ಇನ್ಫೋಸಿಸ್ ಸುಧಾಮೂರ್ತಿಯವರಿಂದ ಸಾಂಪ್ರದಾಯಿಕ ದಸರಾ ಉತ್ಸವ ಉದ್ಘಾಟನೆ

ಮೈಸೂರು

                  ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವನ್ನು ಸಾಂಪ್ರದಾಯಿಕವಾಗಿ ಆಚರಿಸಲು ನಿರ್ಧರಿಸಿದ್ದು, ಇನ್ಫೋಸಿಸ್ ಸಂಸ್ಥಾಪಕ ಅಧ್ಯಕ್ಷ ನಾರಾಯಣ ಮೂರ್ತಿ ಅವರ ಪತ್ನಿ ಸುಧಾಮೂರ್ತಿ ಅವರಿಗೆ ಈ ಭಾರಿ ದಸರಾ ಉದ್ಘಾಟನೆ ಮಾಡುವ ಗೌರವ ನೀಡಲಾಗುವುದು ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಾಡ ಹಬ್ಬ ಮೈಸೂರು ದಸರಾ ಆಚರಣೆ 2018 ಉನ್ನತ ಮಟ್ಟದ ಸಮಿತಿ ಸಭೆಯನ್ನು ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ನಡೆಸಲಾಯಿತು. ಈ ಸಲ ಡಿಫರೆಂಟ್‌ ದಸರಾ ಅಂತೆ: ಎಚ್ಡಿಕೆ ಪ್ಲ್ಯಾನ್‌ ಏನು? ಸಭೆ ಬಳಿಕ ಮಾತನಾಡಿದ ಸಿಎಂ ಕುಮಾರಸ್ವಾಮಿ, ಇದು ದಸರೆಯ ಕುರಿತು ಎರಡನೇ ಸಭೆ. ಈಗಾಗಲೇ ಬೆಂಗಳೂರಿನಲ್ಲಿ ಮೊದಲ ಸಭೆ ನಡೆಸಲಾಗಿದೆ. ಚುನಾವಣಾ ನೀತಿ ಸಂಹಿತೆ ಹಿನ್ನೆಲೆ ಯಾವುದೂ ಉಲ್ಲಂಘನೆಯಾಗದ ರೀತಿ ಸಭೆ ಸೇರಿದ್ದೇವೆ ಎಂದರು.ಸೆಪ್ಟೆಂಬರ್‌ 02ರಂದು ಗಜಪಯಣ ಹಲವು ಸಚಿವರು, ಶಾಸಕರ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಸೆಪ್ಟಂಬರ್ 2ರಂದು ಅರ್ಜುನ ಆನೆ ನೇತೃತ್ವದಲ್ಲಿ ಮೊದಲ ತಂಡದ ಗಜ ಪಯಣ ಆರಂಭವಾಗಲಿದೆ. ವೀರನಹೊಸಳ್ಳಿಯ ನಾಗಾಪುರದ ಆಶ್ರಮ ಶಾಲೆಯ ಬಳಿ ಗಜ ಪಯಣ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.

                     ಈ ಬಾರಿ ಸಾಂಪ್ರದಾಯಿಕ ದಸರಾ ಈ ಬಾರಿ ಸಂಪ್ರದಾಯಿಕವಾಗಿ ದಸರಾ ಆಚರಣೆ ಮಾಡಲಾಗುತ್ತದೆ. ಕೆಲವು ಕಾರ್ಯಕ್ರಮಗಳು ಶಾಶ್ವತವಾಗಿ ನಡೆಯುವಂತೆ ಅಭಿಪ್ರಾಯ ಬಂದಿದೆ ಎಂದರು. ಕಳೆದ ವರ್ಷ 15 ಕೋಟಿ ಹಣ ನೀಡಿದ್ದಾರೆ. ಆಯಾಯ ಸ್ಥಳಗಳಲ್ಲಿ ದೊಡ್ಡ ಸ್ಕ್ರೀನ್ ಇರುತ್ತದೆ. ಪಾಸಿನ ಗೊಂದಲಕ್ಕೆ ತೆರೆ ಬೀಳಲಿದ್ದು, ಹಿಂದಿನಿಂದ ನಡೆದುಕೊಂಡು ಬರುತ್ತಿರುವ ಕಾರ್ಯಕ್ರಮಗಳು ನಡೆಯಲಿದೆ ಎಂದು ಮಾಹಿತಿ ನೀಡಿದರು.ಸಭೆಯಲ್ಲಿ ಉನ್ನತ ಶಿಕ್ಷಣ ಸಚಿವ ಮತ್ತ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ ಟಿ ದೇವೇಗೌಡ, ಡಾ. ಜಯಮಾಲ .ಕನ್ನಡ ಸಂಸ್ಕೃತಿ ಸಚಿವರು. ಡಿ.ಸಿ .ತಮ್ಮಣ್ಣ ಸಾರಿಗೆ ಸಚಿವರು, ಸಾ .ರಾ .ಮಹೇಶ್ .ಪ್ರವಾಸೋದ್ಯಮ ಸಚಿವರು, ಪುಟ್ಟರಾಜು ಸಣ್ಣ ನೀರಾವರಿ ಸಚಿವರು ಉಪಸ್ಥಿತರಿದ್ದರು.     

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap