ಮಂಡ್ಯ :
ಕರ್ನಾಟಕದ ಹೆಮ್ಮೆ ಎಂದೇ ಕರೆಯಲಾಗುವ ಕೆ.ಆರ್.ಎಸ್ ನಿಂದ ನಿತ್ಯ ಭಾರೀ ಪ್ರಮಾಣದಲ್ಲಿ ನೀರು ಹೊರಬಿಡಲಾಗುತ್ತಿದೆ, ಕೆ.ಆರ್.ಎಸ್ ಜಲಾನಯನ ಪ್ರದೆಶದ ಸುಮಾರು 500 ಎಕರೆಗೂ ಹೆಚ್ಚು ಕೃಷಿ ಭೂಮಿ ಹಾಳಾಗಿದೆ. ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ಅತಿಹೆಚ್ಚು ಮಳೆಯಾಗುತ್ತಿರುವುದರಿಂದ ಕೆಆರ್‌ಎಸ್ ಜಲಾಶಯ ಭರ್ತಿಯಾಗಿದ್ದು ಮಂಗಳವಾರ ಒಂದು ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿತ್ತು, ಒಂದೂವರೆ ಲಕ್ಷ ಕ್ಯೂಸೆಕ್ ನಂತೆ ಎರಡು ದಿನ ನೀರು ಬಿಡುಗಡೆ ಮಾಡಲಾಗಿದೆ. ಮಂಡ್ಯ ಜಿಲ್ಲೆಯ ಶ್ರೀನಿವಾಸ ಅಗ್ರಹಾರ, ಗಂಜಮ್, ದೊಡ್ಡಪಾಳ್ಯ, ಚಿಕ್ಕಪಾಳ್ಯ, ಹಂಗರಹಳ್ಳಿ ಹಾಗೂ ಮಹದೇವಪುರ ಹಳ್ಳಿಯಲ್ಲಿ ಜಮೀನು ಸಂಪೂರ್ಣವಾಗಿ ನಾಶವಾಗಿದೆ. ಕೆಆರ್‌ಎಸ್‌ನಿಂದ ಬಿಡುಗಡೆ ಮಾಡಿದ ನೀರು ಶ್ರೀರಂಗಪಟ್ಟಣ ಕೋಟೆಯ ಸುತ್ತಮುತ್ತಲು ಹೋಗುತ್ತದೆ. ವಿವೇಕಾನಂದ ರಾಮಕೃಷ್ಣ ಆಶ್ರಮ ಸೇತುವೆ ಕೂಡ ಮುಳುಗಡೆ ಹಂತ ತಲುಪಿದೆ.
ಮಲೆನಾಡಿನಲ್ಲಿ ಇದೇ ರೀತಿ ಮಳೆ ವಿಪರೀತವಾದರೆ ಜಲಾಶಯದ ಸುರಕ್ಷತಾ ದೃಷ್ಠಿಯಿಂದ ದಿನಂಪ್ರತಿ 1.50 ಲಕ್ಷ ಕ್ಯೂಸೆಕ್‌ನಿಂದ 1.25 ಕ್ಯೂಸೆಕ್ ನೀರುವರೆಗೂ ಹೊರಬಿಡಲಾಗುವುದು ಎಂದು ಕೆ.ಆರ್.ಎಸ್ ನಿರ್ವಾಹಣಾ ಮಂಡಳಿ ತಿಳಿಸಿದೆ. ಅಪಾಯಮಟ್ಟವನ್ನು ಮೀರಿ ನೀರು ಹರಿಯುತ್ತಿದೆ. ಮುತ್ತತ್ತಿ ಅರಣ್ಯಕ್ಕೆ ಪ್ರವೇಶವನ್ನು ನಿರ್ಬಂಧಿಸಲಾಗುತ್ತಿದೆ. ನದಿ ತೀರದಲ್ಲಿರುವ ಜನರನ್ನು ಸುರಕ್ಷತಾ ದೃಷ್ಠಿಯಿಂದ ಅಪಾಯವಿಲ್ಲದ ಜಾಗಗಳಿಗೆ ತೆರಳುವಂತೆ ಸೂಚಿಸಲಾಗಿದೆ.
ರಾಜ್ಯದ ಜಲಾಶಗಳ ನಿನ್ನೆಯ ಮಟ್ಟ:
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
