ಬೆಳಗಾವಿ:
ಹಲವು ದಿನಗಳಿಂದ ಮುನಿಸಿಕೊಂಡಿದ್ದ ಶಾಸಕಧ್ವಯರು ಉಭಯ ಕುಶಲೋಪರಿ ವಿಚಾರಿಸಿಕೊಂಡ ಪ್ರಸಂಗ ಇಂದು ಬೆಳಗಾವಿಯ ಕೆ.ಎಲ್.ಎಸ್. ಅಮೃತ ಮಹೋತ್ಸವ ಸಮಾರಂಭದಲ್ಲಿ ನಡೆದಿದೆ.
ಬೆಳಗಾವಿಯ ಪಿ.ಎಲ್.ಡಿ.ಬ್ಯಾಂಕ್ ಚುನಾವಣೆಯ ದಿನದಿಂದ ಮುನಿಸಿಕೊಂಡಿದ್ದ ಶಾಸಕರಾದ ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮೀಹೆಬ್ಬಾಳ್ಕರ್ ಅವರು ಒಬ್ಬರಿಗೊಬ್ಬರು ಉಭಯಕುಶಲೋಪರಿ ವಿಚಾರಿಸಿಕೊಳ್ಳುವ ಮೂಲಕ ಅಲ್ಲಿ ನೆರೆದಿದ್ದ ಜನರಿಗೆ ಅಚ್ಚರಿ ಮೂಡಿಸಿದರು.
ಚುನಾವಣೆಯು ಈ ಇಬ್ಬರು ಶಾಸಕರಿಗೆ ಪ್ರತಿಷ್ಠೆಯಾಗಿತ್ತು. ಅಂದಿನಿಂದ ಇಲ್ಲಿನವರೆಗೂ ಈ ಶಾಸಕರು ವೇದಿಕೆ ಹಂಚಿಕೊಂಡಿದ್ದಿಲ್ಲ. ಹಾಗೂ ಒಬ್ಬರಿಗೊಬ್ಬರು ಮುಖಾಮುಖಿ ಭೇಟಿಯಾದರೂ ಕೂಡಾ ಮಾತನಾಡಿದ ಪ್ರಸಂಗವೂ ನಡೆದಿರಲಿಲ್ಲ.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸತೀಶ್ ಜಾರಕಿಹೊಳಿ ಅವರು, ಬಿ.ಜೆ.ಪಿ.ಯು ಆಪರೇಷನ್ ಕಮಲ ನಡೆಸುತ್ತಿರುವುದು ಸತ್ಯ. ಆದರೆ, ನನ್ನನ್ನು ಬಿಜೆಪಿಯ ಯಾವೊಬ್ಬ ನಾಯಕರೂ ಸಂಪರ್ಕಿಸಿಲ್ಲ ಎಂದು ಸ್ಪಷ್ಟ ಪಡಿಸಿದರು. ನಾನು, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಜತೆ ಮಾತುಕತೆ ನಡೆಸುವುದಿಲ್ಲ. ಬೆಳಗಾವಿ ಸಮಸ್ಯೆ ನಮ್ಮದಾಗಿರುವುದರಿಂದ ಈ ವಿಷಯ ಅವರಗೆ ಸಂಬಂಧಿಸಿದ್ದಲ್ಲ ಎಂದು ಹೇಳಿದರು. ಜಲಸಂಪನ್ನೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಬೆಳಗಾವಿ ವಿಷಯಕ್ಕೆ ತಲೆಹಾಕುವುದಿಲ್ಲ ಎಂದು ಹೇಳಿದ್ದಾರೆ ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
