ಆರ್ಡರ್ ಮಾಡಿದ್ದು 1 ಲಕ್ಷ ರೂ. ಬೆಲೆಯ ಐಫೋನ್, ಆನ್ಲೈನ್ನಲ್ಲಿ ಬಂದಿದ್ದು ಮಾತ್ರ 2 ಕ್ಯಾಡ್ಬರಿ ಚಾಕೋಲೇಟ್
ಹಲವು ಬಾರಿ ಆನ್ಲೈನ್ ನಲ್ಲಿ ಆರ್ಡರ್ ಮಾಡಿದ್ದು ಒಂದು ವಸ್ತುವಾದರೆ, ಕೈಗೆ ಸಿಗುವುದು ಬೇರೆ ಯಾವುದೋ ವಸ್ತವಾದ ಹಲವು ಘಟನೆಗಳು ಈ ಹಿಂದೆ ನಡೆದಿದೆ. ಇದೀಗ ಅಂಥಹದ್ದೆ ಒಂದು ಘಟನೆ ಆಪಲ್ ಐಫೋನ್ ವಿಷಯದಲ್ಲಿ ನಡೆದಿದೆ. ಇಂಗ್ಲೆಂಡ್ನ ಡೇನಿಯಲ್ ಎನ್ನುವ ವ್ಯಕ್ತಿ 1 ಲಕ್ಷ ರೂಗಳ ಆಪಲ್ 13 ಐಫೋನ್‌ಅನ್ನು ಆನ್ಲೈನ್ ನಲ್ಲಿ ಆರ್ಡರ್ ಮಾಡಿದ್ದರು.
ಆದರೆ ಡೆಲಿವರಿಯಾದ ಕವರ್ನಲ್ಲಿ 2 ಕ್ಯಾಡ್ಬರಿ ಚಾಕೋಲೇಟ್ ಟಾಯ್ಲೆಟ್ ಕವರ್ನಲ್ಲಿ ಸುತ್ತಿಕೊಂಡಿತ್ತು. ಇದನ್ನು ನೋಡಿ ಡೇನಿಯಲ್ ಗಾಬರಿಗೊಂಡಿದ್ದಾರೆ.
ಡಿಸೆಂಬರ್2ರಂದು ಐಪೋನ್ಅನ್ನು ಆರ್ಡರ್ ಮಾಡಿದ ಡೇನಿಯಲ್ ಅವರು ಡಿ. 17ರವರೆಗೆ ಕಾದಿದ್ದರು. ಆದರೆ ಆರ್ಡರ್ ಬರದ ಕಾರಣದ ಟ್ರ್ಯಾಕಿಂಗ್ ಚೆಕ್ ಮಡಿದ ವೇಳೆ ಸ್ಟಾಕ್ ಖಾಲಿಯಾದ ಕಾರಣ ತಡವಾಗುತ್ತದೆ ಎಂದು ಮೆಸೇಜ್ ನೋಡಿದ್ದರು.
ಕೊನೆಗೂ ಡಿ.17ರಂದು ಪಾರ್ಸಲ್ ಬಂದಿದ್ದನ್ನು ನೀಡಿ ಡೇನಿಯಲ್ ಸಂತಸಗೊಂಡಿದ್ದರು. ಖುಷಿಯಿಂದ ಪ್ಯಾಕ್ ಓಪನ್ ಮಾಡಿದಾಗ ಡೇನಿಯಲ್ ಶಾಕ್ಆಗಿದ್ದರು. ಯಾಕೆಂದರೆ ಪಾರ್ಸಲ್ನಲ್ಲಿ ಎರಡು ವೈಟ್ ಓರಿಯೋ ಚಾಕೋಲೆಟ್ಗಳು ಟಾಯ್ಲೆಟ್ ಪೇಪರ್ನಲ್ಲು ಸುತ್ತಿಕೊಂಡಿದ್ದವು.
ಈ ಕುರಿತು ಡೇನಿಯಲ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಐಪೋನ್ಗಾಗಿ ಕಾದು ಸುಸ್ತಾಗಿ ಕೊನೆಗೆ 24 ಮೈಲಿ ದೂರ ಹೋಗಿ ಅವರ ಪಾರ್ಸಲ್ ಡೆಲಿವರಿ ಆಗುವ ಅಂಗಡಿಗೇ ಹೋಗಿ ಕೆಳಿದೆ. ಆಗ ಅವರು ನನ್ನ ಹೆಸರಿನಲ್ಲಿ ಬಂದಿದ್ದ ಬಾಕ್ಸ್ ಕೊಟ್ಟರು. ಬಾಕ್ಸ್ ಸ್ವಲ್ಪ ಹರಿದಿತ್ತು ಆದರೆ ಭಾರವಾಗಿತ್ತು. ಹೀಗಾಗಿ ಮೊಬೈಲ್ ಇರಬಹುದೆಂದು ಭಾವಿಸಿದೆ.
ಆದರೆ ಅದರಲ್ಲಿ 2 ಚಾಕಲೋಟ್ಗಳು ಟಾಯ್ಲೆಟದದ ಪೇಪರ್ನಲ್ಲಿ ಸುತ್ತಿಕೊಂಡಿತ್ತು. ಅಲ್ಲದೆ ತಾನು 1 ಲಕ್ಷರೂಗಳನ್ನು ಪಾವತಿ ಮಾಡಿದ್ದೆ ಎಂದು ಸಾಮಾಜಿಕ ಜಾಲತಾಣದಲ್ಲಿ ನೋವು ಹಂಚಿಕೊಂಡಿದ್ದಾರೆ.
ಈ ಕುರಿತು ಅವರು ಗ್ರಾಹಕ ರಕ್ಷಣಾ ವೇದಿಕೆಗೆ ದೂರನ್ನು ನೀಡಿದ್ದು ತನಿಖೆ ಆರಂಭವಾಗಿದೆ. ಇದು ಇಂಗ್ಲೆಂಡ್ನಲ್ಲಿ ನಡೆದ ಘಟನೆಯಾದರೂ ಭಾರತದಲ್ಲೂ ಇಂತಹ ಸಾಕಷ್ಟು ಘಟನೆಗಳು ನಡೆದಿವೆ. ನಡೆಯುತ್ತಲೂ ಇವೆ. ಹೀಗಾಗಿ ಆನ್ಲೈನ್ ಆರ್ಡರ್ ಮಾಡುವುದಕ್ಕೂ ಮೊದಲು ಎಚ್ಚರಿಕೆ ವಹಿಸುವುದು ಅಗತ್ಯ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ