ತಿಪಟೂರು
ನಗರದ ರೈಲ್ವೇ ನಿಲ್ದಾಣಕ್ಕೆ ಪ್ರತಿದಿನವೂ ಸಾವಿರಾರು ಮಂದಿ ಬಂದು ಹೋಗುತ್ತಾರೆ. ಈ ರೈಲ್ವೆನಿಲ್ದಾಣವು ಸದಾ ಜನರುಗಳಿಂದ ತುಂಬಿದ್ದು ಈ ಮಾರ್ಗದಲ್ಲಿ ದಾವಣೆಗೆರೆಯನ್ನು ಬಿಟ್ಟರೆ ತಿಪಟೂರು ರೈಲ್ವೇ ನಿಲ್ದಾಣವೇ ಇಲಾಖೆಗೆ ಆದಾಯ ತರುವಲ್ಲಿ ಎರಡನೇ ಸ್ಥಾನವನ್ನು ಪಡೆದಿದೆ. ಆದ್ದರಿಂದ ಜನರಿಗೆ ಉಪಯೋಗವಾಗಲೆಂದು ಕಿರು ಶುದ್ದ ಕುಡಿಯುವ ನೀರಿನ ಘಟಕವನ್ನು ಮಾನ್ಯ ಸಂಸದರಾದ ಎಸ್.ಪಿ.ಮುದ್ದಹನುಮೇಗೌಡರ ಸಂಸತ್ ಸದಸ್ಯರ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ನಿರ್ಮಿಸಿರುವ ಕಿರು ಶುದ್ಧ ಕುಡಿಯುವ ನೀರನ ಘಟಕವು ಕೆಟ್ಟು ನಿಂತಿದ್ದು, ಪ್ರಯಾಣಿಕರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಸಾಧ್ಯವಾದಷ್ಟು ಬೇಗ ಈ ಶುದ್ಧನೀರಿನ ಘಟಕವನ್ನು ಸರಿಪಡಿಸಬೇಕೆಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.