ಹರಿಹರ:
ಶುದ್ಧ ಕುಡಿಯುವ ನೀರಿನ ಘಟಕ ಸೇರಿದಂತೆ ಸುಮಾರು ಆರು ಕೋಟಿ ರೂ ವೇಚ್ಚದ ವಿವಿಧ ವಾರ್ಡ್‍ಗಳಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ ಎಸ್. ರಾಮಪ್ಪ ಚಾಲನೆ ನೀಡಿದರು.
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಹುದಿನಗಳಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಹಾಗೂ ರೋಗಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿತ್ತು. ಇದರ ನಿವಾರಣೆಗಾಗಿ ನಗರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಿದ್ದು ಆಸ್ಪತ್ರೆಯ ಆವರಣದಲ್ಲಿ ಒಂದು ಶುದ್ಧ ಕುಡಿಯುವ ನೀರಿನ ಘಟಕದಿಂದ ಸಾರ್ವಜನಿಕರಿಗೆ ಆನೂಕುಲವಾಗುತ್ತದೆ ಎಂದರು.
18ನೇ ವಾರ್ಡಿನಲ್ಲಿನ ಕನ್ಸರ್ವೆನ್ಸಿ ರಸ್ತೆಗೆ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ನಗರದಲ್ಲಿ ಅಲ್ಪ ಸಂಖ್ಯಾತರ ಅಭಿವೃದ್ಧಿ ಕಲ್ಯಾಣ ನಿಧಿಯಿಂದ ಗೌಸಿಯಾ ಕಾಲೋನಿ, ಪ್ರಶಾಂತ ನಗರದಕ್ಕೆ ತಲಾ ಒಂಬ್ಬತ್ತು ಲಕ್ಷದಂತೆ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಹಾಗೆಯೇ ಜಾಮಿಯಾ ಮಸಿದಿ ಹತ್ತಿರದ ಚರಂಡಿ ನಿರ್ಮಾಣಕ್ಕೆ ಏಳು ಲಕ್ಷ ಮಂಜೂರಾಗಿದೆ ಎಂದು ಹೇಳಿದರು.
ಇದಲ್ಲದೆ 2018-19ನೇ ಸಾಲಿನ ಎಸ್‍ಎಫ್‍ಸಿ ಯೋಜನೆಯ 3,03,94,000 ವೆಚ್ಚದಲ್ಲಿ ನಗರದ ವಿವಿಧ ವಾರ್ಡ್‍ಗಳಲ್ಲಿ 60 ಕಾಮಗಾರಿಗಳು ಹಾಗೂ 18-19ನೇ ಸಾಲಿನ 14ನೇ ಹಣಕಾಸು ಯೋಜನೆಯಡಿ 3,41,23,000 ವೆಚ್ಚದಲ್ಲಿ 57 ಕಾಮಗಾರಿಗಳಲ್ಲಿ, ವಾರ್ಡ್ 3ರ ವಿಜಯನಗರ ಬಡವಣೆಯಲ್ಲಿ ಸಿಸಿ ಚರಂಡಿ, ಹಾಗೂ ಒಂದನೇ ಹಾಗೂ ಎರಡನೇ ಅಡ್ಡ ರಸ್ತೆಗೆ ಡಕ್ ಸ್ಲ್ಯಾಬ್ ನಿರ್ಮಿಸಲಾಗುವುದು ಎಂದರು.
ವಾರ್ಡ್ ನಂಬರ್ 6ರ ಕುರುಬರ ಬೀದಿಯಲ್ಲಿ 4 ಲಕ್ಷ ವೆಚ್ಚದಲ್ಲಿ ಸಿಸಿ ಚರಂಡಿ ಹಾಗೂ ವಾರ್ಡ್ ನಂಬರ್ 18ರಲ್ಲಿ 4 ಲಕ್ಷ ವೆಚ್ಚದ ಕನ್ಸರ್ವೆನ್ಸಿ ರಸ್ತೆಯ ಎರಡು ಬದಿಯ ಸಿಸಿ ಚರಂಡಿ ನಿರ್ಮಾಣ. ವಾರ್ಡ್ ನಂಬರ್ 4ರಲ್ಲಿ 4 ಲಕ್ಷ ವೆಚ್ಚದ ಕನ್ಸರ್ವೆನ್ಸಿ ರಸ್ತೆ ಮತ್ತು ಚರಂಡಿ ನಿರ್ಮಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ನಗರಸಭೆ ಅಧಿಕಾರಿಗಳು ನಗರದಲ್ಲಿನ ಕಾಮಗಾರಿಗಳ ಬಗ್ಗೆ ನಿಗಾ ವಹಿಸಿ, ಕಳಪೆ ಕಾಮಗಾರಿಗಳು ನಡೆಯದಂತೆ ಎಚ್ಚರವಹಿಸಬೇಕು. ದಿನಕ್ಕೆ ಒಂದು ಬಾರಿ ಸ್ಥಳಕ್ಕೆ ಭೇಟಿ ನೀಡಿ ಪರಶೀಲಿಸಬೇಕೆಂದರು.
ಈ ವೇಳೆ ನಗರಸಭಾ ಅಧ್ಯಕ್ಷೆ ಸುಜಾತ, ಸದಸ್ಯರಾದ ಶಂಕರ್ ಖಟಾವ್ಕಾರ್, ಸಿಗ್ಬತ್‍ಉಲ್ಲಾ, ಕೆ. ಮರಿದೇವ್, ಸೈಯದ್ ಎಜಾಜ್, ಎಸ್.ಎಂ ವಸಂತ್, ರತ್ನಮ್ಮ, ಬಿ. ರೇವಣಸಿದ್ದಪ್ಪ, ನಗರಸಭಾ ಪೌರಾಯುಕ್ತೆ ಎಸ್.ಲಕ್ಷ್ಮೀ, ಅಭಿಯಂತರರಾದ ಬಿ.ಎಸ್ ಪಾಟೀಲ್, ಎ.ಇ. ಮಹೇಶ್ ಕೋಡ್ಬಾಳ್, ಸುರೇಶ್ ಛಲವಾದಿ, ನೌಷಾದ್, ಆರೋಗ್ಯ ಇಲಾಖೆಯ ಸಂತೋಷ್ ನಾಯ್ಕ್, ಮುಖಂಡರಾದ ಸೈಯದ್ ಸನಾಉಲ್ಲಾ, ನೈಜೀರ್ ಅಹಮದ್, ಅಲಿ, ಆರೋಗ್ಯ ರಕ್ಷಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ