ಇಸ್ರೋ ವಿಜ್ಞಾನಿಗಳನ್ನು ವಿಧಾನಸೌಧದ ಬಾಂಕ್ವೆಟ್ ಹಾಲ್ ನಲ್ಲಿ ಗೌರವಿಸಬೇಕು : ರಮೇಶ್ ಬಾಬು

ಬೆಂಗಳೂರು

    ಚಂದ್ರಯಾನ-3 ಯಶಸ್ಸಿಗಾಗಿ ಶ್ರಮಿಸಿದ ಇಸ್ರೋ ವಿಜ್ಞಾನಿಗಳನ್ನು ವಿಧಾನಸೌಧದ ಬಾಂಕ್ವೆಟ್ ಹಾಲ್ ನಲ್ಲಿ ಗೌರವಿಸಬೇಕು ಎಂದು ಕೆಪಿಸಿಸಿ ವಕ್ತಾರ ರಮೇಶ್ ಬಾಬು ಹೇಳಿದ್ಧಾರೆ.

    ಈ ಕುರಿತುಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದಿರುವ ಅವರು, ದಿವಂಗತ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರೂ ಅವರ ದೂರದೃಷ್ಟಿ ಮತ್ತು ವಿಜ್ಞಾನಿ ಹೋಮಿ ಬಾಬಾರವರ ಶ್ರಮದ ಮೂಲಕ 1962 ರಲ್ಲಿ ಸ್ಥಾಪನೆಯಾದ ಇಸ್ರೋ ನಂತರ 1969ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಆಸಕ್ತಿಯಿಂದ ಮಹತ್ವದ ಬದಲಾವಣೆ ಕಂಡಿತು.

   ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ರವರ ಮಾರ್ಗದರ್ಶನದಲ್ಲಿ ಮುನ್ನಡೆದು ಭಾರತದ ಬಾಹ್ಯಾಕಾಶ ಸಂಶೋಧನೆಯಲ್ಲಿ ಇಂದು ವಿಶ್ವವೇ ಬೆರಗಾಗುವ ರೀತಿಯಲ್ಲಿ ಸಾಧನೆಯನ್ನು ಮಾಡಿದೆ. ಚಂದ್ರಯಾನ-3 ಯಶಸ್ವಿ ಕಾರ್ಯ ಸಾಧನೆಯ ಮೂಲಕ ಬೆಂಗಳೂರಿನ ಇಸ್ರೋ ನಿಯಂತ್ರಣ ಕೇಂದ್ರ ವಿಶ್ವದ ಗಮನವನ್ನು ಸೆಳೆದಿದೆ.

   ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಸಹಿತವಾಗಿ ಈ ಸಾಧನೆಯಲ್ಲಿ ದುಡಿದ ಇಸ್ರೋದ ವಿಜ್ಞಾನಿಗಳು, ಬೆಂಗಳೂರು ನಿಯಂತ್ರಣ ಕೇಂದ್ರದ ವಿಜ್ಞಾನಿಗಳು ಅಭಿನಂದನೆಗೆ ಬಾಜನರಾಗಿರುತ್ತಾರೆ. ಕರ್ನಾಟಕದ ಅನೇಕ ವಿಜ್ಞಾನಿಗಳು ಈ ಅದ್ಭುತ ಸಾಧನೆಯ ಹಿಂದೆ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಬೆಂಗಳೂರು ಇಸ್ರೋ ನಿಯಂತ್ರಣ ಕೇಂದ್ರದ ವಿಜ್ಞಾನಿಗಳ ಸಹಿತವಾಗಿ ಎಲ್ಲಾ ಸಾಧಕರಿಗೆ ರಾಜ್ಯದ ಜನತೆಯ ಪರವಾಗಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಗೌರವ ಸಮರ್ಪಣೆ ಮಾಡಬೇಕು ಎಂದು ಕೋರಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap