚೇರಿ ಆವರಿಸಿ ದಟ್ಟ ಹೊಗೆ ಹೊರಬರಲಾರಂಭಿಸಿದೆ.

  ಕಚೇರಿಯಿಂದ ಬೆಂಕಿ ಹೊಗೆ ಹೊರಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಮಾಹಿತಿ ನೀಡಿದ ತಕ್ಷಣ ಸ್ಥಳಕ್ಕಾಮಿಸಿದ ಆಗ್ನಿಶಾಮಕ ದಳದ ಎರಡು ವಾಹನಗಳು ಬೆಂಕಿ ನಂದಿಸಿವೆ.ಕಚೇರಿಯಲ್ಲಿ ಯಾರೂ ಇಲ್ಲದಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link