ಹರಿಹರ:
ಉತ್ತಮ ಆರ್ಯೋಗಕ್ಕಾಗಿ ಕ್ರೀಡೆ ಮುಖ್ಯವಾಗಿದೆ ಎಂದು ಹರಿಹರ ಕ್ಷೇತ್ರದ ಜನಪ್ರಿಯ ಶಾಸಕರಾದ ಎಸ್.ರಾಮಪ್ಪ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅವರು ಮಾನ್ಯತ ಏಜುಕೇಶನ್ ಟ್ರಸ್ಟ್ ದಾವಣಗೆರೆ, ಮಾನ್ಯತ ಬಾಲಕಿಯರ ವಸತಿಯುತ ಪದವಿ ಪೂರ್ವ ಕಾಲೇಜ್ ಕುರುಬರಹಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ 2018-19ರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಜೀವನದಲ್ಲಿ ಯಶಸ್ವಿ ಕಾಣಬೇಕು ಎಂದು ಸಲಹೆ ನೀಡಿದರು.
ಇದರಿಂದ ದೇಶ, ರಾಜ್ಯ, ಜಿಲ್ಲೆ ಮತ್ತು ತಾಲೂಕಿಗೆ ಒಳ್ಳೆಯ ಹೆಸರು ತರುವಂತಾಗಬೇಕು. ಕ್ರೀಡೆಯಲ್ಲಿ ಉನ್ನತ ಸ್ಥಾನ ಪಡೆದರೆ ವಿದ್ಯಾಭ್ಯಾಸದಲ್ಲಿ ಕೂಡ ಉನ್ನತ ಸ್ಥಾನ ಪಡೆಯಬಹುದು. ವಿದ್ಯಾಭ್ಯಾಸ ಮಾಡುವ ಸಲುವಾಗಿ ಪೊಷಕರು ತುಂಬ ಶ್ರಮಪಡುತ್ತಿದ್ದಾರೆ. ಆದ್ದರಿಂದ ಕ್ರೀಡೆಯಲ್ಲಿ, ವಿದ್ಯಾಭ್ಯಾಸದಲ್ಲಿ ಒಳ್ಳೆಯ ಹೆಸರನ್ನು ತರುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಪೋಷಕರಿಗೆ ಗೌರವಕೊಟ್ಟಂತೆ ಕಲಿಸಿದ ಗುರುಗಳಿಗೆ ಅಷ್ಟೆ ಗೌರವ ಕೊಡಬೇಕು. ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಗಮನಕೊಟ್ಟು ಓದಿದಾಗ ಮಾತ್ರ ಮುಂದಿನ ಜೀವನದಲ್ಲಿ ಯಶಸ್ವಿ ಕಾಣಲು ದಾರಿಯಾಗುತ್ತದೆ. ಯುವಕರು ಕೂಡ ಕ್ರೀಡೆಯಲ್ಲಿ ಹೆಚ್ಚು ಭಾಗವಹಿಸಿ ಒಳ್ಳೆಯ ಸಾಧನೆ ಮಾಡಬೇಕು ಎಂದು ಹೇಳಿದರು.
ರಾಜಕೀಯ ತಾತ್ಕಾಲಿಕ, ಕೆ.ಎ.ಎಸ್., ಐ.ಪಿ.ಎಸ್ ಓದಿದರೆ ಶಾಶ್ವತ ಸ್ಥಾನ ತಲುಪಬಹುದು. ಕೆ.ಎ.ಎಸ್., ಐ.ಪಿ.ಎಸ್.ಎಂದರೆ ಮಿನಿಸ್ಟರ್ ಇದ್ದಾಗೆ. ಆದ್ದರಿಂದ ನೀವು ಕೆ.ಎ.ಎಸ್., ಐ.ಎ.ಎಸ್. ಮಾಡಿಕೊಂಡು ವಿದ್ಯಾರ್ಥಿಗಳು ಒಳ್ಳೆಯ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಹೇಳಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ದಾವಣಗೆರೆಯ ಎಚ್.ಕೆ. ಶೇಖರಪ್ಪ ಇವರು ಕ್ರೀಡಾ ಧ್ವಜಾರೋಹಣವನ್ನು ನೇರವೇರಿಸಿದರು. ಕ್ರೀಡಾ ಜ್ಯೋತಿಯನ್ನು ಶಾಸಕರಾದ ಎಸ್.ರಾಮಪ್ಪನವರು ನೆರವೇರಿಸಿದರು. ಹಾಗೂ ಗುಂಡು ಎಸೆಯುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಜಾತ ಬಿ.ರೇವಣಸಿದ್ದಪ್ಪ, ಎಮ್.ಕೆ.ಇ.ಟಿ ರಿಜಿಸ್ಟ್ರಾರ್ ಡಾ.ಬಿ.ಟಿ.ಅಚ್ಯುತ್, ಮಾನ್ಯತ ಬಾಲಕಿಯರ ವಸತಿಯುತ ಪದವಿ ಪೂರ್ವ ಕಾಲೇಜ್ ಕುರುಬರಹಳ್ಳಿಯ ಪ್ರಾಚಾರ್ಯರಾದ ಬಿ.ಎ. ನಾಡಗೌಡ, ಗಿರಿಯಮ್ಮ ಕಾಂತಪ್ಪ ಶ್ರೇಷ್ಟಿ ಪ.ಪೂ.ಕಾಲೇಜಿನ ದೈಹಿಕ ಶಿಕ್ಷಣ ನಿದೇರ್ಶಕರಾದ ಎಮ್.ಟಿ.ಮಾರವಳ್ಳಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ