ಬೆಂಗಳೂರು :
ವಿಜಯಪುರ ಜಿಲ್ಲೆಯ ನಿಡಗುಂದಿ ತಾಲ್ಲೂಕಿನ ಆಲಮಟ್ಟಿ ಕೃಷ್ಣಾ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ತನ್ನ ಗರಿಷ್ಠ ಮಟ್ಟ 519.60 ಮೀ. ತಲುಪಿದೆ. ಇದರಿಂದಾಗಿ ಈ ಹಂಗಾಮಿನಲ್ಲಿ ಇದೇ ಮೊದಲ ಬಾರಿಗೆ ಜಲಾಶಯದಲ್ಲಿ 123.081 ಟಿಎಂಸಿ ನೀರು ಸಂಗ್ರಹಿಸಿದಂತಾಗಿದೆ.
ಮುಂಗಾರು ಬೆಳೆಗಾಗಿ ಈಗಾಗಲೇ ಜಲಾಶಯದಿಂದ ಕಾಲುವೆಗೆ ನೀರು ಹರಿಸುವಿಕೆ ಜುಲೈ 27 ರಿಂದ ಆರಂಭ ಗೊಂಡಿದೆ. ನ.23 ರವರೆಗೆ ನೀರು ಹರಿಯಲಿದೆ. ಅಲ್ಲಿಯವರೆಗೆ ನೀರಿನ ಕೊರತೆಯಿಲ್ಲ. ಮಹಾರಾಷ್ಟ್ರದ ಜಲಾಶಯ ಗಳಿಂದ ಸದ್ಯಕ್ಕೆ ಜಲಾಶಯಕ್ಕೆ 5011 ಕ್ಯುಸೆಕ್ಸ್ ನೀರು ಹರಿದು ಬರುತ್ತಿದೆ. ಹಿನ್ನೀರಿನ ಬಳಕೆಗಾಗಿ ಜಲಾಶಯದಿಂದ 2153 ಕ್ಯುಸೆಕ್ಸ್ ನೀರು ಬಳಕೆಯಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
