ಇಂಜಿನಿಯರಿಂಗ್ ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ : ಡಾ.ಎಸ್.ಷಪಿಅಹಮದ್

ತುಮಕೂರು:

             ಬೇರೆಲ್ಲಾ ವೃತ್ತಿಪರ ಕೋರ್ಸುಗಳಿಗೆ ಹೊಲಿಕೆ ಮಾಡಿದರೆ,ಇಂಜಿನಿಯರಿಂಗ್ ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಹೆಚ್.ಎಂ.ಎಸ್.ಎಜುಕೇಷನ್ ಸೊಸೈಟಿಯ ಮುಖ್ಯಸ್ಥ ಡಾ.ಎಸ್.ಷಪಿಅಹಮದ್ ಅಭಿಪ್ರಾಯಪಟ್ಟಿದ್ದಾರೆ.

             ನಗರದ ಹೆಚ್.ಎಂ.ಎಸ್.ಐ.ಟಿಯಲ್ಲಿ ಸೋಮವಾರ ಆಯೋಜಿಸಿದ್ದ ಇಂಜಿನಿಯರ್ಸ್ ಡೇ ಮತ್ತು ಪ್ರಥಮವರ್ಷದ ಬಿ.ಇ. ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದ ಅವರು,ವೈದ್ಯರು,ಶಿಕ್ಷಕರು ಇನ್ನಿತರ ವೃತ್ತಿಪರ ಕೋರ್ಸುಗಳನ್ನು ಕಲಿತವರು ಅದೇ ವೃತ್ತಿ ಮಾಡಬೇಕಾಗಿದೆ.ಆದರೆ ಇಂಜಿನಿಯರ್ ಕಲಿತವರು, ಉದ್ಯಮಿಗಳು, ಕೃಷಿಕ್ಷೇತ್ರ, ವೈಮಾನಿಕ ಕ್ಷೇತ್ರ ಹೀಗೆ ಎಲ್ಲದರಲ್ಲಿಯೂ ತೊಡಗಿಸಿಕೊಳ್ಳಲು ಅವಕಾಶವಿದೆ ಎಂದರು.

              ಇಂದು ಇಂಜಿನಿಯರಿಂಗ್ ತಂತ್ರಜ್ಞರ ಅವಶ್ಯಕತೆ ಇಲ್ಲದೆ ಕ್ಷೇತ್ರವೇ ಇಲ್ಲ.ಇದನ್ನು ಅರಿತು ವಿದ್ಯಾರ್ಥಿಗಳು ದೃಡತೆ ಮತ್ತು ನಿರಂತರ ಅಭ್ಯಾಸದಿಂದ ಉತ್ತಮ ಇಂಜಿನಿಯರ್‍ಗಳಾಗುವ ಜೊತೆಗೆ,ದೇಶಕ್ಕೆ ಕೊಡುಗೆ ನೀಡಬೇಕೆಂದು ಅವರು,ನಮ್ಮ ಕಾಲೇಜಿನ ಪ್ರಾಂಶುಪಾಲರು ಹೇಳಿರುವಂತೆ ಶಿಸ್ತುಬದ್ದವಾಗಿ ಕಲಿತರೇ ಉದ್ಯೋಗ ನಿಮ್ಮ ಕೈ ಸೇರುತ್ತದೆ.ನಮ್ಮ ಕಾಲೇಜಿನಲ್ಲಿ ಉತ್ತಮ ಬೋಧಕರಿದ್ದು, ಪ್ರಯೋಗಶಾಲೆಯನ್ನು ಒಳಗೊಂಡಿದೆ. ಶಿಕ್ಷಕರ ಮಾರ್ಗದರ್ಶನದಲ್ಲಿ ನಡೆದಿದ್ದೇ ಆದರೆ ನೀವು ಅಂದುಕೊಂಡದನ್ನು ಸಾಧಿಸಬಹುದು ಎಂದು ವಿದ್ಯಾರ್ಥಿಗಳಿಗೆ ಎಸ್.ಷಪಿ ಅಹಮದ್ ಕಿವಿ ಮಾತು ಹೇಳಿದರು.

                ಉದ್ಯಮಿ ಪ್ರತಾಪ ಮಾತನಾಡಿ, ವ್ಯಕ್ತಿಯ ಶೈಕ್ಷಣಿಕ ಜೀವನದಲ್ಲಿ ಪದವಿ ಅತಿ ಮುಖ್ಯವಾದ ಘಟ್ಟ. ಇಲ್ಲಿ ನಾವು ಅತ್ಯಂತ ಶ್ರದ್ದೆಯಿಂದ ಕಲಿತರೇ ಮುಂದಿನ ಜೀವನ ಸುಗಮವಾಗಿರುತ್ತದೆ.ತಾವು ಕಾಲೇಜಿನಲ್ಲಿ ಕಲಿಯುವ ಪಠ್ಯದ ಜೊತೆಗೆ, ಹೊರಜಗತ್ತಿನಲ್ಲಿ ಆಗುತ್ತಿರುವ ಬದಲಾವಣೆಗಳ ಕಡೆಗೆ ಗಮನಹರಿಸಿ,ಅದರಲ್ಲಿಯೂ ಕೈಗಾರಿಕಾ ಕ್ಷೇತ್ರದ ಬೆಳವಣಿಗೆ ಕುರಿತು ತಿಳಿದುಕೊಳ್ಳುವುದು ಅಗತ್ಯವೆಂದರು.

                ಪಾಥ್‍ಪ್ರಂಟ್ ಹಾಗೂ ಕೆ.ಎನ್‍ಗ್ರೂಫ್ಸ್ ಅಫ್ ಕಂಪನಿ ಮುಖ್ಯಸ್ಥ ಮದನಮೋಹನ್ ಮಾತನಾಡಿ,ಇಂದು ಇಂಜಿನಿಯರಿಂಗ್ ಶಿಕ್ಷಣ ಪಡೆಯುತ್ತಿರುವ ಶೇ 5 ರಷ್ಟು ಮಂದಿ ಮಾತ್ರ ಉದ್ಯೋಗಕ್ಕೆ ತೆರಳುತಿದ್ದು, ಶೇ95ರಷ್ಟು ಮಂದಿ ಬೇರೆ ಬೇರೆ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸ್ವಂತ ಉದ್ದಿಮೆಗಳನ್ನು ಸ್ಥಾಪಿಸಿ ನೂರಾರು ಜನರಿಗೆ ಕೆಲಸ ನೀಡುತ್ತಿದ್ದಾರೆ. ಇಂಜಿನಿಯರಿಂಗ್ ಎಂಬುದು,ಜಗತ್ತಿನೊಂದಿಗೆ ವ್ಯವಹರಿಸಲು ಒಂದು ವೇದಿಕೆ,ಇದನ್ನು ಸರಿಯಾಗಿ ಬಳಕೆ ಮಾಡಿಕೊಂಡಲ್ಲಿ ಮುಂದಿನ ಜೀವನ ಸುಖಃಮಯವಾಗಿರಲಿದೆ ಎಂದು ಸಲಹೆ ನೀಡಿದರು.

                   ಐಎನ್‍ಐಟಿ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಕೇಶವಮೂರ್ತಿ ಮಾತನಾಡಿ, ಇಂದಿನ ವೇಗದ ಜಗತ್ತಿನಲ್ಲಿ ಎಲ್ಲರೂ ಇನ್ನೋಬ್ಬರನ್ನು ನಂಬಿಸಲು ಪ್ರಯತ್ನಿಸಿದಂತೆ ಕಾಣುತ್ತಿದೆ.ಕೋಟ್ಯಾಂತರ ರೂ ವೇತನ ಪಡೆಯುತ್ತಿರುವವರು ಇಂದು ನೆಮ್ಮದಿಯಾಗಿಲ್ಲ. ನಮ್ಮದಿ ಎಂಬುದು ನಮ್ಮೊಳಗೆ ನಾವೇ ಕಂಡುಕೊಳ್ಳುವಂತದ್ದು, ಒಳ್ಳೆಯ ಮಾನವೀಯ ಗುಣಗಳುಳ್ಳ ನಾಯಕರಾಗಿ, ಗುರು ಹಿರಿಯರಿಗೆ, ತಂದೆ ತಾಯಿಗಳಿಗೆ ವಿಧೇಯನಾಗಿ ನಡೆದುಕೊಂಡು, ಉತ್ತಮ ಪ್ರಜ್ಞೆಗಳಾಗುವಂತೆ ಕರೆ ನೀಡಿದರು.

                 ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಹೆಚ್.ಎಂ.ಎಸ್.ಐ.ಟಿಯ ಪ್ರಾಂಶುಪಾಲರಾದ ಡಾ.ಇರ್ಫಾನ್ ಅವರು,ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಇಂದು ಎಲ್ಲಿಲ್ಲದ ಅವಕಾಶವಿದೆ.ಕೃಷಿ,ಕೈಗಾರಿಕೆ, ಆಹಾರ ಸಂಸ್ಕøರಣೆ, ವೈಮಾನಿಕ ಹೀಗೆ ಹಲವು ಕ್ಷೇತ್ರಗಳಲ್ಲಿ ಇಂಜಿನಿಯರ್ ಕಲಿತವರು ತಮ್ಮನ್ನು ತಾವು ತೊಡಗಿಸಿಕೊಂಡು ಯಶಸ್ವಿಯಾಗಿದ್ದಾರೆ. ಹೆಚ್.ಎಂ.ಎಸ್.ಐ.ಟಿ ಮುಂದಿನ ನಾಲ್ಕು ವರ್ಷಗಳಲ್ಲಿ ನಿಮ್ಮನ್ನು ಪರಿಪೂರ್ಣವಾಗಿ ವಿಕಾಸಗೊಳಿಸಲಿದೆ.ನಿರಂತರ ಅಭ್ಯಾಸ ಮತ್ತು ಸತತ ಪರಿಶ್ರಮ ಪಟ್ಟರೆ, ನಾಲ್ಕು ವರ್ಷದ ಕೊನೆಯ ಉದ್ಯೋಗ ಪಡೆದು ಹೊರಹೋಗಬಹುದು.ಇದಕ್ಕಾಗಿ ಎಲ್ಲಾ ರೀತಿಯ ಅವಕಾಶಗಳನ್ನು ಈ ಕಾಲೇಜು ಒದಗಿಸಲಿದೆ ಎಂದರು.
ಕಾರ್ಯಕ್ರಮದಲ್ಲಿ ಈ ಹಿಂದಿನ ಸೆಮಿಸ್ಟರ್‍ಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಮಕ್ಕಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಹೆಚ್.ಎಂ.ಎಸ್.ಏಜುಕೇಷನ್ ಸೊಸೈಟಿಯ ಆಡಳಿತಾಧಿಕಾರಿ ಆನ್ಸರ್ ಆಲಿಖಾನ್, ಗಣೇಶ್ ಪಳನಿಸ್ವಾಮಿ ಹಾಗೂ ರಾಮಪ್ರಸಾದ್ ಉಪಸ್ಥಿತರಿದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link