ಬೆಂಗಳೂರು:
ಎಂಜಿನಿಯರ್‌ಗಳು ದೇಶ ಮತ್ತು ಸಮಾಜದ ನಿರ್ಮಾತೃಗಳು, ದೇಶವನ್ನು ಪ್ರಗತಿಯ ದಿಕ್ಕಿನತ್ತ ಕೊಂಡೊಯ್ಯುವವರು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದರು.
ಬೆಂಗಳೂರಿನ ಇಂಜಿನಿಯರ್‌ಗಳ ಸಂಸ್ಥೆ (ಭಾರತ) ಶುಕ್ರವಾರ ಆಯೋಜಿಸಿದ್ದ 56ನೇ ಎಂಜಿನಿಯರ್‌ಗಳ ದಿನಾಚರಣೆಯಲ್ಲಿ ಮುಖ್ಯಮಂತ್ರಿಗಳು ಮಾತನಾಡಿದರು.
“ಇಂದು ಇಂಜಿನಿಯರ್‌ಗಳ ದಿನ ಮತ್ತು ವಿಶ್ವ ಪ್ರಜಾಪ್ರಭುತ್ವ ದಿನ (ಸೆಪ್ಟೆಂಬರ್ 15), ಈ ಎರಡರ ಉದ್ದೇಶವು ಉತ್ತಮ ಸಮಾಜವನ್ನು ನಿರ್ಮಿಸುವುದಾಗಿದೆ. ಸರ್ ಎಂ ವಿಶ್ವೇಶ್ವರಯ್ಯನವರು ಭವಿಷ್ಯದ ಸಮಾಜ ಹೇಗಿರಬೇಕು ಎಂಬ ದೃಷ್ಟಿಯನ್ನು ಹೊಂದಿದ್ದರು ಮತ್ತು ನಮ್ಮಲ್ಲೂ ಅದೇ ದೂರದೃಷ್ಟಿ ಇರಬೇಕು. ಇವರು ಮೈಸೂರು ರಾಜರ ಬಳಿ ದಿವಾನರಾಗಿದ್ದ ಕಾರಣದಿಂದಲೇ ಮೈಸೂರಿನ ಅಭಿವೃದ್ಧಿಯಲ್ಲಿ ತಮ್ಮ ಹೆಜ್ಜೆ ಗುರುತುಗಳನ್ನು ಉಳಿಸಿ ಹೋಗಿದ್ದಾರೆ ಎಂದು ಹೇಳಿದರು.