ಆಪರ್ಚುನಿಟಿ ಸಂಪರ್ಕ ಕಡಿತ

ಅಮೇರಿಕಾ: 

             14ವರ್ಷದ ಹಿಂದೆ ಮಂಗಳನ ಅಂಗಳಕ್ಕೆ ಕಳುಹಿಸಿದ್ದ ನಾಸಾದ ಆಪರ್ಚುನಿಟಿ ರೋವರ್ ಅಲ್ಲಿನ ಭಾರೀ ಚಂಡಮಾರುತಕ್ಕೆ ಬಲಿಯಾಗಿರುವ ಶಂಕೆ ವ್ಯಕ್ತವಾಗಿದೆ. ಸುಮಾರು 15 ವರ್ಷಗಳಿಂದ ಮಂಗಳದ ನೆಲದಲ್ಲಿ ಗ್ರಹದ ಸಂಶೋಧನೆ ನಡೆಸಿ ನಾಸಾಕ್ಕೆ ಮಾಹಿತಿ ರವಾನಿಸುತ್ತಿದ್ದ ರೋವರ್ ಕೆಟ್ಟು ಹೋಗಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಜೂ.10ರ ಅನಂತರ ಆಪರ್ಚುನಿಟಿ ರೋವರ್ ನಾಸಾದೊಂದಿಗೆ ಸಂಪರ್ಕ ಸಾಧಿಸಿಲ್ಲ ಎಂದು ಹೇಳಲಾಗಿದ್ದು, ಧೂಳಿನ ಚಂಡಮಾರುತದಿಂದಾಗಿ ಹಾಳಾಗಿದೆ ಎನ್ನಲಾಗಿದೆ. ಸೌರ ಫ‌ಲಕದ ಮೇಲೆ ಧೂಳು ಕುಳಿತು ಬೆಳಕಿನ ಕಿರಣವನ್ನು ಅಡ್ಡಿಪಡಿ ಸುತ್ತಿರಬಹುದು, ಇದರಿಂದಾಗಿ ರೋವರ್ ಹಾನಿಗೀಡಾಗಿರಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ