ತಿಪಟೂರು :
ಇಂದಿನ ಒತ್ತಡದ ಜೀವನದಲ್ಲಿ ಆರೋಗ್ಯದ ಕಡೆ ಪ್ರತಿಯೊಬ್ಬರು ಗಮನಹರಿಸಬೇಕೆಂದು ಡಾ|| ಗೌರಿಶಂಕರ್ ತಿಳಿಸಿದರು.
ನಗರದ ಪಿ.ಜಿ.ಎಂ. ಕಲ್ಯಾಣಮಂಟಪದಲ್ಲಿ ಶ್ರೀ ಮಂಜುನಾಥ ಶ್ರೀ ಸಾಯಿನಾಥ ಸೇವಾಟ್ರಸ್ಟ್ ರಿ ಹಾಗೂ ಬೆಂಗಳೂರಿನ ಪೀಪಲ್ಸ್ ಟ್ರೀ ಆಸ್ಪತ್ರೆಯ ವತಿಯಿಂದ ಏರ್ಪಡಿಸಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಭಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಭಾರತವು ಮದುಮೇಹ ಖಾಯಿಲೆಗೆ ವಿಶ್ವದ ರಾಜಧಾನಿಯಾಗಿದ್ದು ಪ್ರತಿಯೊಬ್ಬರು ದಿನನಿತ್ಯ ಉತ್ತಮ ಆಹಾರ, ವ್ಯಾಯಾಮ ಮತ್ತು ದೈಹಿಕ ಚಟುವಟಿಕೆಗಳನ್ನು ಮಾಡುವುದ ಮೂಲಕ ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕು. ಹಾಗೂ ಇಂತಹ ಶಿಭಿರಗಳಿಂದ ಬಡವರಿಗೆ ಅನುಕೂಲವಾಗಲಿದೆ ಎಂದರು.
ಶ್ರೀ ಮಂಜುನಾಥ ಶ್ರೀ ಸಾಯಿನಾಥ ಸೇವಾಟ್ರಸ್ಟ್ ರಿ ನ ಅಧ್ಯಕ್ಷ ವೋಡಾಪೋನ್ ಚಂದ್ರು ಮಾತನಾಡಿ ಪ್ರತಿ 6 ತಿಂಗಳಿಗೊಮ್ಮೆ ನಮ್ಮ ಟ್ರಸ್ಟ್‍ವತಿಯಿಂದ ನಗರದಲ್ಲಿ ಆರೋಗ್ಯ ಶಿಭಿರವನ್ನು ಏರ್ಪಡಿಸಲಾಗುವುದು ಈ ಶಿಭಿರದಲ್ಲಿ 2.5ಲಕ್ಷರೂ ಔಷಧಿಯನ್ನು, 325 ಕನ್ನಡಕಗಳನ್ನು ಉಚಿತವಾಗಿ ವಿತರಿಸಲಾಗಿದ್ದು ಶಿಭಿರದಲ್ಲಿ ಸುಮಾರು 1450 ಜನರು ಈ ಆರೋಗ್ಯಶಿಭಿರದಲ್ಲಿ ಭಾಗವಹಿಸಿ ಸದುಪಯೋಗಪಡಿಸಿಕೊಂಡಿದ್ದಾರೆ. ಪೀಪಲ್ಸ್‍ಟ್ರೀ ಆಸ್ಪತ್ರೆಯ 35 ಕ್ಕೂ ಹೆಚ್ಚು ತಜ್ಞವೈದ್ಯರು 25 ಕ್ಕೂ ಹೆಚ್ಚು ಸಿಬ್ಬಂದಿ ಭಾಗವಹಿಸಿ ಶಿಭಿರ ಯಶಸ್ವಿಗೊಳ್ಳಲು ಸಹಕರಿಸಿದ್ದಾರೆಂದರು.
ಕಾರ್ಯಕ್ರಮದಲ್ಲಿ ವೈದ್ಯರಾದ ಡಾ|| ಚಂದ್ರಶೇಖರ್, ಡಾ|| ಗುರುದತ್ ಶಣೈ, ಡಾ|| ಸತೀಶ್‍ಶ್ಚಂದ್ರ ಹೆಗಡೆ, ತಿಪಟೂರಿನ ವೈದ್ಯರುಗಳಾದ ಡಾ|| ಶ್ರೀದರ್, ಡಾ|| ವಿವೇಚನ್, ಟ್ರಸ್ಟ್‍ನ ಪದಾಧಿಕಾರಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ