ಬಳ್ಳಾರಿ
ಸಂಡೂರು ಫಲಿತಾಂಶ ಸೋಲನ್ನ ಒಪ್ಪಿಕೊಳ್ತೆವೆ. ಈ ರೀತಿಯಲ್ಲಿ ಸೋಲ್ತೆವೆ ಅಂತ ಅಂದುಕೊಂಡಿಲ್ಲ. 5 ಸಾವಿರ ಮತಗಳಿಂದ ನಾವು ಗೆಲ್ಲುತ್ತೇವೆ ಎಂದು ಮಾಜಿ ಸಚಿವ ಜನಾರ್ದನರೆಡ್ಡಿ ಹೇಳಿದರು.9 ಸಾವಿರದ ಅಂತರದಿಂದ ಕಾಂಗ್ರೆಸ್ ಗೆಲುವಾಗಿದೆ. ಸಿಎಂ ಸಿದ್ದರಾಮಯ್ಯ ಪಂಚಾಯತ್ ಲೇವಲ್‌ನಲ್ಲಿ ಪ್ರಚಾರ ಮಾಡಿದ್ದಾರೆ. 100 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿದ್ದಾರೆ.ಹಣ, ಅಧಿಕಾರ ದುರುಪಯೋಗ ಮಾಡಿಕೊಂಡು ಚುನಾವಣೆ ಗೆದ್ದಿದ್ದಾರೆ. ಸಂಡೂರು ಸರ್ಕಲ್ ಇನ್ಸ್‌ಪೆಕ್ಟರ್ ಮಹೇಶ್ ಗೌಡ ಸೇರಿದಂತೆ ಅನೇಕ ಪೊಲೀಸರ ದುರ್ಬಳಕೆ ಚುನಾವಣೆಯಲ್ಲಿ ಆಗಿದೆ ಎಂದರು.
2028ರಲ್ಲಿ ಬಂಗಾರು ಹನುಮಂತು ಗೆಲ್ಲಲಿದ್ದಾರೆ ಎಂದ ಅವರು, ನಮ್ಮ ಗೆಲುವಿಗೆ ಇನ್ನೂ 5 ಸಾವಿರ ಮತಗಳು ಬೇಕಿತ್ತು. ಸಿಎಂ ಸಿದ್ದರಾಮಯ್ಯ ಅವರು ಬಂದು ಕ್ಯಾಂಪೇನ್ ಮಾಡಿದ್ದಾರೆ. ಹಣದ ಹೊಳೆ ಹರಿಸಿದ್ದಾರೆ, ಅಧಿಕಾರ ದುರುಪಯೋಗ ಆಗಿದೆ.
ವಾಲ್ಮೀಕಿ ಹಗರಣ, ಮುಡಾ ಹಗರಣ ಇವೆಲ್ಲವೂ ಇವತ್ತು ಕೆಲಸ ಮಾಡಿದೆ. ತುಕಾರಾಂ ಅವರಿಗೆ ಎಂಪಿ ಚುನಾವಣೆಯಲ್ಲಿ ಲೀಡ್ ಎಷ್ಟಿತ್ತು, ಈಗ ಎಷ್ಡಿದೆ ನೋಡಿ? ಎಂದ ರೆಡ್ಡಿ, 83 ಸಾವಿರ ಮತಗಳು ನಮಗೆ ಬಂದಿವೆ. ಮೊದಲ ಬಾರಿ ಸಂಡೂರು ಮತದಾರರು ಬಿಜೆಪಿ ಪರ ವಾಲಿದ್ದಾರೆ. ಈ ಸೋಲು ನಮಗೆ ಸೋಲೆ ಅಲ್ಲ. 30-40 ಸಾವಿರ ಮತಗಳ ಅಂತರದಿಂದ ನಾವು ಸೋತಿಲ್ಲ ಎಂದು ಹೇಳಿದ ಜನಾರ್ದನ ರೆಡ್ಡಿ, ರಾಜ್ಯದಲ್ಲಿ ಮೂರು ಕಡೆ ಕಾಂಗ್ರೆಸ್ ಬಂದಿದೆ. ಎಲ್ಲ ಕಡೆಗಳಲ್ಲೂ ಅಧಿಕಾರ ದುರುಪಯೋಗ ಆಗಿದೆ. ಆಡಳಿತ ಪಕ್ಷ ಇರೋ ಸಮಯದಲ್ಲಿ ಸಹಜವಾಗಿ ಆ ಪಕ್ಷ ಗೆಲ್ತದೆ. ಇಲ್ಲೂ ಅದೇ ಆಗಿದೆ ಎಂದರು.