ಇನ್ನೆರಡು ವಾರದಲ್ಲಿ ನಿರ್ಣಾಯಕ ಹೋರಾಟ : ಅರುಣ್ ಕುಮಾರ್

ಬೆಂಗಳೂರು:

      ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 24 ಕ್ಷೇತ್ರಗಳಲ್ಲಿ ಗೆಲ್ಲುವ ಗುರಿ ಹೊಂದಿರುವ ರಾಜ್ಯ ಬಿಜೆಪಿ ನಾಯಕರು ಇದಕ್ಕಾಗಿ ರಾಜ್ಯದ ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಸರ್ಕಾರದ ವಿರುದ್ಧ ಇನ್ನೆರಡು ವಾರದಲ್ಲಿ ನಿರ್ಣಾಯಕ ಹೋರಾಟ ನಡೆಸಲು ತೀರ್ಮಾನಿಸಿದೆ.

      ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ವಿಶೇಷ ಸಭೆಯಲ್ಲಿ ನಡೆದ ಚುನಾವಣಾ ಕಾರ್ಯತಂತ್ರಗಳ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

     ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು ಇನೂ ನಾಲ್ಕು ತಿಂಗಳು ಮುಗಿದಿಲ್ಲ. ಆಗಲೇ ವ್ಯಾಪಕ ಭ್ರಷ್ಟಾಚಾರ, ವರ್ಗಾವಣೆ ದಂಧೆಯಲ್ಲಿ ತೊಡಗಿದೆ. ಕಮೀಷನ್ ಸರ್ಕಾರವನ್ನು ಕಿತ್ತೊಗೆಯಲು ಹೋರಾಟ ನಡೆಸುವಂತೆ ಸಭೆಯಲ್ಲಿ ಮುಖಂಡರು ಆಗ್ರಹಿಸಿದ್ದಾರೆ.

     ಈಗೀನ ರಾಜಕೀಯ ಪರಿಸ್ಥಿತಿ, ಸರ್ಕಾರದ ಅಸ್ಥಿರತೆ, ದೆಹಲಿಗೆ ತೆರಳಿರುವ ಕಾಂಗ್ರೆಸ್ ನಾಯಕರ ಸಂದಾನ ವಿಚಾರ, ಬಿಜೆಪಿ ನಾಯಕರ ಸಂಪರ್ಕದಲ್ಲಿ ಇರುವ ಕಾಂಗ್ರೆಸ್ ಶಾಸಕರು ಇತ್ಯಾದಿ ವಿಚಾರಗಳ ಬಗ್ಗೆಯೂ ಚರ್ಚೆ ನಡೆಸಲಾಗಿದೆ.

     ಬೂತ್ ಮಟ್ಟದ ಕಾರ್ಯಕ್ರಮವನ್ನು ಸಶಕ್ತಗೊಳಿಸಲು ಕಾರ್ಯಕರ್ತರಿಗೆ ಸೂಚಿಸಿದ್ದಾರೆ. ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಅವರು, ಒಟ್ಟು 23 ಕಾರ್ಯಸೂಚಿಗಳನ್ನು ನೀಡಿದ್ದಾರೆ. ಆಯಾ ಕ್ಷೇತ್ರದ ಬೂತ್ ಬಲಪಡಿಸಲು ಕಡ್ಡಾಯವಾಗಿ 23 ಕಾರ್ಯಸೂಚಿ ಪಾಲಿಸುವಂತೆ ಕಾರ್ಯಕರ್ತರಿಗೆ ಆದೇಶಿಸಲಾಗಿದೆ.

     ಚುನಾವಣೆ ಪ್ರಚಾರಕ್ಕಾಗಿ ಪ್ರಧಾನಿ ಮೋದಿ ಮನ್ ಕಿ ಬಾನ್ ಕಾರ್ಯಕ್ರಮದ ಎಲ್ಲಾ ಎಪಿಸೋಡ್ ಗಳನ್ನು ಸಾರ್ವಜನಿಕರಿಗೆ ಪುನಃ ಕೇಳಿಸಲು ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಬೂತ್ ಕಮಿಟಿಗೆ ಹೊಸ ಸ್ವರೂಪ ನೀಡಲು ನಿರ್ಧಾರ ತೆಗೆದುಕೊಂಡಿದ್ದು, ಸಾಮಾಜಿಕ ರಚನೆಗೆ ಅನುಗುಣವಾಗಿ ಕಮಿಟಿ ಪುನರ್ ರಚನೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಒಟ್ಟು 54 ಸಾವಿರ ಬೂತ್‍ಗಳಿವೆ. ವಿಧಾನಸಭೆ ಚುನಾವಣೆ ವೇಳೆ 45 ಸಾವಿರ ಬೂತ್ ಕಮಿಟಿ ರಚಸಿದ್ದ ಬಿಜೆಪಿ, ಈ ಬಾರಿ ಸಾಮಾಜಿಕ ರಚನೆಗೆ ತಕ್ಕಂತೆ ಬೂತ್ ಕಮಿಟಿ ಪುನರ್ ರಚಿಸಲು ನಿರ್ಧಾರ ಮಾಡಿದೆ.

    ನರೇಂದ್ರ ಮೋದಿಯವರ ಅಭಿವೃದ್ಧಿಯ ಕಾರ್ಯಗಳನ್ನು ದೇಶದ ಮೂಲೆ ಮೂಲೆಗೂ ತಲುಪುವಂತೆ ಮಾಡಬೇಕು. ಹೀಗಾಗಿ ಚುನಾವಣಾ ಸಂದರ್ಭದಲ್ಲಿ ಹೊಸ ತಂಡ ರಚನೆ ಮಾಡಬೇಕು. ಕೇಂದ್ರ ಸರಕಾರ ಜಾರಿಗೊಳಿಸುವ ಯೋಜನೆಗಳು ಸರಿಯಾಗಿ ಜನರಿಗೆ ತಲುಪುತ್ತಿದೆಯೇ ಇಲ್ಲವೋ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಪಡೆಯಬೇಕು ಎಂದು ಬಿಜೆಪಿ ಕಾರ್ಯಕರ್ತರಿಗೆ ಸೂಚಿಸಿದೆ.

    ಕಳೆದ ಬಾರಿ ಮೋದಿಯವರ ಹೆಸರಿನಿಂದಲೇ ಜನರ ಬಳಿ ತೆರಳಿದ್ದ ಭಾರತೀಯ ಜನತಾ ಪಕ್ಷ ಈ ಬಾರಿಯೂ ಅದೇ ತಂತ್ರವನ್ನು ಬಳಸಿಕೊಳ್ಳಬಹುದು. ಕೇಂದ್ರ ಸರಕಾರದ ಯೋಜನೆಗಳನ್ನೇ ಅಸ್ತ್ರವನ್ನಾಗಿಟ್ಟುಕೊಂಡು ಜನರ ಬಳಿ ತೆರಳಿ ಪ್ರಚಾರ, ರಾಜ್ಯದಲ್ಲಿ ಪ್ರತಿಯೊಬ್ಬರೂ ಯೋಜನೆ ಪಡೆದಿದ್ದಾರೆಯೇ ಎಂಬ ಬಗ್ಗೆ ಪರಿಶೀಲನೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ.

    ದೇಶಾದ್ಯಂತ ಕಮಲಪಡೆ ಚುನಾವಣೆಗೆ ತಯಾರಿ ನಡೆಸುತ್ತಿದ್ದಂತೆಯೇ ರಾಜ್ಯ ಬಿಜೆಪಿ ನಾಯಕರೂ ಸಕ್ರಿಯರಾಗಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ವಲ್ಪ ಯಾಮಾರಿದ್ದರಿಂದಲೇ ಕೈಗೆ ಬಂದಿದ್ದ ಅಧಿಕಾರವನ್ನು ಕಳೆದುಕೊಳ್ಳುವಂತಾಯಿತು. ಆದರೆ ಇನ್ನು ಮುಂದೆ ಯಾವುದೇ ತಪ್ಪು ನಡೆಯದಂತೆ ನೋಡಿಕೊಳ್ಳಲು ರಾಜ್ಯ ಬಿಜೆಪಿ ನಾಯಕರು ಈ ರೀತಿ ತಂತ್ರ ರೂಪಿಸಿದ್ದಾರೆ.

    ಸಭೆ ಉದ್ಘಾಟಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಸಮ್ಮಿಶ್ರ ಸರ್ಕಾರ ಕಮೀಷನ್ ದಂಧೆಯಲ್ಲಿ ಕಮೀಷನ್ ಇಲ್ಲದೇ ಯಾವುದೇ ಕೆಲಸ ಆಗುವುದಿಲ್ಲ. ಈ ಸರ್ಕಾರದಲ್ಲಿ ಅಭಿವೃದ್ಧಿ ಮರಿಚಿಕೆಯಾಗಿದೆ. ಈ ಸರ್ಕಾರದಲ್ಲಿ ಅಭಿವೃದ್ಧಿ ಮರಿಚಿಕೆಯಾಗಿದೆ ಎಂದು ತರಾಟೆಗೆ ತೆಗೆದುಕೊಂಡರು.

    ಈ ಸರ್ಕಾರ ಭೂಗಳ್ಳ ಸರ್ಕಾವಗಿದೆ. ಇದಕ್ಕೆ ಕಾಂಗ್ರೆಸ್ ಮುಖಂಡ ಎ. ಮಂಜು ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಅವರ ವಿರುದ್ಧ ಮಾಡಿರುವ ಆರೋಪ ಪುಷ್ಠಿ ನೀಡುತ್ತದೆ. ಇದು ಆರೋಪ ಗಂಭೀರವಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಪಕ್ಷದ ವತಿಯಿಂದ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

     ಮೈತ್ರಿ ಸರ್ಕಾರದಲ್ಲಿ ಸಚಿವರಾದ ಡಿ.ಕೆ.ಶಿವಕುಮಾರ್ ಹಾಗೂ ರೇವಣ್ಣ ಕಮೀಷನ್ ಗಿರಾಕಿಗಳು. ಕಮೀಷನ್ ಪಡೆದು ಕೆಲಸ ಮಾಡುವವರು. ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳಿಗೂ ಕಮೀಷನ್ ಪಡೆಯುತ್ತಿದ್ದಾರೆ. ರಾಜ್ಯ ಸರ್ಕಾರದಲ್ಲಿ ತುಘಲಕ್ ದರ್ಬಾರು ನಡೆಯುತ್ತಿದೆ. ಹಿಂದೆ ಕಮೀಷನ್ ಕೊಟ್ಟು ಕಾಮಗಾರಿ ಆರಂಭಿಸಿದವರಿಗೆ ಈಗ ಮತ್ತೆ ಶೇ.10ರಷ್ಟು ಹಣದ ಬೇಡಿಕೆ ಇಡುತ್ತಿದ್ದಾರೆ. ಹಣ ನೀಡದಿದ್ದರೆ ಕಾಮಗಾರಿಗೆ ಮಂಜೂರಾತಿ ನೀಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

    ರಾಜಕಾರಣ ಚದುರಂಗದಾಟ ಎನ್ನುವ ಶಿವಕುಮಾರ್ ಅವರನ್ನು ತರಾಟೆತೆ ತೆಗೆದುಕೊಂಡ ಯಡಿಯೂರಪ್ಪ, ನನಗೂ ಚೆಸ್ ಗೊತ್ತು. ಆಟದಲ್ಲಿ ಎದುರಾಳಿ ಇಲ್ಲದೇ ಪಾನ್ ಮೂವ್ ಮಾಡಿದರೆ ಪ್ರಯೋಜನ ಇಲ್ಲ. ಬೇಜವಾಬ್ದಾರಿಯಾಗಿ ಮಾತನಾಡಬೇಡಿ ಎಂದರು.

   ಆಪರೇಷನ್ ಕಮಲದ ಬಗ್ಗೆ ಬಿಜೆಪಿ ಮೇಲೆ ಆರೋಪ ಮಾಡುವ ಮುಖ್ಯಮಂತ್ರಿ ಕುಮಾರ ಸ್ವಾಮಿ ನಮ್ಮ ಪಕ್ಷದ ಶಾಸಕರನ್ನ ಸೆಳೆಯಲು ಪ್ರಯತ್ನ ನಡೆಸುತ್ತಿರುವುದು ಏಕೆ. ನಮ್ಮ ಪಕ್ಷದ ಶಾಸಕ ಸುಭಾಷ್ ಗುತ್ತೇದಾರ್ ಅವರಿಗೆ ಪಕ್ಷಕ್ಕೆ ಬರುವಂತೆ ಸ್ವತ: ಕಲಬುರಗಿಗೆ ಹೋದಾಗ ಕುಮಾರ ಸ್ವಾಮಿ ಒತ್ತಾಯ ಮಾಡಿದ್ದಾರೆ ಎಂದು ಬಹಿರಂಗಪಡಿಸಿದರು.

   ಒಂದು ಕಡೆ ಸಾಲ ರೈತರ ಮನ್ನಾ ಮಾಡಿದ್ದೇವೆ ಎಂದು ಬೊಂಬಡ ಬಜಾಯಿಸುವ ಸರ್ಕಾರ, ಮತ್ತೊಂದೆಡೆ ಸಾಲ ಪಾವತಿ ಮಾಡುವಂತೆ ನೋಟೀಸ್‍ಗಳ ಮೆಲೆ ನೋಟಿಸ್‍ಗಳು ಬರುತ್ತಿವೆ. ಇದನ್ನು ಜನ ನಂಬಬೇಕೆ? ರಾಷ್ಟ್ರೀಕೃತ ಬ್ಯಾಂಕುಗಳಿಂದ ರೈತರಿಗೆ ನೊಟೀಸ್‍ಗಳು ಬರುತ್ತಿವೆ. ಅವರು ಆತ್ಮಹತ್ಯೆಯ ದಾರಿ ತುಳಿದಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು

            ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link