ಉತ್ತರ ಕರ್ನಾಟಕದ ಜನರೆಂದರೆ ಅಷ್ಟೊಂದು ತಾತ್ಸಾರವೇ? :ಸರ್ಕಾರಕ್ಕೆ ಕಾಂಗ್ರೆಸ್‌ ಪ್ರಶ್ನೆ

ಬೆಂಗಳೂರು:

‘ಉತ್ತರ ಕರ್ನಾಟಕದ ಭಾಗದ ಕೆಲ ಜಿಲ್ಲೆಗಳಲ್ಲಿ  ನಿರ್ವಹಣೆ ಇಲ್ಲದೆ ಬಳಕೆಗೆ  ಯೋಗ್ಯವಲ್ಲದ ಬೆಂಗಳೂರಿನ BMTC ಬಸ್ಸುಗಳು ಎಲ್ಲೆಂದರಲ್ಲಿ ಕೆಟ್ಟು ನಿಂತಿರುವುದು ದುಖಃದ ಸಂಗತಿ ಎಂದು ಕಾಂಗ್ರೆಸ್ ಪಕ್ಷ ತನ್ನ ಟ್ವಿಟ್ಟರ್‌ ಖಾತೆ @INCKarnataka ಟ್ವೀಟ್‌ ಮಾಡುವ ಮೂಲಕ ಆರೋಪಿಸಿದೆ.

ಹಳೆಯ ಮತ್ತು ನಿರ್ವಹಣೆ ಇಲ್ಲದೆ  ಬಿಎಂಟಿಸಿ ಬಸ್ಸುಗಳನ್ನು ಉತ್ತರ ಕರ್ನಾಟಕಕ್ಕೆ ಸಾಗಿಸುವ ಮೂಲಕ ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ ಎಂದಿರುವ ಕಾಂಗ್ರೆಸ್‌  ಸರ್ಕಾರಕ್ಕೆ ಉತ್ತರ ಕರ್ನಾಟಕದ ಜನರೆಂದರೆ ಅಷ್ಟೊಂದು ತಾತ್ಸಾರವೇ? ಎಂಬ ಪ್ರಶ್ನೆನ್ನು ಸಹ  ಮಾಡಿದೆ.

 

‘ನಿರ್ವಹಣೆ ಇಲ್ಲದೆ ಬಳಕೆಗೆ ಯೋಗ್ಯವಲ್ಲದ ಬಿಎಂಟಿಸಿ ಬಸ್ಸುಗಳು ಉತ್ತರ ಕರ್ನಾಟಕದ ಭಾಗದಲ್ಲಿ ಎಲ್ಲೆಂದರಲ್ಲಿ ಕೆಟ್ಟು ನಿಂತಿದ್ದು,ಬಿಜೆಪಿ ಉ.ಕ ಗ್ರಾಮೀಣ ಜನರನ್ನು  ಎರಡನೇ ದರ್ಜೆಯ ನಾಗರಿಕರಂತೆ ಕಾಣುತ್ತಿದೆ’ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ಬಳಕೆಗೆ ಯೋಗ್ಯವಲ್ಲದ ಹಲವು ಬಿಎಂಟಿಸಿ ಬಸ್ಸುಗಳನ್ನು ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಬೆಂಗಳೂರಿನಿಂದ ಸ್ಥಳಾಂತರಿಸಲಾಗಿವೆ ಎಂಬ ಆರೋಪ ಕೇಳಿ ಬರುತ್ತಿದ್ದು, ಬಸ್ಗಳು ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿರುವುದರಿಂದ ತೀರ್ವ ತೊಂದರೆ ಆಗುತ್ತಿದ್ದು ಇದರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.