ಮುಂಬೈ:
ಇನ್ಫೊಸಿಸ್‌ನ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ಸ್ಥಾನಕ್ಕೆ ಎಂ.ಡಿ. ರಂಗನಾಥ್ ರಾಜೀನಾಮೆ ನೀಡಿದ್ದಾರೆ.
2015ರಲ್ಲಿ ಅವರನ್ನು ಸಿಎಫ್‌ಒ ಆಗಿ ಇನ್ಫೊಸಿಸ್ ನೇಮಕ ಮಾಡಿತ್ತು.‘18 ವರ್ಷಗಳ ಯಶಸ್ವಿ ವೃತ್ತಿಜೀವನದ (ಸಿಎಫ್‌ಒ ಆಗಿ ಮೂರು ವರ್ಷಗಳು ಸೇರಿ) ಬಳಿಕ ಇದೀಗ ಹೊಸ ಕ್ಷೇತ್ರಗಳಲ್ಲಿ ವೃತ್ತಿಪರ ಅವಕಾಶ ಗಳಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸುತ್ತಿದ್ದೇನೆ’ ಎಂಬ ರಂಗನಾಥ್ ಹೇಳಿಕೆಯನ್ನು ಇನ್ಫೊಸಿಸ್ ಉಲ್ಲೇಖಿಸಿದೆ.
ರಂಗನಾಥ್ ಅವರ ರಾಜೀನಾಮೆಯನ್ನು ಅಂಗೀಕರಿಸಿರುವುದಾಗಿ ಷೇರುಮಾರುಕಟ್ಟೆಗೆ ಇನ್ಫೊಸಿಸ್ ತಿಳಿಸಿದೆ. ಅಲ್ಲದೆ, ಈ ವರ್ಷ ನವೆಂಬರ್ 16ರ ವರೆಗೆ ರಂಗನಾಥ್ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ಈಗಿನಿಂದಲೇ ಹೊಸ ಸಿಎಫ್‌ಒಗೆ ಹುಡುಕಾಟ ಆರಂಭಿಸುವುದಾಗಿ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
