ಇಂದು ಮಕ್ಕಳ ಶ್ವಾಸಕೋಶ ಸಂಭಂದಿ ಕಾಯಿಲೆ ಗಳ ರಾಜ್ಯ ಮಟ್ಟದ ಶಿಭಿರ

ಹೊಸಪೇಟೆ:

      ನವಜಾತ ಶಿಶು ವಿನಿಂದ ಹದಿನಾಲ್ಕು ವರ್ಷದ ಮಕ್ಕಳವರೆಗಿನ ವಿವಿದ ಕಾಯಿಲೆಗಳ ವಿಚಾರ ಸಂಕಿರಣವನ್ನು ಪ್ರಪ್ರಥಮ ಬಾರಿಗೆ ಹೊಸಪೇಟೆ ಯಲ್ಲಿ ನಡೆಸಲಾಗುತ್ತದೆ ಎಂದು ನಗರದ ಅನುಭವಿ ಮಕ್ಕಳ ತಙ್ಞರಾದ ಡಾ: ಅಶೋಕ್ ದಾತಾರ್ ಇಂದು ಮಲ್ಲಿಗೆ ಹೋಟೆಲ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

      ಮಗು ಗರ್ಭಾವಸ್ಥೆಯಲ್ಲಿಂದ ಪ್ರಾರಂಭಗೊಂಡು ಬೆಳವಣಿಗೆಯ ವಿವಿದ ಹಂತಗಳಲ್ಲಿ ಕಾಣುವ ಉಸಿರಾಟ, ನೆಗಡಿ, ನ್ಯುಮೋನಿಯಾ , ಕೆಮ್ಮು, ಮತ್ತಿತರ ಶ್ವಾಸಕೋಶ ಸಂಭಂದಿಕಾಯಿಲೆಗಳ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವನ್ನು ವಿವಿದ ರಾಜ್ಯಗಳ ಪರಿಣಿತ ವೈದ್ಯರು ಈ ವಿಚಾರ ಸಂಕಿರಣದಲ್ಲಿ ಬಾಗಿಯಾಗುತ್ತಿದ್ದು. ಇತ್ತೀಚಿನ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಕಾಯಿಲೆಗಳನ್ನು ಯಾವರೀತಿ ನಿಯಂತ್ರಿಸ ಬಹುದು ಮತ್ತು ಮಕ್ಕಳಲ್ಲಿ ಶ್ವಾಸಕೋಶ ಸಂಭಂದಿತ ರೋಗಗಳನ್ನು ತಡೆಯಲು ಮತ್ತು ಪತ್ತೆಹಚ್ಚಲು ಕೈಗೊಳ್ಳ ಬೇಕಾದ ಸಲಹೆ ಸೂಚನೆ ಗಳನ್ನು ದಿನಾಂಖ 25 ಮತ್ತು 26 ಎರಡು ದಿನಗಳ ವಿಚಾರ ಸಂಕಿರಣವನ್ನು ಹೋಟೆಲ್ ಮಲ್ಲಿಗೆಯಲ್ಲಿ ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ{ಐ.ಏ.ಫಿ} ಆಯೋಜಿಸಿದೆ .

      ಅಂದಿನ ಕಾರ್ಯಕ್ರಮ ಉದ್ಘಾಟಿಸಲು ಐಏಪಿ ಯ ರಾಷ್ಟ್ರೀಯ ಅದ್ಯಕ್ಷ ಡಾ: ವಿಜಯ್ ಸೇಖರನ್,ಕಾರ್ಯದರ್ಶಿ ಸಿವಭಾಲನ್,ರಾಜ್ಯಾದ್ಯಕ್ಷ ಡಾ: ಎನ್.ಕೆ.ಕಾಳಪ್ಪ,ಡಾ: ಮದು ಪೂಜಾರ್,ಡಾ: ರವೀಂದ್ರ ಜೋಷಿ ಪಾಲ್ಗೊಳ್ಳ ಲಿದ್ದಾರೆಂದು ಸಂಘಟನಾ ಕಾರ್ಯದರ್ಶಿಡಾ: ರಾಜೀವ್ ತಿಳಿಸಿದರು.ನಗರದ ನುರಿತ ಮಕ್ಕಳ ವೈದ್ಯರಾದ ಡಾ: ಇಕ್ಭಾಲ್,ಡಾ: ಜಯರಾಂ,ಡಾ: ಅಮರೇಶ್ ಪಾಟೀಲ್ಹಾಗು ಲಲಿತ ಜೈನ್ ಉಪಸ್ಥಿತರಿದ್ದರು.ವಿಜಯನಗರ ಐ.ಏ.ಪಿ ಶಾಖೆಯಲ್ಲಿ ಕೊಪ್ಪಳ, ಹಗರಿಬೊಮ್ಮನಹಳಿ, ಕುಷ್ಟಗಿ, ಕಾರಟಗಿ, ಗಂಗಾವತಿ ಸೇರಿದಂತೆ ಒಟ್ಟು 33 ಮಕ್ಕಳ ವೈದ್ಯರಿಂದ 2014 ರಲ್ಲಿ ಪ್ರಾರಂಭಿಸಿದ್ದ ಈ ಶಾಖೆ ಪ್ರಥಮಬಾರಿಗೆ ರಾಜ್ಯಮಟ್ಟದಲ್ಲಿ ನಡೆಸುವ ವಿಚಾರ ಸಂಕಿರಣಕ್ಕೆ ಸುಮಾರು 250 ವೈದ್ಯರು ಬಾಗವಹಿಸುವ ನೀರಿಕ್ಷೆ ಇದೆ ಎಂದು ಸಂಘಟಕರು ತಿಳಿದರು. 

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap