“ಉಚಿತ ಸ್ವರ್ಣ ಬಿಂದು ಪ್ರಾಶನ”

ತುರುವೇಕೆರೆ:

              ಪಟ್ಟಣದ ಶ್ರೀರಾಮ್ ಪಾಲಿ ಕ್ಲಿನಿಕ್ ಹಾಗು ಡಾ||.ಎಸ್.ವಿ.ಗೋವಿಂದಪ್ಪ ಇವರ ಸಂಯುಕ್ತಾಶ್ರಯದಲ್ಲಿ “ಉಚಿತ ಸ್ವರ್ಣ ಬಿಂದು ಪ್ರಾಶನ” ಶಿಬಿರವನ್ನು ಶುಕ್ರವಾರ ಏರ್ಪಡಿಸಲಾಗಿತ್ತು.
              ದೆಬ್ಬೇಘಟ್ಟ ರಸ್ತೆಯ ಶ್ರೀರಾಮ್ ಮೆಡಿಕಲ್ ಆವರಣದಲ್ಲಿ ಶುಕ್ರವಾರ ಪುಷ್ಯ ನಕ್ಷತ್ರ ದಿನದ ಅಂಗವಾಗಿ ಅಂದು ಬೆಳಿಗ್ಗೆ 10:30 ರಿಂದ ಸಂಜೆ 7:00 ಗಂಟೆಯ ವರೆಗೆ ಉಚಿತವಾಗಿ ಸ್ವರ್ಣಬಿಂದು ಪ್ರಾಶನ ಕಾರ್ಯಕ್ರಮ ನಡೆಯಿತು.
              ಡಾ|| ರಾಜ್‍ಕುಮಾರ್ ಮಾತನಾಡಿ ಸ್ವರ್ಣಬಿಂದು ಪ್ರಾಶನದಿಂದ ಮನುಷ್ಯನಲ್ಲಿ ರೋಗನಿರೋದಕ ಶಕ್ತಿ, ನೆನಪಿನ ಶಕ್ತಿ ಹಾಗು ಚರ್ಮದ ಕಾಂತಿ ಹೆಚ್ಚಿ, ಮನೋ ಶಾರೀರಿಕ ತೊಂದರೆಗಳು ಕಡಿಮೆಯಾಗಿ ಮಾನಸಿಕ ಸ್ವಾಸ್ಥ್ಯ ಉತ್ತಮಗೊಳ್ಲಲಿದೆ. 3 ವರ್ಷ ಮೇಲ್ಪಟ್ಟ ಹಾಗೂ 16 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಈ ಚಿಕಿತ್ಸೆ ನೀಡಲಾಗುತ್ತಿದೆ. ಇಂತಹ ಶಿಬಿರಗಳ ಮುಖಾಂತರ ಸಾರ್ವಜನಿಕರು ಇದರ ಪ್ರಯೋಜನವನ್ನು ಪಡೆದುಕೊಂಡು ಮಕ್ಕಳ ಆರೋಗ್ಯ ಕಾಪಾಡಿಕೊಳ್ಳಿ ಎಂದರು. ಶಿಬಿರದಲ್ಲಿ ಡಾ|| ಎಸ್.ವಿ. ಗೋವಿಂದಪ್ಪ, ಡಾ|| ಚೈತ್ರಶ್ರೀ ಹಾಗು ಡಾ|| ವಿಜಯಲಕ್ಷ್ಮಿ ಶಿಬಿರದಲ್ಲಿ ಪಾಲ್ಗೊಂಡಿದ್ದು ಸುಮಾರು 180 ಕ್ಕೂ ಹೆಚ್ಚು ಮಕ್ಕಳಿಗೆ ಉಚಿತವಾಗಿ ಸ್ವರ್ಣ ಬಿಂದು ಪ್ರಾಶನ ನೀಡಲಾಯಿತು.

Recent Articles

spot_img

Related Stories

Share via
Copy link
Powered by Social Snap