ಎಲ್ಲರಲ್ಲೂ ಸಾಮರಸ್ಯ ಭಾವನೆ ಮೇಳೈಸಬೇಕು

ಶಿರಾ

ಸಮಾಜದಲ್ಲಿ ಪ್ರೀತಿ, ವಿಶ್ವಾಸ, ಸಾಮರಸ್ಯ ಮೂಡಿಸುವಂತಹ ವಾತಾವರಣ ನಿರ್ಮಾಣ ಮಾಡಬೇಕು. ಹಿಂದೂ-ಮುಸ್ಲಿಂ ಎಂಬ ಭಾವನೆ ದೂರ ಮಾಡಿ ನಾವೆಲ್ಲ ಒಂದೇ ಎನ್ನುವ ಮೂಲಕ ಗ್ರಾಮಗಳಲ್ಲಿ ಸ್ನೇಹ ಸೌಹಾರ್ದತೆಯ ಬದುಕು ಕಟ್ಟಿಕೊಂಡರೆ ಪ್ರತಿ ಗ್ರಾಮಗಳು ನೆಮ್ಮದಿ ಕಾಣಲಿವೆ ಎಂದು ಪಿಎಸ್‍ಐ ವಿ.ನಿರ್ಮಲ ಹೇಳಿದರು. ಅವರು ಸೋಮವಾರ ತಾಲ್ಲೂಕಿನ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆ ಆವರಣದಲ್ಲಿ ಆ. 22 ರ ಬಕ್ರೀದ್ ಹಬ್ಬದ ಅಂಗವಾಗಿ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದರು.
ಹಬ್ಬವನ್ನು ಭಕ್ತಿ ಮತ್ತು ಸಡಗರ ಸಂಭ್ರಮದಿಂದ ಆಚರಣೆ ಮಾಡಿ, ಆದರೆ ಸಮಾಜದ ನೆಮ್ಮದಿ ಕದಡುವಂತಹ ಯಾವುದೇ ಕೆಲಸ ಮಾಡದಂತೆ ಎಚ್ಚರ ವಹಿಸಬೇಕು. ಬಕ್ರೀದ್ ಹಬ್ಬದಲ್ಲಿ ಇತರರನ್ನು ಪ್ರೀತಿ ಬಾಂಧÀವ್ಯದಿಂದ ಕಂಡಾಗ ಸ್ನೇಹ ಮತ್ತಷ್ಟು ಗಟ್ಟಿಗೊಳ್ಳಲಿದೆ ಎಂದರು.

ನೂರಾನಿ ಮಸೀದಿ ಮುತ್ವಲ್ಲಿ ವಜೀರ್‍ಖಾನ್, ಕಾರ್ಯದರ್ಶಿ ಮಹಮದ್ ಫಕೃದೀನ್, ಬರಗೂರು ಮುತ್ವಲ್ಲಿ ಪಕೃದೀನ್‍ಸಾಬ್, ಗ್ರಾಪಂ ಸದಸ್ಯ ಬಾಬಾಜಾನ್, ಲಿಂಗರಾಜು, ಮುಖಂಡ ರಾಜಣ್ಣ, ಬಂದಗೀರ್ ಸಾಬ್, ಸತ್ತಾರ್, ಬುಡೇನ್ ಸಾಬ್, ಷಫಿಸಾಬ್, ಅಪ್ಸರ್‍ಬೇಗ್, ಎಎಸ್‍ಐ ಧ್ರ್ರುವಾಚಾರ್, ಕಾಂತರಾಜು, ಹನುಮಂತಾಚಾರ್ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.

Recent Articles

spot_img

Related Stories

Share via
Copy link
Powered by Social Snap