ಇಂಡೋನೇಷ್ಯಾ :
ಶನಿವಾರ ಇಂಡೋನೇಷ್ಯಾದ ಲಾಂಬೋಕ್ ನಲ್ಲಿ ಭೂಕಂಪ: 5.5 ತೀವ್ರತೆ ದಾಖಲು ಹುಣ್ಣಿಮೆ ಇದ್ದುದರಿಂದ ಕಾಣಿಸಿಕೊಂಡ ಅಲೆಗಳಲ್ಲಿನ ಅಸಾಮಾನ್ಯ ಏರಿಕೆ, ನೀರಿನ ಆಳದಲ್ಲಿನ ಭೂ ಕುಸಿತ ಹಾಗೂ ಅನಕ್ ಕ್ರಾಕಟೋವಾದಲ್ಲಿನ ಜ್ವಾಲಾಮುಖಿ ಇವೆಲ್ಲವೂ ಸೇರಿ ಜಾವಾ ಹಾಗೂ ಸುಮಾತ್ರಾ ಮಧ್ಯೆ ಇರುವ ಸುಂದಾ ಜಲಸಂಧಿಯಲ್ಲಿ ಸುನಾಮಿ ಸೃಷ್ಟಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ .
ತಡರಾತ್ರಿ ಅಪ್ಪಳಿಸಿದ ಸುನಾಮಿಗೆ ನೂರಾರು ಮನೆಗಳು ಮತ್ತು ಇತರ ಕಟ್ಟಡಗಳು ಕುಸಿದಿದ್ದು 584 ಮಂದಿ ಗಾಯಗೊಂಡಿದ್ದಾರೆ. ಸುಂದಾ ಜಲಸಂಧಿ ಅಂಚಿನಲ್ಲಿ ಈ ಸುನಾಮಿ ಅಪ್ಪಳಿಸಿದೆ.
ಸುನಾಮಿಯಿಂದ ಕನಿಷ್ಠ 168 ಮಂದಿ ಮೃತಪಟ್ಟು, 600 ಮಂದಿ ಗಾಯಗೊಂಡಿದ್ದಾರೆ ಎಂದು ಇಂಡೋನೇಷ್ಯಾ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಸುಂದಾ ಜಲಸಂಧಿಯಲ್ಲಿ 40 ಮಂದಿ ಮೃತಪಟ್ಟು, 584 ಮಂದಿ ಗಾಯಗೊಂಡಿದ್ದಾರೆ. ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣೆ ವಕ್ತಾರರು ಮಾಹಿತಿ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ