ಉತ್ತರಬಡಾವಣೆ ಶಾಲೆಯ ಮಕ್ಕಳಿಗೆ ಉಚಿತ ನೋಟ್‍ಬುಕ್ & ಪೆನ್ನು ವಿತರಣೆ

ತುಮಕೂರು

     ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಉತ್ತರಬಡಾವಣೆ ಶಾಲೆಯಲ್ಲಿ ಇಂದು ತೋಟಗಾರಿಕೆ ಇಲಾಖೆಯ ನೌಕರರಾದ ಶ್ರೀ ಶ್ರೀಧರ್ ರವರು ಎಲ್ಲಾ ಮಕ್ಕಳಿಗೂ ಉಚಿತ ನೋಟ್‍ಬುಕ್ ಮತ್ತು ಪೆನ್ನುಗಳನ್ನು ವಿತರಿಸಿದರು. ಶಾಲಾವತಿಯಿಂದ ಶ್ರೀಧರ್ ರವರನ್ನು ಗೌರವಿಸಲಾಯಿತು. ಶ್ರೀಧರ್ ರವರು ಈ ಶಾಲೆಗೆ ಅರಣ್ಯ ಇಲಾಖೆಯಿಂದ ಸಸಿಗಳನ್ನು ಕೊಡಿಸುವಂತೆ ತಿಳಿಸಿದರು.

     ಈ ಸಮಾರಂಭದಲ್ಲಿ ತುಮಕೂರು ಮಹಾನಗರಪಾಲಿಕೆ ಎರಡನೆ ವಾರ್ಡ್‍ನ ನೂತನ ಸದಸ್ಯರಾದ ಮಂಜುನಾಥ್ ರವರು ಹಾಗೂ ಮೂರನೆ ವಾರ್ಡ್‍ನ ಸದಸ್ಯರಾದ ಲಕ್ಷ್ಮೀನರಸಿಂಹರಾಜು ರವರು ಉಪಸ್ಥಿತರಿದ್ದರು. ಇವರುಗಳನ್ನು ಶಾಲಾವತಿಯಿಂದ ಸನ್ಮಾನಿಸಲಾಯಿತು.

      ಇಬ್ಬರು ನೂತನ ಸದಸ್ಯರುಗಳು ಮಾತನಾಡುತ್ತಾ ನಾವುಗಳು ಈ ಶಾಲೆಯ ಹಳೆಯ ವಿದ್ಯಾರ್ಥಿಗಳು ಎಂದು ತಮ್ಮ ಬಾಲ್ಯದ ಜೀವನವನ್ನು ನೆನಸಿಕೊಳ್ಳುತ್ತಾ ಈ ಶಾಲಾ ಮೂಲಭೂತ ಸಮಸ್ಯೆಗಳನ್ನು ಒಂದೊಂದಾಗಿ ಬಗೆಹರಿಸುವ ಆಶಾಭಾವನೆಯನ್ನು ವ್ಯಕ್ತಪಡಿಸಿದರು.

       ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಪ್ರಸನ್ನಕುಮಾರ್ ರವರು ಈ ಶಾಲೆಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವುದು ಶಾಲಾ ಕಾಂಪೌಂಡು, ಬೋರ್‍ವೆಲ್ಲ್ ತುರ್ತಾಗಿ ಮಹಾನಗರಪಾಲಿಕೆ ವತಿಯಿಂದ ಮಂಜೂರು ಮಾಡಿಸಿಕೊಡುವಂತೆ ತಮ್ಮ ಬೇಡಿಕೆಯನ್ನು ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಡಿ.ಎಸ್. ಶಿವಸ್ವಾಮಿರವರು ಶಾಲಾ ಅಭಿವೃದ್ದಿ ಕೆಲಸಗಳ ಬಗ್ಗೆ ಚರ್ಚಿಸುತ್ತಾ ಹಾಗೂ ವಿದ್ಯಾರ್ಥಿವೇತನ ಕಡ್ಡಾಯವಾಗಿ ಎಲ್ಲಾ ಮಕ್ಕಳಿಗೂ ಮಾಡಿಸುವಂತೆ ತಿಳಿಸಿದರು.

       ಈ ಸಂದರ್ಭದಲ್ಲಿ ಮು.ಶಿ ರವರು ನೂತನ ಸದಸ್ಯರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವುದು ಹಾಗೂ ಒಂದು ಸಂಪು ಮಾಡಿಸಿಕೊಡುವಂತೆ ಲಿಖಿತ ರೂಪದ ಮನವಿಯನ್ನು ನೀಡಿದರು. ಅಲ್ಲದೆ ನೂತನ ಸದಸ್ಯರುಗಳು ಆಗಾಗ್ಗೆ ನಮ್ಮ ಶಾಲೆಗೆ ಭೇಟಿ ನೀಡಿ ಮಾರ್ಗದರ್ಶನ ನೀಡುವುದರೊಂದಿಗೆ ಶಾಲಾ ಅಭಿವೃದ್ದಿಗೆ ಕೈ ಜೋಡಿಸುವಂತೆ ಕೋರಿದರು. ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಹರೀಶ್‍ಕುಮಾರ್ ಮತ್ತು ಹಳೆ ವಿದ್ಯಾರ್ಥಿಗಳಾದ ಇಂದ್ರಕುಮಾರ್ ಹಾಜರಿದ್ದರು.

       ವಿ.ನಾಗೇಶ್ ಸ.ಶಿ ನಿರೂಪಿಸಿದರು, ಸಂದ್ಯ& ಚೈತ್ರ ಪ್ರಾರ್ಥಿಸಿದರು, ಬಿ.ಲತಾ ಸ.ಶಿ ಸ್ವಾಗತಿಸಿದರು. ಕೇಶವಮೂರ್ತಿ ದೈ.ಶಿ ವಂದನಾರ್ಪಣೆ ಮಾಡಿದರು. ದಿನಾಂಕ: 18-9-2018 ರಂದುಪದ್ಮಭೂಷಣ ಡಾ!!ಎಂ.ಸಿ ಮೋದಿ ಕಣ್ಣಿನ ಆಸ್ಪತ್ರೆ,ಬೆಂಗಳೂರು ವತಿಯಿಂದ ಉಚಿತ ಶಾಲಾ ಮಕ್ಕಳ ಕಣ್ಣಿನ ತಪಾಸಣಾ ಕಾರ್ಯಕ್ರಮ ನಡೆಯಿತು.ನುರಿತ ನೇತ್ರ ವೈದ್ಯರಸಲಹೆ & ಸೂಚನೆಗಳು, ದೃಷ್ಟಿಪರೀಕ್ಷೆ, ಔಷಧಿಗಳ ವಿತರಣೆ, ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link