ಗುಬ್ಬಿ
ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ಉಂಗ್ರ ಗಾಮದ ಸುತ್ತ ಮುತ್ತ ಕಳೆದ ಹಲವು ದಿನಗಳಿಂದ ಚಿರತೆ ಹಾವಳಿಯಿಂದ ಹೆಚ್ಚಾಗಿದ್ದು ದನ, ಕರು, ಮೇಕೆ, ನಾಯಿ ಇತರೆ ಪ್ರಾಣಿಗಳನ್ನು ತಿಂದುಹಾಕುತ್ತಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿಕೊಂಡ ಮೇರೆಗೆ ಅರಣ್ಯ ಇಲಾಖೆ ವತಿಯಿಂದ ಚಿರತೆ ಹಿಡಿಯಲು ಬೋನ್ ಇಡಲಾಗಿತ್ತು. ಕಳೆದ ರಾತ್ರಿ 3 ವರ್ಷದ ಚಿರತೆ ಬೋನ್‍ನಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ರಮೇಶ್, ಅರಣ್ಯಾಧಿಕಾರಿಗಳಾದ ಸಾಲಾರ್ ಅಹಮದ್, ಕರಿಯಪ್ಪ, ರಘುವೀರ್, ಗಂಗಹನುಮಯ್ಯ, ಶಂಕರ್ ಇತರರು ತೆರಳಿ ಪರಿಶೀಲನೆ ನಡೆಸಿ ನಂತರ ಚಿರತೆಯನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಟ್ಟರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ